ಕನ್ನಡ ಸಾಹಿತ್ಯಕ್ಕೆ ಚೆನ್ನಣ್ಣ ವಾಲಿಕಾರ ಕೊಡುಗೆ ಅಪಾರಅಲ್ಲಮಪ್ರಭು ಬೆಟದೂರು

ಚನ್ನಣ್ಣ ವಾಲಿಕಾರ ಕೆಂಪು ಅಂಗಿ ಬಂಡಾಯದ ಸಂಕೇತ
ಕೊಪ್ಪಳ:  ಕನ್ನಡ ಸಾಹಿತ್ಯಕ್ಕೆ ಡಾ.ಚೆನ್ನಣ್ಣ ವಾಲಿಕಾರ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಬಂಡಾಯ ಸಾಹಿತ್ಯದ ಮೂಲಕ ಅಂಬೇಡ್ಕರ ಮತ್ತು ಎಡಪಂಥಿಯ ವಿಚಾರಗಳನ್ನು ಜನಮಾನಸಕ್ಕೆ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ಅಪರೂಪದ ಬಂಡಾಯ ಸಾಹಿತಿಯನ್ನು ಕಳೆದುಕೊಂಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ಬಂಡಾಯ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟದೂರು ಸಂತಾಪ ಸೂಚಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತ ಸಭಾ ಭವನದಲ್ಲಿ ಸೋಮವಾರ ನಡೆದ ದಿ.ಡಾ. ಚೆನ್ನಣ್ಣ ವಾಲಿಕಾರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚೆನ್ನಣ್ಣ ವಾಲಿಕಾರ ಅವರು ನಿಧನರಾದ ವಿಷಯ ತಿಳಿದು ಅತ್ಯಂತ ದುಖವಾಗಿದೆ. ನಾವು ಅವರು ಜೊತೆಯಲ್ಲಿ ಕಳೆದ ದಿನಗಳು ನೆನಪಿಗೆ ಬಂದು ಕಣ್ಣು ತುಂಬಿಕೊಳ್ಳುತ್ತವೆ. ದಲಿತ ಗೋಷ್ಠಿ ಆರಂಭಿಸಬೇಕು ಎಂದು ಧ್ವನಿ ಎತ್ತಿದ ಸಾಹಿತಿ ಚೆನ್ನಣ್ಣ ವಾಲಿಕಾರ. ಕವನ ಸಂಕಲನ, ಜಾನಪದ ಗೀತೆಗಳು, ಕಾದಂಬರಿ ಸೇರಿದಂತೆ ಅನೇಕ ಮಹಾ ಕಾವ್ಯಗಳನ್ನು ರಚಿಸಿದ್ದಾರೆ. ಬೆಳ್ಯಾ ಎನ್ನುವ ಕಾದಂಬರಿ ಅತಿಹೆಚ್ಚು ವ್ಯಂಜನವನ್ನು ಬಳಸಿ ಬರೆದ ಕಾದಂಬರಿ ಪ್ರಕಟವಾಗದೆ. ಚೆನ್ನಣ್ಣ ಅವರಿಗೆ ಅನ್ಯಾಯವಾಗಿದೆ. ಅಪ್ಪಟ ಗ್ರಾಮೀಣ ಭಾಷೆಯಲ್ಲಿ ಕೃತಿಯನ್ನು ರಚಿಸಿದ ಸಾಹಿತಿ ವಾಲಿಕಾರ.ರಾಯಚೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿದ ಕೀರ್ತಿ ಚೆನ್ನಣ್ಣ ವಾಲಿಕಾರ ಅವರಿಗೆ ಸಲ್ಲುತ್ತದೆ. ಎಚ್.ಎಸ್.ಪಾಟೀಲ್ ಮತ್ತು ಚನ್ನಣ್ಣ ವಾಲಿಕಾರ ಸ್ನೇಹವು ಅತ್ಯಂತ ದೀರ್ಘಾಯುಷ್ಯವಾಗಿತ್ತು. ಸದಾ ಕಾಲವೂ ಕೆಂಪು ಬಣ್ಣದ ಅಂಗಿಯನ್ನು ಧರಿಸುವ ಚೆನ್ನಣ್ಣ ವಾಲಿಕಾರ ಕೆಂಪು ಅಂಗಿ ಬಂಡಾಯದ ಸಂಕೇತವಾಗಿ ನಾಡಿನಲ್ಲಿ ದಲಿತರ ಧ್ವನಿಯಾಗಿದ್ದವರು. ಅಪರೂಪದ ವ್ಯಕ್ತಿತ್ವದ ವ್ಯಕ್ತಿಯನ್ನು ಹೈದ್ರಾಬಾದ್ ಕರ್ನಾಟಕದ ಕೊಂಡಿಯನ್ನು ಕಳೆದುಕೊಂಡಿದ್ದೇವೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆನ್ನಣ್ಣ ವಾಲಿಕಾರ ಒಳ್ಳೆಯ ವಾಗ್ಮಿ, ಚಿಂತಕರಾಗಿದ್ದರು. ಇಂತಹ ಮೇರುವ್ಯಕ್ತಿಯನ್ನು ಕಳೆದುಕೊಂಡು ಕಲ್ಯಾಣ ಕರ್ನಾಟಕ ಬರಿದಾಗಿದೆ. ಚೆನ್ನಣ್ಣ ಎಲ್ಲರ ಪ್ರೀತಿಯನ್ನು ಗಳಿಸಿದ ಚಿರಪರಿಚಿತ. ಉತ್ತರ ಕರ್ನಾಟಕ ಸೇರಿದಂತೆ ಮೈಸೂರು ಹಾಗೂ ರಾಜ್ಯದ ಬಹು ಜನತೆಗೆ ಬಹುಪ್ರೀಯರಾಗಿದ್ದರು. ಚೆನ್ನಣ್ಣ ಅಪರೂಪದ ವ್ಯಕ್ತಿ. ಯೋಮ ಯೋಮ ಕಾದಂಬರಿ ಸೇರಿದಂತೆ ಇನ್ನಿತರ ಕಾದಂಬರಿಗಳನ್ನು ಬರೆದಿದ್ದಾರೆ. ಹೈ.ಕ ಭಾಗದ ಎರಡು ಕಣ್ಣುಗಳನ್ನು ನಾವು ಕಳೆದುಕೊಂಡಿದ್ದೇವೆ. ಕಸಾಪದ ಬಹುದೊಡ್ಡ ಆಸ್ತಿಯನ್ನು ನಾವು ಕಳೆದುಕೊಂಡಿವೆ ಎಂದರು.ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿ, ಚೆನ್ನಣ್ಣ ವಾಲಿಕಾರ ನಿಧನದ ವಿಷಯ ನಮಗೆ ಆಘಾತವನ್ನುಂಟು ಮಾಡಿದೆ. ಚಳುವಳಿಯಲ್ಲಿ ತಮ್ಮನ್ನು ಸದಾಕಾಲ ತೊಡಗಿಸಿಕೊಂಡ ಧೀಮಂತ ಸಾಹಿತಿ. ಬಂಡಾಯ ಸಾಹಿತ್ಯದ ಪ್ರತೀಕವಾಗಿ ಕೆಂಪು ಅಂಗಿಯನ್ನು ಧರಿಸಿ ಹೋರಾಟ ನಡೆಸಿದವರು. ೨೦೦೩ರಲ್ಲಿ ನಡೆಸಿ ಮೈಸೂರು ದಸರಾ ಸಂದರ್ಭದಲ್ಲಿ ಬಂಡಾಯದ ಕಾವ್ಯವನ್ನು ಓದಿ ಅಂಬೇಡ್ಕರ್ ಚಿಂತನೆಯನ್ನು ಬಿತ್ತರಿಸಿದವರು ಚೆನ್ನಣ್ಣನವರು. ಕಲಬುರ್ಗಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಆಸೆಯನ್ನು ಹೊಂದಿದೆವು ಆದರೆ ಇಂದು ಅವರು ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದರು. ಈ ವೇಳೆ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ನಾಗರಾಜ ಡೊಳ್ಳಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error