ಕನ್ನಡ ಪುಸ್ತಕ ಮಾರಾಟ ಮೇಳ : ಪ್ರಕಾಶಕರು/ ಮಾರಾಟಗಾರರು ಭಾಗವಹಿಸಬಹುದು

ಕೊಪ್ಪಳ ಸೆ. 16 ): ಇದೇ ಸೆಪ್ಟೆಂಬರ್. 29 ರಿಂದ ಅಕ್ಟೊÃಬರ್. 07 ರವರೆಗೆ ಮೈಸೂರಿನಲ್ಲಿ ಏರ್ಪಡಿಸಲಾಗುವ “ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019” ದಲ್ಲಿ ಪ್ರಕಾಶಕರು/ ಮಾರಾಟಗಾರರು ಭಾಗವಹಿಸಬಹುದಾಗಿದೆ.
ಜಗತ್ತಿನ ಪ್ರಸಿದ್ಧ ಮೈಸೂರು ದಸರಾ ಉತ್ಸವ-2019ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್. 29 ರಿಂದ ಅಕ್ಟೊÃಬರ್. 07 ರವರೆಗೆ “ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019”ನ್ನು ಮೈಸೂರಿನ ಕಾಡಾ ಮೈದಾನದಲ್ಲಿ ಏರ್ಪಡಿಸಲಾಗುವುದು.  ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು/ ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ. 2,000 ಗಳ ಭದ್ರತಾ ಠೇವಣಿ ಡಿ.ಡಿ. ಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿನಲ್ಲಿ  ಸಲ್ಲಿಸಬೇಕು.  ಈ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರಿನ ಕಛೇರಿ ಅಥವಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಗಳಲ್ಲಿ ಅಥವಾ ಪ್ರಾಧಿಕಾರದ ವೆಬ್‌ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.  ಭರ್ತಿಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಸೆಪ್ಟೆಂಬರ್. 21ರ ಸಂಜೆ 5 ಗಂಟೆಯೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಅವರ ಹೆಸರಿಗೆ ಅಂಚೆಯ ಮೂಲಕ ಹಾಗೂ ಇ-ಮೇಲ್ ಞಚಿಟಿಟಿಚಿಜಚಿಠಿಠಿಡಿಚಿಜhiಞಚಿಡಿಚಿ@gmಚಿiಟ.ಛಿom ರ ಮೂಲಕ ಸಲ್ಲಿಸಲು ಕೋರಿದೆ.  ನಿರ್ಮಿಸಲಾಗುವ 50 ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ ಜೆ.ಸಿ. ರಸ್ತೆ ಬೆಂಗಳೂರು ದೂ.ಸಂ. 080-22484516/ 22107704, ಇವರನ್ನು ಸಂಪರ್ಕಿಸಬಹುದಾಗಿದೆ

Please follow and like us:
error

Related posts