You are here
Home > ಈ ಕ್ಷಣದ ಸುದ್ದಿ > ಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಗದಗಿನ ತೋಂಟದಾರ್ಯ ಸ್ವಾಮಿಜಿ ಇನ್ನಿಲ್ಲ…

ಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಗದಗಿನ ತೋಂಟದಾರ್ಯ ಸ್ವಾಮಿಜಿ ಇನ್ನಿಲ್ಲ…

ಗದಗ : ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಗದಗಿನ ತೋಂಟದಾರ್ಯ ಮಠದ ಡಾ. ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳು  ಲಿಂಗೈಕ್ಯರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಜಿ ಗದಗಿನ ಚಿರಾಯು ಆಸ್ಪತ್ರೆಗೆ ದಾಖಲಾಗಿದ್ದರು.  ಇಂದು ಬೆಳಗಿನ ಜಾವ ತೀವೃ ಹೃದಯಾಘಾತಕ್ಕೆ ಒಳಗಾದ ಶ್ರೀಗಳನ್ನು ನಗರದ ಚಿರಾಯು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.  ರಾಜ್ಯದ ಪ್ರಗತಿಪರ ಸ್ವಾಮಿಜಿಗಳಲ್ಲಿಯೇ ಮುಂಚೂಣಿಯಲ್ಲಿದ್ದ ಶ್ರೀಗಳು ಪ್ರಗತಿಪರ ಧೋರಣೆಯೊಂದಿಗೆ ಹಲವಾರು ಸಾಮಾಜಿಕ ಕಾರ್ಯಗಳಿಂದ ಜನರ ಗೌರವ, ಪ್ರೀತಿಗೆ ಪಾತ್ರರಾಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದರು. ಶ್ರೀಗಳು ಅಪಾರ ಶಿಷ್ಯಬಳಗವನ್ನು ಹಾಗೂ ಭಕ್ತ ಸಮೂಹವನ್ನು ಅಗಲಿದ್ದಾರೆ. ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ.

Top