ಕನ್ನಡ ನಾಡಿಗೆ ಪುರಾಣಿಕ ಕುಟುಂಬದ ಸೇವೆ ಸ್ಮರಣೀಯ-ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ, ೧೩- ಕನ್ನಡ ನಾಡಿಗೆ ಪುರಾಣಿಕ ಕುಟುಂಬದ ಸೇವೆ ಸ್ಮರಣೀಯವಾಗಿದ್ದು ನಾಲ್ಕು ತಲೆಮಾರುಗಳ ಅವರ ಕನ್ನಡದ ಸೇವೆ ಇತರರಿಗೆ ಮಾದರಿ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಅವರು ಕೊಪ್ಪಳ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಉದಯ ಶಂಕರ ಪುರಾಣಿಕರಿಗೆ ಕೊಪ್ಪಳ ಜಿಲ್ಲಾ ಕಸಾಪದಿಂದ ಅಧಿಕೃತ ಆಹ್ವಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ನಂತರದಲ್ಲಿ ಪುರಾಣಿಕ ಕುಟುಂಬ ಸೇವೆ ಸಲ್ಲಿಸಿದೆ. ಕಲ್ಲಿನಾಥ ಶಾಸ್ತ್ರಿಗಳು ರಚಿತ ಶರಣಬಸವೇಶ್ವರ ಪುರಾಣ ಮನೆ ಮಾತಾಗಿ, ಸಿದ್ದಯ್ಯ ಪುರಾಣಿಕರ ಕೊಡುಗೆ ಸ್ಮರಣೀಯ ಎಂದರು.
ಡಾ. ಉದಯ ಪುರಾಣಿಕರವರು ತಂತ್ರಜ್ಞಾನದಲ್ಲಿ ಕನ್ನಡ ಅಳವಡಿಕೆಯಲ್ಲಿ ರಾಷ್ಟ್ರೀಯ – ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಡಾ. ಮಹಾಂತೇಶ ಮಲ್ಲನಗೌಡರ ಮಾತನಾಡಿ ನೂತನ ತಂತ್ರಜ್ಞಾನದಲ್ಲಿ ಕನ್ನಡ ಅಳವಡಿಸುವ ಮೂಲಕ ಕನ್ನಡದ ಉಳಿವಿಗೆ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡದ ಭಂಢಾರದ ಕೋಶದಂತೆ ಸೇವೆ ಸಲ್ಲಿಸಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ ಉದಯ ಶಂಕರ ಪುರಾಣಿಕರವರು ಕನ್ನಡ ಕಟ್ಟುವ ಕೆಲಸದಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದು ಅವರ ಸೇವೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಗೌರವ ದೊರಕಿವೆ ಜಿಲ್ಲೆಯಿಂದ ಸಮ್ಮೇಳನ ಗೌರವಾಧ್ಯಕ್ಷರನ್ನು ಮಾಡುವ ಮೂಲಕ ಗೌರವಿಸುವ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಎಸ್.ಎಂ ಕಂಬಾಳಿಮಠ, ಚಾಮರಾಜ ಸವಡಿ, ಡಾ.ಫಕೀರಪ್ಪ ವಜ್ರಬಂಡಿ, ಲಕ್ಷ್ಮಣ ಹಿರೇಮನಿ, ಸಂತೋಷ ದೇಶಪಾಂಡೆ, ಚನ್ನಪ್ಪ ಕಡ್ಡಿಪುಡಿ, ತೋಟಪ್ಪ ಕಾಮನೂರ, ರಮೇಶ ತುಪ್ಪದ, ಗಿರೀಶ ಪಾನಘಂಟಿ, ರಾಮಚಂದ್ರ ಗೊಂಡಬಾಳ, ಶರಣೆಗೌಡ ಪಾಟೀಲ ಹೆರೂರ, ಚನ್ನಬಸಪ್ಪ ವಕ್ಕಳದ, ಜಿ.ಎಸ್.ಗೋನಾಳ, ಶೇಖರಗೌಡ ಕುದರಿಮೋತಿ, ಜಗದೀಶ ಗುತ್ತಿ, ಮಂಜುನಾಥ ಅಂಗಡಿ, ವೈಶಂಪಾಯನ ಇತರರು ಹಾಜರಿದ್ದರು.

Please follow and like us:
error