ಕನ್ನಡವನ್ನು ಉಳಿಸಿ ಬೆಳೆಸುವ ದೊಡ್ಡ ಜವಾಬ್ದಾರಿ ಪ್ರತಿಯೋರ್ವ ಹೊರಬೇಕಿದೆ-ಪ್ರಕಾಶ ಬಳ್ಳಾರಿ

ಕನ್ನಡ ಸವಿ ಭಾವದಲ್ಲಿತೇಲಾಡಬೇಕಿದೆ.ಕನ್ನಡಮ್ಮನ ಕನಸುಗಳಾದ ನಾವುಗಳು ಕನ್ನಡವನ್ನು ಉಳಿಸಿ ಬೆಳೆಸುವ ದೊಡ್ಡಜವಾಬ್ದಾರಿ ಪ್ರತಿಯೋರ್ವ ಹೊರಬೇಕಿದೆ. ನಾವು ಮಾಡಬೇಕಾದಕನ್ನಡಕಟ್ಟುವಕಾರ್ಯಎಲ್ಲಾಕನ್ನಡಿಗರ ಮೇಲಿದೆಎಂದು ಶ್ರೀ ಗವಿಸಿದ್ಧೇಶ್ವರ ಪದವಿ ಪದವಿಪೂರ್ವ ಮಹಾವಿದ್ಯಾಯದ ಕನ್ನಡ ಉಪನ್ಯಾಸಕ ಪ್ರಕಾಶ ಬಳ್ಳಾರಿ ಹೇಳಿದರು ನಗರದಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯಪದವಿ ಮಹಾವಿದ್ಯಾಲಯದಲ್ಲಿ೬೪ನೇ ಕನ್ನಡರಾಜ್ಯೋತ್ಸವ ನಿಮಿತ್ಯ ಹಮ್ಮಿಕೊಂಡ’ಸಿರಿಗನ್ನಡ ನುಡಿ ಸೊಬಗು’ ಶಿರ್ಷಕೆಯಡಿ ‘ಕನ್ನಡ ನಾಡು ನುಡಿ ಬೆಳೆದುಬಂದ ಯಶೋಗಾಥೆ’ ಎಂಬ ವಿಷಯದ ಮೇಲೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಜರುಗಿದ ಭಾಷಣ ಸ್ಪರ್ಧೆಕಾರ್ಯಕ್ರಮದಲ್ಲಿತಿರ್ಪುಗಾರರಾಗಿಭಾಗವಹಿಸಿ ಮಾತನಾಡಿದಅವರುಕನ್ನಡ ಭಾಷೆ, ನಾಡು ಬಹಳ ಸುಂದರವಾದುದು ಭಾರತೀಯ ಭಾಷೆಗಳಲ್ಲಿ ಮಹತ್ವದ ಸ್ಥಾನಮಾನ ಪಡೆದಿರುವ ಭಾಷೆಯಾಗಿದೆಅಂತಹ ಭಾಷೆ ಸವಿ ಆನಂದ ಪಡೆಬೇಕು ಹಾಗೂ ಕನ್ನಡಬೆಳೆಸಿಕೊಂಡು ಹೋಗಬೇಕು ಎಂದರು. ಇನ್ನೋರ್ವತೀರ್ಪುಗಾರರಾಗಿ ಆಗಮಿಸಿದ ಕನ್ನಡಉಪನ್ಯಾಸಕ ಮಂಜುನಾಥ ಬಡಿಗೇರ್ ಮಾತನಾಡಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯಕನ್ನಡ ವಿಭಾಗದ ಮುಖ್ಯಸ್ಥರಾದಡಾ.ಬಸವರಾಜ ಪೂಜಾರ ಮಾತನಾಡಿವಿದ್ಯಾರ್ಥಿಗಳ ಮನೋಭಾವವನ್ನು ಪ್ರಶಂಸಿಸಿದಅವರುಇಂತಹಅಪರೂಪದಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ವೇದಿಕೆಗಳು ಇರುವದೆ ಪ್ರತಿಭೆಗಳ ಹೊರತರುವದಕ್ಕೆ.ಇಂತಹ ಅನೇಕ ಸ್ಪರ್ದೆಗಳಲ್ಲಿ ಭಾಗವಹಿಸುವದರ ಮೂಲಕ ಉತ್ತಮವಾಗ್ಮಿಯಾಗಲು ಸಾಧ್ಯವಾಗುವದು ಮತ್ತುತಾವೇಲ್ಲರುಕನ್ನಟಕಟ್ಟುಕಾರ್ಯದಲ್ಲಿ ಭಾಗಿಯಾಗಬೇಕು, ಹಾಗಿದ್ದಾಗಕನ್ನಡ ಭಾಷೆಯ ಹಿರಿಮೆ ಮುಂದಿನ ಜಗತ್ತನಾಧ್ಯಂತ ಪಸರಿಸುವದುಎಂದು ಹೇಳಿದರು.ಕಾರ್ಯಕ್ರಮದಆಯೋಜಕರು ಹಾಗೂ ಮಾಹವಿದ್ಯಾಲಯದಕನ್ನಡ ಪ್ರಾಧ್ಯಾಪಕರಾದಡಾ.ನಾಗರಾಜದಂಡೋತಿ ಹೆಬ್ಬಾಳ ಪ್ರಾಸ್ತಾವಿಕ ಮಾತನಾಡುತ್ತಕನ್ನಡಿಗರ ಸ್ವಾಭಿಮಾನದ ಸಂಕೇತವಾದರಾಜ್ಯೋತ್ಸವ ಹಿಂದಿನ ಕಥೆ ಮಾತ್ರರೋಚಕ.ಅಲ್ಲಲ್ಲಿಚದುರಿದ್ದಕನ್ನಡವನ್ನೆಲ್ಲಒಂದು ಗೂಡಿಸಿ ಅದಕ್ಕೆಕರ್ನಾಟಕಎಂದು ನಾಮಕರಣ ಮಾಡಿದ ದಿನ. ಇಂದಿನ ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು.ಕರ್ನಾಟಕರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದುಆಚರಿಸಲಾಗುತ್ತದೆ. ಮೈಸೂರುರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನುಆಚರಿಸಲಾಗುತ್ತದೆ ಎಂಬ ಇತಿಹಾಸಜೊತೆಗೆಸ್ಪರ್ದೆಯಲ್ಲಿ ಸೋಲು-ಗೆಲುವು ಸಹಜ ಭಾಗವಹಿಸಿದ ಹೆಮ್ಮೆ, ಗರಿಮೆಜಾಗೃತವಾಗಿರಬೇಕು. ಅದರಲ್ಲೂಇಂತಹಕನ್ನಡಅಭಿಮಾನದ ಭಾಷಣ ಸ್ಪರ್ಧೆಯಲ್ಲಿ ಮಾತನಾಡುವದು, ಭಾಗವಹಿಸುವದುಕನ್ನಡ ನಾಡು ನುಡಿ ಮಾತನಾಡುಕ್ಕಿಂತಅಭಿಮಾನ ಮತ್ತೊಂದಿಲ್ಲ ಎಂದು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.ಸುಮಾರು ೩೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳುಸ್ಪರ್ಧೆಯಲ್ಲಿ ಭಾಗವಸಿದ್ದರು.ಭೂಮಿಕಾಅಂಗಡಿ (ಪ್ರಥಮ ಸ್ಥಾನ), ಶ್ವೇತಾ (ದ್ವೀತಿಯ ಸ್ಥಾನ), ಮಂಜಪ್ಪಾ ಮೇಟಿ (ತೃತೀಯ ಸ್ಥಾನ) ಪಡೆದರು.ಮಹಾವಿದ್ಯಾಲಯದ ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error