ಕನಕಗಿರಿ ಅಧ್ಯಕ್ಷ ಸ್ಥಾನಕ್ಕೆ ಶಂಶಾದಬೇಗ್ಂ ಅವಿರೋಧ ಆಯ್ಕೆ

ಕನಕಗಿರಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಶಂಶಾದಬೇಗ್ಂ ಅವರನ್ನು ಶಿಕ್ಷಕರು ಅಭಿನಂದಿಸಿದರು

ನೂತನ ತಾಲ್ಲೂಕಿಗೆ ಪ್ರಥಮ ಮಹಿಳಾ ಅಧ್ಯಕ್ಷೆ
ಅಧ್ಯಕ್ಷ ಸ್ಥಾನಕ್ಕೆ ಶಂಶಾದಬೇಗ್ಂ ಅವಿರೋಧ ಆಯ್ಕೆ

ಕನಕಗಿರಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ 2020-2025ನೇ ಸಾಲಿನ ಪದಾಧಿಕಾರಿಗಳ ಚುನಾವಣೆ ಭಾನುವಾರ ನಡೆಯಿತು ಮೂರು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿವೆ.
ಅಧ್ಯಕ್ಷ ಸ್ಥಾನಕ್ಕೆ ಶಂಶಾದಬೇಗ್ಂ ಮೆಹಬೂಬಹುಸೇನ, ಪ್ರಧಾನ ಕಾರ್ಯದರ್ಶಿ ಹುದ್ದೆ ರಾಮಚಂದ್ರ ಮಾಕಣ್ಣನವರ ಹಾಗೂ ಖಜಾಂಚಿ ಸ್ಥಾನಕ್ಕೆ ಚೇತನಕುಮಾರ ಎಚ್. ಎಸ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ತಾಲ್ಲೂಕು ಚುನಾವಣಾಧಿಕಾರಿ ಶರಣಬಸನಗೌಡ ಪಾಟೀಲ ಮಾತನಾಡಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ, ನಾಮಪತ್ರ ಸಲ್ಲಿಕೆಗೆ ಭಾನುವಾರ ಕಡೆಯ ದಿನವಾಗಿದ್ದರಿಂದ ಬೇರೆ ಯಾರು ನಾಮಪತ್ರ ಸಲ್ಲಿಸಿಲ್ಲ ಹೀಗಾಗಿ ಶಂಶಾದಬೇಗ್ಂ , ರಾಮಚಂದ್ರ ಹಾಗೂ ಚೇತನಕುಮಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಮೂರು ಸ್ಥಾನಗಳಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಶಿಕ್ಷಕರು ಸನ್ಮಾನಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಿ. ಜೆ. ಸಂಗಮ್ಮನವರ್ ಮಾತನಾಡಿ ನೂತನ ತಾಲ್ಲೂಕಿನ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಕೀರ್ತಿಗೆ ನೂತನ ಅಧ್ಯಕ್ಷೆ ಶಂಶಾದಬೇಗ್ಂ ಅವರು ಪಾತ್ರರಾಗಿದ್ದು ತಾಲ್ಲೂಕಿನ ಶಿಕ್ಷಕರ ಶೈಕ್ಷಣಿಕ ಸಮಸ್ಯೆ ಹಾಗೂ ಕುಂದು ಕೊರತೆಗಳಿಗೆ ಸ್ಪಂದಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಇಲ್ಲಿನ ನಿರ್ದೇಶಕಿ ಮಂಜುಳಾ ಶ್ಯಾವಿ ಅವರು ಸ್ಪರ್ಧಿಸಿದ್ದು ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ನೂತನ ಅಧ್ಯಕ್ಷೆ ಶಂಶಾದಬೇಗ್ಂ ಮಾತನಾಡಿ ಸಂಘದಲ್ಲಿ ಗುಂಪುಗಾರಿಕೆಗೆ ಅವಕಾಶ ಕೊಡದೆ ಜನಪ್ರತಿಧಿಗಳು, ಅಧಿಕಾರಿಗಳು, ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಹಿರಿಯ ಶಿಕ್ಷಕರ ಸಹಾಯ, ಸಹಕಾರ ಪಡೆದು ಉತ್ತಮ ಆಡಳಿತ ನೀಡುವುದಾಗಿ ಹೇಳಿದರು.
ತಾಲ್ಲೂಕಿನ ಶಿಕ್ಷಕರ ಸೇವೆ ಸಲ್ಲಿಸಲು ನೂತನ ತಾಲ್ಲೂಕಿನ ಅಧ್ಯಕ್ಷ ಸ್ಥಾನ ಮಹಿಳೆಗೆ ಅವಕಾಶ ನೀಡಿರುವದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಆಡಳಿತ ಮಂಡಳಿಯ ನಿರ್ದೇಶಕರಾದ ರಾಮಚಂದ್ರ ಮಾಕಣ್ಣನವರ, ಎಚ್. ಎಸ್. ಚೇತನಕುಮಾರ ಮಂಜುಳಾ ಶ್ಯಾವಿ ಮಾತನಾಡಿದರು.
ಶಿಕ್ಷಕರಾದ ಪರಸಪ್ಪ ಹೊರಪೇಟೆ, ಮಂಜುನಾಥ, ಸಂತೋಷ, ಡಿ. ಕೆ. ನಾಗರಾಜ ಶಿವಕುಮಾರ ಬಿಳಿಗುಡ್ಡ, ಸಿದ್ದಾರೂಢ, ಆನಂದ ನಾಯಕ್ ಇದ್ದರು.

Please follow and like us:
error