ಕಂಪ್ಲೀಟ್ ಲಾಕ್ ಡೌನ್ ಅನಿವಾರ್ಯ: ಸಚಿವ ಬಿ.ಸಿ ಪಾಟೀಲ

 

ಕೊಪ್ಪಳ : ಮೊದಲನೇ ಕೊರೊನಾ ಅಲೆಗಿಂತ ಎರಡನೇ ಅಲೆ ಭೀಕರವಾಗಿದೆ. ಈ ನಿಟ್ಟಿನಲ್ಲಿ ಕಂಪ್ಲೀಟ್ ಲಾಕ್ ಡೌನ್ ಅನಿವಾರ್ಯ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕುಷ್ಟಗಿ ಪಟ್ಟಣದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಜನತಾ ಕರ್ಫ್ಯೂನಿಂದ ಪ್ರಯೋಜನವಾಗುತ್ತಿಲ್ಲ. ಕೊರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಈ ಹಿನ್ನೆಲೆಯಲ್ಲಿ ಕಂಪ್ಲೀಟ್ ಲಾಕ್ ಡೌನ್ ಅನಿವಾರ್ಯವಾಗಿದೆ,ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ವಯಸ್ಸಾದವರು, ಇತರೇ ಕಾಯಿಲೆಗಳಿಂದ ಜನ ಮೃತ ಪಡುತ್ತಿದ್ದಾರೆ. ಯಾರು ಸಹ ಮನೆಯಿಂದ ಹೊರ ಬರಬಾರದೆಂದು ಮನವಿ ಮಾಡಿದರು

  • ಕುಷ್ಟಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ರೆಮಿಡಿಸಿವರ್ ಗಳ ಕೊರತೆ ಇಲ್ಲ. ಅಗತ್ಯವಾದರೆ ಇನ್ನೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
  • ಆಸ್ಪತ್ರೆಗೆ ಸದ್ಯಕ್ಕೆ ಅನಸ್ತೇಷಿಯಾ ಹಾಗೂ ಫಿಜಿಸಿಯನ್ ವೈದ್ಯ ಸಿಬ್ಬಂದಿಗಳ ಕೊರತೆಯಿದ್ದು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯು 42 ಬೆಡ್ ಗಳ ಸಾಮರ್ಥ್ಯ ಹೊಂದಿದ್ದು, ಈಗಾಗಲೇ 36 ಬೆಡ್ ಗಳು ಭರ್ತಿಯಾಗಿವೆ ಹಾಗೂ 6 ಬೆಡ್ ಗಳು ಖಾಲಿ ಇವೆ. ಮುಂಜಾಗ್ರತಾ ಕ್ರಮವಾಗಿ ಇನ್ನೂ 20 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗುವುದು.  ತಾವರಗೇರಾ ಆಸ್ಪತ್ರೆಯಲ್ಲೂ ಒಟ್ಟು 30 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗುವುದು.
Please follow and like us:
error