ಒಂದೇ ವಾಹನದಲ್ಲಿ ರಾಘವೇಂದ್ರ ಹಿಟ್ನಾಳ-ಅಮರೇಶ ಕರಡಿ ಪಯಣ

 ಹೊಂದಾಣಿಕೆ ರಾಜಕಾರಣ ಎರಡನೇ ಪೀಳಿಗೆಯಲ್ಲೂ ಮುಂದುವರೆದಿದ್ದು ಕಂಡು ಬಂತು ಅಂತಾ ಹಿರಿಯ ಅಭಿಮಾನಿಗಳು ಹೇಳ್ತಾ ಇದ್ರು.

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ  ಹೊಂದಾಣಿಕೆ ರಾಜಕಾರಣ ಯಾವತ್ತೂ ಇದೆ ಎಂದು ಇಡೀ ಜಿಲ್ಲೆಯ ಜನ ಮಾತನಾಡಿಕೊಳ್ಳುವ ಮತ್ತು ಖುದ್ದು ಕರಡಿ,ಹಿಟ್ನಾಳ ಬೆಂಬಲಿಗರೇ ಮಾತನಾಡಿಕೊಳ್ಳುವುದು ನಿಜ ಎನ್ನುವಂತೆ ಇಂದು ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಅಮರೇಶ ಕರಡಿ ನಡೆದುಕೊಂಡರು.

ಗಿಣಗೇರಾ‌ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿದ ವೇಳೆ ಸಚಿವರು ಮಾಧ್ಯಮದವರೊಂದಿಗೆ ಮಾತನಾಡುವಾಗ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡರು. ಪರಿಶೀಲನೆ ಮುಗಿದ ಬಳಿಕ ಗುಳದಳ್ಳಿಗೆ ತೆರಳುವಾಗ ಅಮರೇಶ್ ಕರಡಿ ಕುಳಿತಿದ್ದ ವಾಹನವೇರಿದ ಶಾಸಕ ರಾಘವೇಂದ್ರ ಹಿಟ್ನಾಳ ಅಮರೇಶ್ ಕರಡಿ ಪಕ್ಕದಲ್ಲಿ ಕುಳಿತುಕೊಂಡು ಒಟ್ಟಿಗೆ ತೆರಳಿದರು. ಈ ದೃಶ್ಯ ಮುಂಬರುವ ಜಿಲ್ಲಾ ಪಂಚಾಯತ್ ಎಲೆಕ್ಷನ್ ನ ಹೊಂದಾಣಿಕೆಯ ದಿಕ್ಸೂಚಿ ಎಂದು  ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು.

ಹಿಂದೆ ಬಸಟೆಪ್ಪ ಹೇಳ್ತಾ ಇದ್ರಂತೆ ಸಂಗಣ್ಣ ನಾನು ಇಲ್ಲ  ಅಂದ್ರ ನೀನು ಗೆಲ್ಲೊದು, ಬೇರೆ ಯಾರೂ ಇಲ್ಲ. ಎಲೆಕ್ಷನ್ ಟೈಂನ್ಯಾಗ ಎಲಕ್ಷನ್  ಉಳಿದಂತೆ  ಜೊತೆಗಿರೋಣ ಅಂತಾ ಇದ್ರಂತೆ. ಅದೇ ರೀತಿಯ ಹೊಂದಾಣಿಕೆ ರಾಜಕಾರಣ ಎರಡನೇ ಪೀಳಿಗೆಯಲ್ಲೂ ಮುಂದುವರೆದಿದ್ದು ಕಂಡು ಬಂತು ಅಂತಾ ಹಿರಿಯ ಅಭಿಮಾನಿಗಳು ಹೇಳ್ತಾ ಇದ್ರು.

Please follow and like us:
error