ಐ.ಟಿ.ಐ. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷಕ್ಕೆ ಉನ್ನತೀಕರಿಸಿ. ಪರೀಕ್ಷಾ ಶುಲ್ಕ ಆದೇಶ ಹಿಂಪಡೆಯಿರಿ-ಎ.ಐ.ಡಿ.ವೈ.ಓ

ಎ.ಐ.ಡಿ.ವೈ.ಓ ಸಂಘಟನೆ ನೇತೃತ್ವದಲ್ಲಿ ಗಂಗಾವತಿ ವಿವಿಧ ಕಾಲೇಜಿನ  ಐ ಟಿ ಐ ತರಬೇತುದಾರ ವಿದ್ಯಾರ್ಥಿಗಳು ಕೃಷ್ಣದೇವರಾಯ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ಮಾಡಿದರು.ಈ ಪ್ರತಿಭಟನೆ ಉದ್ದೇಶಿಸಿ ಎ.ಐ.ಡಿ.ವೈ.ಓ ಜಿಲ್ಲಾ  ಕಾರ್ಯದರ್ಶಿ  ಶರಣು ಗಡ್ಡಿ  ಮಾತನಾಡುತ್ತ
 ಕೋವಿಡ್ -19 ಕಾರಣದಿಂದಾಗಿ ಐಟಿಐ ವಿದ್ಯಾರ್ಥಿಗಳು ಸುಮಾರು 10 ತಿಂಗಳು ತರಬೇತಿಯನ್ನು ಕಳೆದುಕೊಂಡಿರುತ್ತಾರೆ . ಕಾರಣ ಐಟಿಐನ 1ನೇ ವರ್ಷದ ತರಬೇತುದಾರ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿ( ಡಿಜಿಇಟಿ ನವದೆಹಲಿ ಇವರು ಆದೇಶ ನೀಡಿರುತ್ತಾರೆ . ( ಆದೇಶ ಸಂಖ್ಯೆ ಡಿಜಿಇಟಿ -18024 / 03 / 2020 – ಟಿಟಿಸಿ ದಿನಾಂಕ 05-02-2021 , ಮಾನ್ಯ ಎನ್.ಎಸ್.ಗರ್ದ್ಯಾಳ್ ಡೈರೆಕ್ಟರ್ ಜನರಲ್ ಆಫ್ ಟ್ರೈನಿಂಗ್ ಡಿಜಿಟಿ ( Directorate General of Training ) ಎಮ್.ಎಸ್.ಡಿ.ಈ ( Ministry of Skill Development and Entrepreneurship ನವದೆಹಲಿ ) ಮೊದಲನೇ ವರ್ಷದ ಐಟಿಐ ವಿದ್ಯಾರ್ಥಿಗಳಿಗೆ ಮಾರ್ಚ್-2021 ರಲ್ಲಿ ಪರೀಕ್ಷೆಯನ್ನು ನಡೆಸಬೇಕು ಎಂದು ದಿನಾಂಕ : 15-02 2021 ರ ಆದೇಶದಲ್ಲಿ ಪರಿಕ್ಷಾ ವೇಳಾಪಟ್ಟಿಯನ್ನು ಮಾನ್ಯ ಆಯುಕ್ತರು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ , ಬೆಂಗಳೂರು ಇವರು ( ಆದೇಶ ಸಂಖ್ಯೆ : ಕೈ.ತಾ.ಉ / ತರಬೇತಿ / ವ್ಯಾ.ಪಾ.ವಿ / ಕು.ತಾ.ಯೋ -1 / ವಿ.ವಾ -44 / 202-21 ) ಆದೇಶದಲ್ಲಿ ತಿಳಿಸಿರುತ್ತಾರೆ . ಜೊತೆಯಲ್ಲಿ ಶುಲ್ಕವನ್ನು ದಿನಾಂಕ 17-02-2021ರ ಒಳಗಾಗಿ ತುಂಬಬೇಕು ಎಂದು ಆದೇಶ ನೀಡಿರುತ್ತಾರೆ . ಈ ನಡೆಯು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ . ಮೇಲಿನ ಎರಡು ಆದೇಶಗಳು ಪರಸ್ಪರ ಒಂದಕ್ಕೊಂದು ತದ್ವಿರುದ್ಧವಾಗಿವೆ . ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ಕನಿಷ್ಠ ಕಾಲಾವಕಾಶವನ್ನು ನೀಡದೇ ಇರುವುದು ಅಸಮಂಜಸ ನಡೆಯಾಗಿದೆ . ಒಂದೇ ದಿನದಲ್ಲಿ ಶುಲ್ಕವನ್ನು ಪಾವತಿಸಲು ವಿದ್ಯಾರ್ಥಿಗಳ ಪೋಷಕರಲ್ಲಿ ತಳಮಳ ಉಂಟಾಗಿದೆ . ಕನಿಷ್ಠ 10-15 ದಿನಗಳ ಕಾಲಾವಕಾಶವನ್ನು ನೀಡಬೇಕಿತ್ತು ಎನ್ನುವುದು ಪೋಷಕರ ಅಭಿಪ್ರಾಯವಾಗಿದೆ . 17 ತಾರೀಕು ಕೊನೆ ದಿನ ಎಂದು ತಿರ್ಮಾನಿಸಿರುವುದು ಆಘಾತಕಾರಿ ನಡೆಯಾಗಿದೆ . ತಕ್ಷಣದಲ್ಲಿ ಶುಲ್ಕಪಾವತಿ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ತರಬೇತಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆ ಹಾಗೂ ಶಿಕ್ಷಣ ಆಡಳಿತ ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದು ಹೋಗುತ್ತದೆ . ಕಾರಣ ಇದನ್ನು ತುರ್ತು ಎಂದು ಭಾವಿಸಿ ವಿದ್ಯಾರ್ಥಿಗಳು , ಪೋಷಕರು ಹಾಗೂ ತರಬೇತಿ ಸಂಸ್ಥೆಯವರಿಗೆ ಮೂಡಿರುವ ಗೊಂದಲ , ಆತಂಕಗಳನ್ನು ಬಗೆಹರಿಸುವಂತೆ ಕ್ರಮವಹಿಸಬೇಕು ಎಂದು ಎಐಡಿವೈಒ  ( ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಸ್ ಆರ್ಗನೈಸೇಷನ್ ) ಯುವಜನ ಸಂಘಟನೆ ಗಂಗಾವತಿ ತಾಲ್ಲೂಕ  ಘಟಕ ಆಗ್ರಹಿಸಿ ಮನವಿ ಮಾಡಿಕೊಳ್ಳುತ್ತದೆ. ವಿದ್ಯಾರ್ಥಿಗಳ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ  ಕೂಡಲೇ ಮಾನ್ಯ ಆಯುಕ್ತರು ಡಿ.ಜಿ.ಈ.ಟಿ. ಬೆಂಗಳೂರು ವಿದಾರ್ಥಿಗಳ ಸಮಸ್ಯೆಯನ್ನು ಮನಗಂಡು ಪರೀಕ್ಷೆ ಪ್ರಮೋಟ್ ಮಾಡಬೇಕು ಎಂದು  ಸರ್ಕಾರಕ್ಕೆ ಆಗ್ರಹಿಸಿದರು. ಬೇಡಿಕೆ ಮನವಿ ಪತ್ರವನ್ನು. ಮಾನ್ಯ ತಶೀಲ್ದಾರರ  ಮುಖಾಂತರ ಮಾನ್ಯ ಆಯುಕ್ತರು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕೌಶಲ್ಯ ಭವನ ಬೆಂಗಳೂರು ಸಲ್ಲಿಸಲಾಯಿತು.
ಈ ಹೋರಾಟದಲ್ಲಿ ಸಂಘಟಕರಾದ ಅಖಿಲ್, ಶಿವು ಚವಾಣ, ಫಯಾಜ್, ಐ ಟಿ ಐ ವಿದ್ಯಾರ್ಥಿಗಳಾದ ವಿಜಯ, ರಾಜೇಶ್, ಗೋಪಿ, ಅರವಿಂದ್, ಮಹೇಶ್, ಲಕ್ಷ್ಮಣ, ನಾಗರಾಜ, ಬಸವರಾಜ, ಉದಯ, ಮಂಜುನಾಥ, ರಮೇಶ, ದೇವಪ್ಪ, ದುರುಗಪ್ಪ,  ಮುಂತಾದ ನೂರಾರು ವಿದ್ಯಾರ್ಥಿಗಳು  ಭಾಗವಹಿಸಿದ್ದರು.
 ಬೇಡಿಕೆಗಳು
1 ) ಎರಡು ಸುತ್ತೋಲೆಗಳಲ್ಲಿರುವ ತದ್ವಿರುದ್ಧವಾದ ನಿದೇರ್ಶನಗಳನ್ನು ಬದಲಿಸಬೇಕು ಮತ್ತು ಏಕಾಏಕಿ  ಪರೀಕ್ಷೆ ಶುಲ್ಕ ಕಟ್ಟಲು ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು.
2 ) ಹಿಂದಿನ ಆದೇಶದಂತೆ ಕೊರೋನ ಹಿನ್ನೆಲೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷಕ್ಕೆ ಉನ್ನತೀಕರಿಸಬೇಕು.
Please follow and like us:
error