ಐಸಿಸಿ ಸಭೆಯ ನಿರ್ಣಯದಂತೆ ನೀರು : ರಮೇಶ ಜಾರಕಿಹೊಳಿ


ಕೊಪ್ಪಳ,   ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲ ತಂಡೆ ಕಾಲುವೆಗಳ ವ್ಯಾಪ್ತಿಯ ರೈತರ ಎರಡನೇ ಬೆಳೆಗೆ 113ನೇ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ ಲ. ಜಾರಕಿಹೊಳಿ ಹೇಳಿದರು.
ಅವರು ಇಂದು (ಮಾ.14) ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಟಿಬಿ ಡ್ಯಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ರಾಜ್ಯ ಮಟ್ಟದ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ತುಂಗಭದ್ರಾ ಡ್ಯಾಂನ ಅಭಿವೃದ್ಧಿಗಾಗಿ ಅಂತರ್‌ರಾಜ್ಯ ವ್ಯಾಪ್ತಿಯ ವಿಷಯಗಳ ಬಗ್ಗೆಯೂ ಇಂದು ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.  ಎಡದಂತಡ ಕಾಲುವೆ ಸ್ಥಿತಿ-ಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಇಒ ಗಳಿಗೆ ಸೂಚನೆ ನೀಡಲಾಗಿದೆ.  ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರವು ರೈತ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸದ್ಯ ಏತ ನೀರಾವರಿ ಯೋಜನೆಯಡಿ ಸುಮಾರು 5000 ಕೋಟಿ ರೂ.ಗಳ ಅನುದನವನ್ನು ನಮ್ಮ ಸರ್ಕಾರವು ನೀಡಿದೆ.  ಇನ್ನೂ ಹೆಚ್ಚಿನ ಅನುದಾನವನ್ನು ನೀರಾವರಿಗೆ ನೀಡಲಿದೆ ಎಂದರು.
ರೈತರಿಗೆ ಅನುಕೂಲವಾಗು ನಿಟ್ಟಿನಲ್ಲಿ ಹಾಗೂ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಮೂರು ಜಿಲ್ಲೆಗಳ ಜನ-ಜನುವಾರುಗಳಿಗೆ ತುಂಗಭದ್ರ ಜಲಾಶಯದ ನೀರನ್ನು ಒದಗಿಸಲಾಗುವುದು.  ಜಲಾಶಯದಲ್ಲಿ ಇದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು.  ಎರಡನೇ ಬೆಳೆಗೆ ಎಷ್ಟು ಪ್ರದೇಶಗಳಿಗೆ ನೀರನ್ನು ಕೊಡುವುದಕ್ಕೆ ಸಾಧ್ಯ ಇದೆ, ಎಂಬುದರ ಬಗ್ಗೆ ಚರ್ಚಿಸಿ, ಎರಡನೇ ಬೆಳೆಗೆ ಸಹ ನೀರನ್ನು ಬಿಡಲು ಅನುಕೂಲ ಮಾಡಿಕೊಡಲಾಗುವುದು.  ನಮ್ಮ ಉದ್ದೇಶ ಈ ಬಾಗದಲ್ಲಿರುವ ತುಂಗಾಭದ್ರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು, ಮತ್ತು ನೀರು ಪೋಲಾಗಬಾರದು ಎಂಬುವುದಾಗಿದೆ ಎಂದರು.
ಸಭೆಯಲ್ಲಿ ಬಳ್ಳಾರಿ ಸಂಸದ ದೇವೆಂದ್ರಪ್ಪ, ಮುನಿರಾಬಾದ್ ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ ತುರುವಿಹಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿಶ್ವನಾಥರೆಡ್ಡಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಶಾಸಕರುಗಳಾದ ಕೆ.ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ವೆಂಕಟರಾವ್ ನಾಡಗೌಡ, ಗಣೇಶ, ಸೇರಿದಂತೆ  ಮುನಿರಾಬಾದ್ ಕಾಡಾ ಟಿ.ಬಿ.ಪಿ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊರೊನಾ ಬಗ್ಗೆ ಜಾಗೃತರಾಗಿರುವಂತೆ ಮುಖ್ಯಮಂತ್ರಿಗಳು ಈಗಾಗಲೇ ಜನರಿಗೆ ಮನವಿ ಮಾಡಿದ್ದಾರೆ.  ಅದರಂತೆ ಜನರು ಸಹ ಜಾಗೃತರಾಗಿರುವಂತೆ ನಾನೂ ಮನವಿ ಮಾಡ್ತೇನೆ.  ಕೊರೊನಾ ಯಾವುದೇ ಜಾತಿ ನೋಡಿ ಬರಲ್ಲ.  ಈ ವೈರಸ್‌ನ್ನು ಎಲ್ಲರೂ ಕೂಡಿ ನಿವಾರಿಸಬೇಕಿದೆ.  ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ನಮ್ಮ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುತ್ತಿದೆ.  ವಾರದ ಬಳಿಕ ಎಲ್ಲ ವ್ಯಾಪಾರ ವಹಿವಾಟು ಸುಗಮವಾಗಲಿದೆ ಎಂಬ ವಿಶ್ವಾಸವಿದೆ.
ತುಂಗಭದ್ರಾ ಜಲಾಶಯಕ್ಕೆ ನವಲಿ ಗ್ರಾಮದಲ್ಲಿ ಸಮತೋಲನ ಜಲಾಶಯ ನಿರ್ಮಾಣ ಕುರಿತಂತೆ ಈ ಭಾಗದ ಶಾಸಕರು ನನ್ನನ್ನು ಭೇಟಿ ಮಾಡಿದ್ದಾರೆ.  ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.  ಇಂದು ಸಮತೋಲನ ಜಲಾಶಯದ ಸ್ಥಳ ಪರಿವೀಕ್ಷಣೆ ಮಾಡಿ ಎಲ್ಲವನ್ನೂ ಸರಿಪಡಿಸಿ ಆದಷ್ಟು ಬೇಗನೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ ರೈತರಿಗೆ ಅರ್ಪಿಸಲಾಗುತ್ತದೆ.  ತುಂಗಭದ್ರಾ ಜಲಾಶಯದಿಂದ ಕೈಗಾರಿಕೆಗಳು ನೀರು ಕದಿಯುತ್ತಿರುವ ಕುರಿತಂತೆ ಪರಿಶೀಲನೆ ನಡೆಸಲಾಗುವುದು.  ರೈತರೂ ಉಳಿಯಬೇಕು, ಕಾರ್ಖಾನೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ.  ನಾನು ನೀರಾವರಿ ಇಲಾಖೆಯ ಸಚಿವನಾದ ಬಳಿಕ ಬಳಿಕ ರಾಜ್ಯದ ನೀರಾವರಿ ನಿಗಮದ ಪರಿಶೀಲನೆ ಮಾಡಿದ್ದೇನೆ.  ಈಗ ಈ ಭಾಗದ ಜಲಾಶಯದ ಪರಿಶೀಲನೆಗೆ ಬಂದಿದ್ದೇನೆ.  ಸ್ಥಳೀಯ ಶಾಸಕರು, ಮುಖಂಡರೊAದಿಗೆ ಚರ್ಚಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

Please follow and like us:
error

Related posts