ಏ. 03 ಮತ್ತು 04 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಕೊಪ್ಪಳ,   ಕೊಪ್ಪಳ ಜೆಸ್ಕಾಂ ವತಿಯಿಂದ ವಿದ್ಯುತ್ ಕಾಮಗಾರಿ ನಡೆಯುತ್ತಿರುವ ಪ್ರಯುಕ್ತ ಕೊಪ್ಪಳ ನಗರದ ಹಾಗೂ ತಾಲ್ಲೂಕಿನ ವಿವಿಧೆಡೆ ಏಪ್ರಿಲ್ 03 ಮತ್ತು 04 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕೊಪ್ಪಳ 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸದಾಗಿ 20 ಎಮ್.ವಿ.ಎ ಪವರ್ ಟ್ರಾನ್ಸಫಾರ್ಮರ್ ಅಳವಡಿಸುವ ಕಾಮಗಾರಿ ಕೆಲಸ ನಡೆಸುತ್ತಿರುವ ಪ್ರಯುಕ್ತ, ಏ. 03ರ  ಶನಿವಾರ ಮತ್ತು ಏ. 04ರ ರವಿವಾರದಂದು ಬೆಳಿಗ್ಗೆ 08 ಗಂಟೆಯಿAದ ಮಾರನೇ ದಿನ ರಾತ್ರಿ 08 ಗಂಟೆಯವರೆಗೆ, ಎಫ್ -1 ಕಾಮನೂರ ಮತ್ತು ಎಫ್-6 ಬಸಾಪೂರ ಫೀಡರ್‌ಗೆ ಒಳಪಡುವ ಎಲ್ಲಾ ವಿದ್ಯುತ್ ಮಾರ್ಗದಲ್ಲಿ ಮತ್ತು ಈ ಕೇಂದ್ರಗಳಿAದ ವಿದ್ಯುತ್ ಸಂಪರ್ಕವಿರುವ ಎಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನು ಹೊರತುಪಡಿಸಿ ಈ ದಿನಗಳಲ್ಲಿ ಕೊಪ್ಪಳ ನಗರದ ವಿದ್ಯುತ್ ಮಾರ್ಗ/ ಫಿಡರ್‌ಗಳಾದ ಎಫ್-11 ಡಿ.ಸಿ. ಆಫೀಸ್, ಎಫ್-2 (ಕೆ.ಡಬ್ಲೂö್ಯ.ಎಸ್) ವಾಟರ್ ವರ್ಕ್ಸ್, ಎಫ್-8 ಭಾಗ್ಯನಗರ, ಎಫ್-9 ಬನ್ನಿಕಟ್ಟಿ ಹಾಗೂ ಎಫ್- 10 ಗವಿಮಠ ಪೀಡರ್‌ಗಳಲ್ಲಿ ಪ್ರತಿ ದಿನ ಸುಮಾರುಅ 3 ತಾಸು ವಿದ್ಯುತ್ ವ್ಯತ್ಯಯವಾಗುವ ಸಂಭವವಿರುತ್ತದೆ.  ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.
ವಿದ್ಯುತ್ ಕಾಮಗಾರಿ ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು.  ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ತಿಳಸಲಾಗಿದೆ.  ಈ ಸಮಯದಲ್ಲಿ ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ

Please follow and like us:
error