ಏಪ್ರಿಲ್ ತಿಂಗಳಲ್ಲಿ MSPL ಏರಪೋರ್ಟನಿಂದ ವಿಮಾನಯಾನ ಆರಂಭ-ಪರಣ್ಣ ಮನವಳ್ಳಿ

ನೂತನ ವಿಮಾನ ನಿಲ್ದಾಣಕ್ಕೆ 400 ಎಕರೆ ಭೂಮಿ ಖರೀದಿಸಲು ಸಿಎಂ ಭರವಸೆ

ಗಂಗಾವತಿ:   ಉಡಾನ್  ಯೋಜನೆ ಅನುಷ್ಠಾನಗೊಳಿಸಿ ವಿಮಾನಯಾನ ಪ್ರಾರಂಭಿಸಲು ಜಿಲ್ಲೆಯ ಸಮಸ್ತ ಜನಪ್ರತಿನಿಧಿಗಳು ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ.ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸಿಎಂ MSPL ಕಂಪನಿಗೆ ಸೂಚನೆ ನೀಡಿದ್ದಾರೆ, ಎಪ್ರೀಲ್ ವೇಳೆ ಕೊಪ್ಪಳದ MSPL ನಿಂದ ನಾಗರೀಕರ ವಿಮಾನಯಾನ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಶುಕ್ರವಾರ ಗಂಗಾವತಿ ನಗರದ ಎಪಿಎಂಸಿಯಲ್ಲಿ ಆಯೋಜಿಸಲಾಗಿದ್ದ ಉಡಾನ್ ಅನುಷ್ಠಾನಕ್ಕಾಗಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು ಕೊಪ್ಫಳ ಜಿಲ್ಲೆಯ ವಾಣಿಜ್ಯವಾಗಿ ಹಾಗೂ ಆರ್ಥಿಕವಾಗಿ ಬಲಗೊಳ್ಳುತ್ತಿದೆ. ಇದರ ಜೊತೆ ರಾಜ್ಯದ ನಾನಾ ಭಾಗಗಳಲ್ಲಿ ವಿಮಾನಯಾನ ಪ್ರಾರಂಭವಾಗಿದೆ. ಆದರೆ ಉಡಾನ್ ಯೋಜನೆ ಕೊಪ್ಪಳಕ್ಕೆ ಘೋಷಣೆ ಆಗಿದ್ದರೂ ಸಹ MSPL ನವರು ಮಾತ್ರ ವಿಮಾನಯಾನಕ್ಕೆ ಒಪ್ಪುತ್ತಿಲ್ಲ. ಇದರಿಂದ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣನವರ ನೇತೃತ್ವದಲ್ಲಿ  ಜಿಲ್ಲೆಯ ಎಲ್ಲಾ ಶಾಸಕರು ಸಿಎಂ ಅವರಿಗೆ ಮನವಿ ಮಾಡಿದ್ದೇವೆ.  ಇದಕ್ಕೆ ಸ್ಪಂದಿಸಿದರುವ  ಸಿಎಂ ಅವರು MSPL ಕಂಪನಿಯವರೊಂದಿಗೆ ಮಾತನಾಡಿದ್ದು, ಬಹುತೇಕ ಏಪ್ರಿಲ್ ವೇಳೆಗೆ ಉಡಾನ್ ಪ್ರಾರಂಭವಾಗಲಿದೆ , ಕೊಪ್ಪಳ ಜಿಲ್ಲೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಿಎಂ ಅವರಿಗೆ ಮನವಿ ನಾವೆಲ್ಲರೂ ಮನವಿ ಮಾಡಿದ್ದೇವೆ . ಇದಕ್ಕೂ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದು, ನಿಲ್ದಾಣ ನಿರ್ಮಾಣ ಮಾಡಲು 400 ಎಕರೆ ಜಮೀನು ಖರೀದಿಸಲು ಸಿಎಂ ಭರವಸೆ ನೀಡಿದ್ದಾರೆ. ಜಿಲ್ಲೆಯ ಕೊಪ್ಪಳ ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಮೀನು ಹುಡುಕಾಟ ನಡೆದಿದೆ ಎಂದು ಪರಣ್ಣ ಮುನವಳ್ಳಿ ಅವರು ತಿಳಿಸಿದರು .

ಈ ಸಂದರ್ಭದಲ್ಲಿ ಅನುಷ್ಠಾನ ಸಮಿತಿಯ ಅಸೀಪ್ ಅಲಿ, ರಾಘವೇಂದ್ರ ಪಾನಘಂಟಿ, ಜೆಡಿಎಸ್ ರಾಜ್ಯ ಮುಖಂಡರಾದ ಹೆಚ್.ಆರ್.ಶ್ರೀನಾಥ, ವಿರುಪಾಕ್ಷಪ್ಪ ಸಿಂಗನಾಳ, ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಇತರರು ಉಪಸ್ತಿತರಿದ್ದರು.

Please follow and like us:
error