ಎ.ಐ.ಡಿ.ವೈ.ಓ ಸಂಘಟನೆ ನೇತೃತ್ವದಲ್ಲಿ ಐ ಟಿ ಐ ತರಬೇತುದಾರ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ

 

Kannadanet : ಕೊಪ್ಪಳದ  ಐ ಟಿ ಐ ತರಬೇತುದಾರ ವಿದ್ಯಾರ್ಥಿಗಳು ಬೃಹತ್ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆ ಉದ್ದೇಶಿಸಿ ಎ.ಐ.ಡಿ.ವೈ.ಓ ಜಿಲ್ಲಾ  ಸಂಘಟನಾಕಾರ ಶರಣು ಪಾಟೀಲ್ ಮಾತನಾಡುತ್ತ

ಕೋವಿಡ್ -19 ಕಾರಣದಿಂದಾಗಿ ಐಟಿಐ ವಿದ್ಯಾರ್ಥಿಗಳು ಸುಮಾರು 10 ತಿಂಗಳು ತರಬೇತಿಯನ್ನು ಕಳೆದುಕೊಂಡಿರುತ್ತಾರೆ . ಕಾರಣ ಐಟಿಐನ 1ನೇ ವರ್ಷದ ತರಬೇತುದಾರ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿ( ಡಿಜಿಇಟಿ ನವದೆಹಲಿ ಇವರು ಆದೇಶ ನೀಡಿರುತ್ತಾರೆ . ( ಆದೇಶ ಸಂಖ್ಯೆ ಡಿಜಿಇಟಿ -18024 / 03 / 2020 – ಟಿಟಿಸಿ ದಿನಾಂಕ 05-02-2021 , ಮಾನ್ಯ ಎನ್.ಎಸ್.ಗರ್ದ್ಯಾಳ್ ಡೈರೆಕ್ಟರ್ ಜನರಲ್ ಆಫ್ ಟ್ರೈನಿಂಗ್ ಡಿಜಿಟಿ ( Directorate General of Training ) ಎಮ್.ಎಸ್.ಡಿ.ಈ ( Ministry of Skill Development and Entrepreneurship ನವದೆಹಲಿ ) ಮೊದಲನೇ ವರ್ಷದ ಐಟಿಐ ವಿದ್ಯಾರ್ಥಿಗಳಿಗೆ ಮಾರ್ಚ್-2021 ರಲ್ಲಿ ಪರೀಕ್ಷೆಯನ್ನು ನಡೆಸಬೇಕು ಎಂದು

ದಿನಾಂಕ : 15-02 2021 ರ ಆದೇಶದಲ್ಲಿ ಪರಿಕ್ಷಾ ವೇಳಾಪಟ್ಟಿಯನ್ನು ಮಾನ್ಯ ಆಯುಕ್ತರು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ , ಬೆಂಗಳೂರು ಇವರು ( ಆದೇಶ ಸಂಖ್ಯೆ : ಕೈ.ತಾ.ಉ / ತರಬೇತಿ / ವ್ಯಾ.ಪಾ.ವಿ / ಕು.ತಾ.ಯೋ -1 / ವಿ.ವಾ -44 / 202-21 ) ಆದೇಶದಲ್ಲಿ ತಿಳಿಸಿರುತ್ತಾರೆ . ಜೊತೆಯಲ್ಲಿ ಶುಲ್ಕವನ್ನು ದಿನಾಂಕ 17-02-2021ರ ಒಳಗಾಗಿ ತುಂಬಬೇಕು ಎಂದು ಆದೇಶ ನೀಡಿರುತ್ತಾರೆ . ಈ ನಡೆಯು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ . ಮೇಲಿನ ಎರಡು ಆದೇಶಗಳು ಪರಸ್ಪರ ಒಂದಕ್ಕೊಂದು ತದ್ವಿರುದ್ಧವಾಗಿವೆ . ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ಕನಿಷ್ಠ ಕಾಲಾವಕಾಶವನ್ನು ನೀಡದೇ ಇರುವುದು ಅಸಮಂಜಸ ನಡೆಯಾಗಿದೆ .

ಒಂದೇ ದಿನದಲ್ಲಿ ಶುಲ್ಕವನ್ನು ಪಾವತಿಸಲು ವಿದ್ಯಾರ್ಥಿಗಳ ಪೋಷಕರಲ್ಲಿ ತಳಮಳ ಉಂಟಾಗಿದೆ . ಕನಿಷ್ಠ 10-15 ದಿನಗಳ ಕಾಲಾವಕಾಶವನ್ನು ನೀಡಬೇಕಿತ್ತು ಎನ್ನುವುದು ಪೋಷಕರ ಅಭಿಪ್ರಾಯವಾಗಿದೆ . ನಾಳೆ ಕೊನೆಯ ದಿನ ಎಂದು ತಿರ್ಮಾನಿಸಿರುವುದು ಆಘಾತಕಾರಿ ನಡೆಯಾಗಿದೆ . ತಕ್ಷಣದಲ್ಲಿ ಶುಲ್ಕಪಾವತಿ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ತರಬೇತಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆ ಹಾಗೂ ಶಿಕ್ಷಣ ಆಡಳಿತ ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದು ಹೋಗುತ್ತದೆ . ಕಾರಣ ಇದನ್ನು ತುರ್ತು ಎಂದು ಭಾವಿಸಿ ವಿದ್ಯಾರ್ಥಿಗಳು , ಪೋಷಕರು ಹಾಗೂ ತರಬೇತಿ ಸಂಸ್ಥೆಯವರಿಗೆ ಮೂಡಿರುವ ಗೊಂದಲ , ಆತಂಕಗಳನ್ನು ಬಗೆಹರಿಸುವಂತೆ ಕ್ರಮವಹಿಸಬೇಕು ಎಂದು ಎಐಡಿವೈಒ  ( ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಸ್ ಆರ್ಗನೈಸೇಷನ್ ) ಯುವಜನ ಸಂಘಟನೆ ಕೊಪ್ಪಳ  ಜಿಲ್ಲಾ ಘಟಕ ಆಗ್ರಹಿಸಿ ಮನವಿ ಮಾಡಿಕೊಳ್ಳುತ್ತದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ  ಬೇಡಿಕೆಯ ಮನವಿ ಪತ್ರವನ್ನು ನಿರ್ದೇಶಕರಾದ ಗಂಗಾಧರ ಮುಖಾಂತರ ಮಾನ್ಯ ಆಯುಕ್ತರು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕೌಶಲ್ಯ ಭವನ ಬೆಂಗಳೂರು ಸಲ್ಲಿಸಲಾಯಿತು.   ಹೋರಾಟದಲ್ಲಿ ಐ ಟಿ ಐ  ವಿದ್ಯಾರ್ಥಿಗಳಾದ ಮುತ್ತಣ್ಣ ಶರಣು ಅಂಗಡಿ ದೇವರಾಜ ಶಿವಶಂಕರ, ವಿನೋದ, ಸಂತೋಷ್ ಕುರಿ, ವಿನಾಯಕ, ಮಲ್ಲಿಕಾರ್ಜುನ, ಪುನೀತ್,,ಕರಿಬಸವ ಅಂದಪ್ಪ, ರವಿಕುಮಾರ ಮುಂತಾದ ನೂರಾರು ವಿದ್ಯಾರ್ಥಿಗಳು  ಭಾಗವಹಿಸಿದ್ದರು.

 

Please follow and like us:
error