ಎಸ್.ವಿ.ಕೆ ಮಹಾವಿದ್ಯಾಲಯದಲ್ಲಿ ಒಂದು ದಿನ ಫುಡ್ ಫೆಸ್ಟ್

ನಗರದ ಶ್ರೀಗವಿಸಿದ್ದೇಶ್ವರ ಟ್ರಸ್ಟ್ ನ ಎಸ್.ವಿ.ಕೆ ಬಿಬಿಎ, ಬಿಕಾಂ, ಬಿಸಿಎ ಪದವಿ ಮಹಾವಿದ್ಯಾಲಯದಲ್ಲಿ ಒಂದು ದಿನ ಫುಡ್ ಫೆಸ್ಟ್ ಮಂಗಳವಾರ ಕಾಲೇಜಿನ ಆವರಣದಲ್ಲಿ ನಡೆಯಿತು.
ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಭಾಗ್ಯನಗರದ ಸರಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಉದಯಸಿಂಗ್ ವಿ.ಎಸ್, ಹಳೆ ವಿದ್ಯಾರ್ಥಿನಿ ಕು.ರಂಜಿತಾ ವಿ ಕೋತ್ಬಾಳ್ ಹಾಗೂ ಎಸ್‌ವಿಕೆ ಕಾಲೇಜಿನ ಪ್ರಾಂಶುಪಾಲರಾದ ರಾಜರಾಜೇಶ್ವರ ರಾವ್ ಚಾಲನೆ ನೀಡಿದರು. ಪುಡ್ ಫೆಸ್ಟ್ ನಲ್ಲಿ ಬಿಬಿಎ ಬಿಸಿಎ ಹಾಗೂ ಬಿಕಾಂನ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳು ಸ್ಟಾಲ್ ಗಳನ್ನು ಹಾಕುವುದರ ಮೂಲಕ ವಿವಿಧ ಬಗೆಯ ಫಾಸ್ಟ್ ಫುಡ್ ಗಳಾದ ಪಾನಿಪುರಿ, ಫಿಂಗರ್ ಚಿಪ್ಸ್ ಸೇರಿದಂತೆ ಫ್ರೂಟ್ ಸಲಾಡ್, ತಂಪು ಪಾನಿಯಗಳು ಐಸ್ ಕ್ರೀಮ್ ಸೇರಿದಂತೆ ದೇಸಿ ತಿನಿಸುಗಳ ಸ್ಟಾಲ್ ಹಾಕುವ ಮೂಲಕ ಜನರ ಗಮನಸೆಳೆದರು. ಇಷ್ಟೆ ಅಲ್ದೆ ಬಂದವರಿಗೆ ಹಲವು ಗೇಮ್ಸ್‌ಗಳನ್ನು ಸಹ ಆಯೋಜಿಸಲಾಗಿತ್ತು. ಕೊಪ್ಪಳದ ವಿವಿಧ ಪಿಯು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬಂದು ಫುಡ್ ಫೆಸ್ಟ್ ನ ಪದಾರ್ಥಗಳನ್ನು ಸವಿದರು. ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿರುವುದು ವಿಶೇಷವಾಗಿತ್ತು.
ಫೆಸ್ಟ್ ನಲ್ಲಿ ಉಪನ್ಯಾಸಕರಾದ ರಾಮು ವಿ ವಡಕಿ, ಈಶಪ್ಪ ಮೇಟಿ, ಜಯಸಿಂಹ ಎಂ.ಆರ್, ಮಹೇಶ್ ರಾವ್,ಬಸವಂತಪ್ಪ ಕಾರ್ಯಕ್ರಮದ ಉಸ್ತುವಾರಿ ತೆಗೆದುಕೊಂಡಿದ್ದರು, ಇನ್ನು ಕಾಲೇಜಿನ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳಿ ಸಾಥ್ ನೀಡಿದರು.

Please follow and like us:
error