ಎಸ್.ಪಿ. ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಂದ ‘ಸಂದಿಗ್ಧ’ ಚಿತ್ರದ ವೀಕ್ಷಣೆ


ಕೊಪ್ಪಳ ಜ.  ಕೊಪ್ಪಳ ಬಾಲ್ಯ ವಿವಾಹ ನಿರ್ಮೂಲನೆ ಹಾಗೂ ಜಾಗೃತಿ ಕುರಿತಾದ ‘ಸಂದಿಗ್ದ’ ಚಲನಚಿತ್ರವನ್ನು ಕೊಪ್ಪಳ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಬುಧವಾರದಂದು ವೀಕ್ಷಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿ ರೇಣುಕಾ ಸುಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣಾ ಪಾಂಚಾಳ್, ಹಿರಿಯ ಮಕ್ಕಳ ಪೊಲೀಸ್ ಅಧಿಕಾರಿ ಜೆ.ಆರ್. ನಿಕ್ಕಂ, ಅರಕ್ಷಕ ನಿರೀಕ್ಷಕರಾದ ಚಂದ್ರಪ್ಪ, ಮಲ್ಲನಗೌಡ್ರ, ಅರಕ್ಷಕರ ಉಪ-ನೀರಿಕ್ಷಕರಾದ ಅಮರೇಶ ಹುಬ್ಬಳ್ಳಿ, ಚಂದ್ರಹಾಸ, ಗುರುರಾಜ, ಜಿಲ್ಲಾ ಪೊಲೀಸ್ ಕಛೇರಿಯ ಆಡಳಿತಾಧಿಕಾರಿ ಮಲ್ಲಿನಾಥ, ಕಛೇರಿ ಅಧೀಕ್ಷಕ ಶರಣಬಸವ ಸೇರಿದಂತೆ ಕೊಪ್ಪಳ ನಗರದ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ಸಿಬ್ಬಂದಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಬಸಪ್ಪ ಹಾದಿಮನಿ, ಜಗದೀಶ್ವರಯ್ಯ ಹಿರೇಮಠ ಮತ್ತು ಪೊಲೀಸ್ ಸಿಬ್ಬಂದಿಯವರು ಸೇರಿದಂತೆ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತಿತರರು “ಸಂದಿಗ್ಧ” ಚಲನಚಿತ್ರವನ್ನು ಶಿವ ಚಿತ್ರ ಮಂದಿರದಲ್ಲಿ ವೀಕ್ಷಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿ ರೇಣುಕಾ ಸುಕುಮಾರ ಚಿತ್ರ ವೀಕ್ಷಿಸಿದ ನಂತರ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಚಿತ್ರವು ನೈಜತೆಯಿಂದ ಕೂಡಿದೆ. ಕೊಪ್ಪಳ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಎಲ್ಲಾ ಸಾರ್ವಜನಿಕರು, ಅಧಿಕಾರಿಗಳು ಕೈ ಜೋಡಿಸಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣಾ ಪಾಂಚಾಳ್ ಅವರು ಮಾತನಾಡಿ, ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ. ಘನ ಸರ್ವೋಚ್ಛ ನ್ಯಾಯಾಲಯವು ಅಪ್ರಾಪ್ತ ವಯಸ್ಸಿ ಪತ್ನಿಯೊಂದಿಗಿನ, ಲೈಂಗಿಕ ಸಂಪರ್ಕವು ಅಪರಾಧ ಎಂದು ಆದೇಶಿಸಿದೆ. ಸಂದಿಗ್ಧ ಚಲನಚಿತ್ರವು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಸಮುದಾಯದಲ್ಲಿ ಬಾಲ್ಯ ವಿವಾಹ ದುಷ್ಪರಿಣಾಮಗಳ ಬಗ್ಗೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ರ ಬಗ್ಗೆ ಜಾಗೃತಿಯನ್ನು ಮೂಡಿಸಿ, ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯುನಿಸೆಫ್, ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಕಾರ್ಯತಂತ್ರಗಳನ್ನು ಅನುಷ್ಠಾನ ಮಾಡುತ್ತಿದೆ. ಈ ನಿಟ್ಟಿನಲ್ಲಿ ‘ಸಂದಿಗ್ದ’ ಚಲನಚಿತ್ರವು ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವ ಚಲನಚಿತ್ರವಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಮುದಾಯದ ಎಲ್ಲರೂ ಈ ಚಿತ್ರವನ್ನು ವೀಕ್ಷಿಸುವಂತಾಗಲು ಜಿಲ್ಲೆಯ ಎಲ್ಲಾ ೨೩ ಚಿತ್ರಮಂದಿರಗಳಲ್ಲಿ ಕಳೆದ ಜ. ೧೬ ರಿಂದ ೩೧ ರವರೆಗೆ ಪ್ರತೀ ದಿನ ಬೆಳಿಗ್ಗೆ ೦೯ ರಿಂದ ೧೦-೪೦ ರವರಗೆ ಪ್ರದರ್ಶನ ಏರ್ಪಡಿಸಲಾಗಿರುವುದರಿಂದ ಜಿಲ್ಲೆಯ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನ ಮಕ್ಕಳು, ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿ ಈ ಚಿತ್ರ ವೀಕ್ಷಿಸಲು ಅನುಕೂಲವಾಗಿದೆ ಎಂದರು.
ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕ ಹರೀಶ್ ಜೋಗಿ, ಪೊಲೀಸ್ ಇಲಾಖೆಯ ಅಧಿಖಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error