ಎಸ್ಸಿ ಪಟ್ಟಿಯಿಂದ ಕೈ ಬಿಡದಂತೆ ಆಗ್ರಹಿಸಿ ಪತ್ರ ಚಳವಳಿ

ಕೊಪ್ಪಳ: ಬೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಎಸ್ಸಿಯಿಂದ ಕೈಬಿಡದಂತೆ ಆಗ್ರಹಿಸಿ ಬುಧವಾರ ಕೊಪ್ಪಳ ಜಿಲ್ಲೆಯ ವಿವಿಧೆಡೆ  ಲಂಬಾಣಿ ಸಮುದಾಯದ ಜನರು ಸಿಎಂ ಯಡಿಯೂರಪ್ಪ ಅವರ ವಿಳಾಸಕ್ಕೆ ಪತ್ರ ಬರೆದು ಪತ್ರ ಚಳವಳಿ ನಡೆಸಿದರು.
ಕೊಪ್ಪಳದ ಮುಖ್ಯ ಅಂಚೆ ಕಚೇರಿಯಲ್ಲಿ ಸಾಲುಗಟ್ಟಿದ ಲಂಬಾಣಿ ಸಮುದಾಯದ ಜನರು ಕೈಯಲ್ಲಿ ಪತ್ರ ಹಿಡಿದು ಅಂಚೆ ಪೆಟ್ಟಿಗೆಯಲ್ಲಿ ಹಾಕಿದರು. ಈ ವೇಳೆ ಮಾತನಾಡಿದ ಮುಖಂಡ ಕೊಪ್ಪಳ ಜಿಲ್ಲಾ ಆಲ್ ಇಂಡಿಯಾದ ಬಂಜಾರ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮಣನಾಯ್ಕ ಅವರು, ಲಂಬಾಣಿ ಸಮುದಾಯ ತೀರಾ ಹಿಂದುಳಿದ ವರ್ಗವಾಗಿದ್ದು,, ಇಂದಿಗೂ ನಿಲ್ಲಲು ನೆಲೆ ಇಲ್ಲದೇ ರಾಜ್ಯದ ವಿವಿಧೆಡೆ ನೃತ್ಯ ಮಾಡುತ್ತಾ, ಜನರನ್ನು ರಂಜಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಸದ್ಯ ಎಸ್ಸಿ ಮೀಸಲಿನಡಿ ಸರಕಾರದ ಹಲವು ಸೌಲಭ್ಯಗಳ ಪ್ರಯೋಜನ ಸಿಗುವಂತಾಗಿದ್ದು, ಸರಕಾರ ೀ ಯೋಜನೆಗೆ ಕತ್ತರಿ ಹಾಕುವ ಕೆಲಸ ಮಾಡಬಾರದು. ಲಂಬಾಣಿ ಸೇರಿದಂತೆ ಹಲವು ಸಮುದಾಯಗಳನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುವ ಬಗ್ಗೆ ವದಂತಿಗಳು ಕೇಳಿ ಬರುತ್ತಿದ್ದು, ಸರಕಾರ ಈ ಕೂಡಲೇ ಇಂಥ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಭರತ್ ನಾಯ್ಕ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ದೀಪಾ ರಾಠೋಡ, ಶಿವಪ್ಪ, ರಾಘವೇಂದ್ರ ಜಾಧವ, ಚಂದ್ರಕಾಂತ, ಪರಶುರಾಮ ಕಟ್ಟಿಮನಿ, ನಾಗರಾಜ್ ಮಾಳಗಿ, ಲಿಂಗರಾಜ್ ಕಟ್ಟಿಮನಿ, ಕುಮಾರ್ ರಾಠೋಡ, ಶರಣು ಕಾರಬಾರಿ. ಯಮನೂರ ರಾಥೋಡ್ ಕುಮಾರ್ ಮಾಳಗಿ, ಟಿಕ್ಯಾ ನಾಯ್ಕ, ಮಂಜುನಾಥ್ ನಾಯ್ಕ, ಪ್ರಶಾಂತ್ ಪವಾರ್ ಮಂಜುನಾಥ್ ರಾಥೋಡ್ ಇತರರು ಇದ್ದರು.

ಗಂಗಾವತಿಯಲ್ಲೂ ಜೋರಾದ ಚಳವಳಿ:
ಲಂಬಾಣಿ ಸಮುದಾಯವನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡದಂತೆ ಆಗ್ರಹಿಸಿ ಜಿಲ್ಲಾ ಕೇಂದ್ರ ಮಾತ್ರವಲ್ಲದೇ ಗಂಗಾವತಿ ನಗರದ ಮುಖ್ಯ ಅಂಚೇ ಕಚೇರಿಯಲ್ಲೂ ಪತ್ರ ಚಳವಳಿ ಜೋರಾಗಿ ನಡೆಯಿತು. ಕೊಪ್ಪಳ ಜಿಲ್ಲೆಯ ಗಂಗಾವತಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ನಡೆದ ಪತ್ರ ಚಳುವಳಿ ಯಶಸ್ವಿಯಾಯಿತು. ಜಿಲ್ಲೆಯಲ್ಲಿ ಒಂದು ಲಕ್ಷ ಲಂಬಾಣಿ ಸಮುದಾಯದವರಿಂದ ಚಳುವಳಿ ನಡೆದಿದ್ದು, ಬೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳು ಎಸ್ಸಿ ಪಟ್ಟಿಯಲ್ಲೇ ಉಳಿಸುವಂತೆ ಒತ್ತಾಯಿಸಲಾಯಿತು.
ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ, ಡಾ.ಬಿಆರ್ ಅಂಬೇಡ್ಕರ್ ಅವರೇ ಈ ಜಾತಿಗಳನ್ನ ಎಸ್ಸಿ ಎಂದು ಗುರುತಿಸಿದ್ದಾರೆ. ಇವುಗಳನ್ನು ಎಸ್ಸಿಯಿಂದ ಕೈಬಿಡಲಾಗಿದೆ ಎಂಬ ವದಂತಿ ಹಬ್ಬುತ್ತಿದೆ. ಸುಳ್ಳು ವದಂತಿಗಳನ್ನು ಹರಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಎಂದು ಚಳವಳಿಕಾರರು ಆಗ್ರಹಿಸಿದರು.

Please follow and like us:
error