ಎಲೆಮರೆಯ ಕಾಯಿಗಳನ್ನು ಬೆಳಕಿಗೆ ತರುವ ಕೆಲಸ ನಿಸರ್ಗ ಕರೋಕೆ ಸ್ಟುಡಿಯೋ ಮಾಡಲಿ- ಆರ್.ಎಸ್.ಉಜ್ಜನಿಕೊಪ್ಪ

ಕುಷ್ಟಗಿ: : ನಮ್ಮ ಭಾಗದಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಅಂತಹ ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ.  ಎಲೆಮರೆಯ ಕಾಯಿಗಳಾಗಿಯೇ ಉಳಿದುಬಿಡುತ್ತಾರೆ. ಅಂತಹ ಕಲಾವಿದರು ಸಹ ಬೆಳಕಿಗೆ ಬರಬೇಕು. ಈ ನಿಟ್ಟಿನಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುತ್ತಿರುವಂತಹ ವಜೀರ್ ಗೋನಾಳಂತವರು ತಮ್ಮ ಕರೋಕೆ ಸ್ಟುಡಿಯೋ ಮೂಲಕ ಅವರಿಗೆ ವೇದಿಕೆ ಒದಗಿಸುವ ಕೆಲಸ ಮಾಡುತ್ತಿದ್ಧಾರೆ. ಇದು ನಿಜಕ್ಕೂ ಶ್ಲಾಘನೀಯ, ನಿಸರ್ಗ ಕರೋಕೆ ಸ್ಟುಡಿಯೋ ಮೂಲಕ ಅಂತಹ ಸಾವಿರಾರು ಕಲಾವಿದರು ಬೆಳಕಿಗೆ ಬರಲಿ ಎಂದು  ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಗಂಗಾವತಿ ಡಿವೈಎಸ್ಪಿ ಆರ್.ಎಸ್.ಉಜ್ಜನಿಕೊಪ್ಪ  ಹೇಳಿದರು.

ಅವರು ಕುಷ್ಟಗಿ  ಪಟ್ಟಣದ ಸಂತೆ ಬಜಾರ್ ನಲ್ಲಿ ಸಮಾಜಸೇವಕ, ಗುತ್ತಿಗೆದಾರ ವಜೀರ್ ಬಿ, ಗೋನಾಳರ ಮಾಲಿಕತ್ವದ ನಿಸರ್ಗ ಕರೊಕೆ ಸಿಂಗಿಂಗ್ ಸ್ಟೂಡಿಯೋ ಉದ್ಘಾಟನೆಯ ನೆರವೇರಿಸಿ ಮಾತನಾಢಿದರು.

ಕಾರ್ಯಕ್ರಮದ  ದಿವ್ಯ ಸಾನ್ನಿಧ್ಯವನ್ನು  ಶ್ರೀ ಶ್ರೀ ಷ. ಬ್ರಹ್ಮ108 ಕರಿಬಸವ ಶಿವಚಾರ್ಯಾ ಸ್ವಾಮೀಜಿ ವಹಿಸಿಕೊಂಡಿದ್ದರು. ಪಿ,ಎಸ್,ಐ, ಅಶೋಕ ಬೇವೂರು, ಸಿಪಿಐ,ನಿಂಗಪ್ಪ ಪೊಲೀಸ್ ಇಲಾಖೆ ವಿವಿಧ ಅಧಿಕಾರಿಗಳು, ಜಿ.ಕೆ ಹಿರೇಮಠ ಪುರಸಭೆ ಅಧ್ಯಕ್ಷರು, ಸರಿಗಮಪ ದಲ್ಲಿ ಭಾಗವಹಿಸಿದ್ದ  ಕಂಬದ ರಂಗಯ್ಯ, ಮಂಜಮ್ಮ, ರತ್ನಮ್ಮ ಸೇರಿದಂತೆ ವಿವಿಧ ಗಣ್ಯರು , ಸಂಗೀತಪ್ರೀಯರು ಅಭಿಮಾನಿಗಳು ಭಾಗವಹಿಸಿದ್ದರು.

,

Please follow and like us:
error