ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಗೆ ಅನುಮತಿ : ಡಿ. ೨೭ ರಂದು ಸಮಿತಿ ಸಭೆ

ಕೊಪ್ಪಳ ಡಿ.  : ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸಲು ಅನುಮತಿ ಸಂಬಂಧ ಟಾಸ್ಕ್‌ಫೋರ್ಸ್ ಸಮಿತಿ ಸಭೆಯನ್ನು ಡಿ. ೨೭ ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸಲು ಅನುಮತಿ ಸಂಬಂಧ ಮತ್ತು ಕುಷ್ಟಗಿ ಹಾಗೂ ಕನಕಗಿರಿ ಶಾಸಕರುಗಳ ದೂರವಾಣಿಯ ಪ್ರಸ್ತಾವನೆ ಮೂಲಕ ಬೆಂಬಲಬೆಲೆ ಹೆಚ್ಚುವರಿಯಾಗಿ ತೊಗರಿ ಖರೀದಿ ಕೇಂದ್ರಗಳನ್ನು ಕುಷ್ಟಗಿ ಹಾಗೂ ಕನಕಗಿರಿಯಲ್ಲಿ ತೆರೆಯುವ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯ ಸಭೆಯನ್ನು ಡಿ. ೨೭ ರಂದು ಬೆಳ್ಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಪ್ರತಿನಿಧಿಯನ್ನು ಕಳುಹಿಸದೇ ಖುದ್ದಾಗಿ ಹಾಜರಾಗುವಂತೆ  ತಿಳಿಸಿದೆ.