ಎಐಡಿವೈಓ ಮತ್ತು ಎಐಡಿಎಸ್ಓ ಸಂಘಟನೆಯಿಂದ ಕ್ರಾಂತಿಕಾರಿಗಳ ಹುತಾತ್ಮ ದಿನಾಚರಣೆ

Koppal ಕ್ರಾಂತಿ ಚಿರಾಯುವಾಗಲಿ,, ಸಾಮ್ರಾಜ್ಯವಾದಕ್ಕೆ  ಧಿಕ್ಕಾರ, ಎಂದು ಭಾರತದ ಸ್ವಾತಂತ್ರ್ಯಕ್ಕಾಗಿ ಕೇವಲ 23 ವರ್ಷಕ್ಕೆ ನಗುನಗುತ್ತಾ ಗಲ್ಲು ಗಂಬಕ್ಕೇರಿದ ಮಹಾನ್ ಚೇತನ ಭಗತ್ ಸಿಂಗ್, ಸುಖದೇವ್ ರಾಜಗುರು,ಮೂರು ಜನ ಕ್ರಾಂತಿಕಾರಿಗಳ ಹುತಾತ್ಮ ದಿನಾಚರಣೆಯನ್ನು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ   ಎ ಐ ಡಿ ವೈ ಓ ಮತ್ತು ಎ ಐ ಡಿ ಎಸ್ ಓ ಸಂಘಟನೆಯಿಂದ ಆಚರಿಸಲಾಯಿತು. 
ಈ ಕಾರ್ಯಕ್ರಮಕ್ಕೆ ಏ ಐ ಡಿ ವೈ ಓ   ಸಂಘಟನೆಯ ರಾಜ್ಯಸಮಿತಿ ಸದಸ್ಯರಾದ ಸಿದ್ದಲಿಂಗ ಬಾಗ್ಯವಾಡಿ ಭಗತ್ ಸಿಂಗ್ ಅವರ ಜೀವನ ಆದರ್ಶ ಗಳ ಕುರಿತು ಮಾತನಾಡುತ್ತಾ ಭಗತ್ ತಮ್ಮ ಅಲ್ಪ ಕಾಲದ ಜೀವನದಲ್ಲಿ ಉದ್ದೇಶಿತ ಗುರಿ ಸಾಧಿಸಲು  ಸಾಧ್ಯವಾಗಲಿಲ್ಲ  ಎಂಬುದು ನಿಜವಾದರೂ, ಅವರ ಬಲಿದಾನದ ನಂತರ ನೇತಾಜಿಯವರು ಹೇಳಿದಂತೆ ಭಗತ್ ಸಿಂಗ್ ಈಗ ಕೇವಲ ಒಬ್ಬ ವ್ಯಕ್ತಿಯಲ್ಲ ಅವರೊಂದು ಸಂಕೇತ, ಇಡೀ ದೇಶವನ್ನೇ ವ್ಯಾಪಿಸಿರುವ ಬಂಡಾಯದ ಸ್ಪೂರ್ತಿಯ ಸಂಕೇತ !,  ತಮ್ಮ ಕಾಲದಲ್ಲಿ ಎಲ್ಲ ರಾಜಕೀಯ ಪಂಥಗಳನ್ನು ಸರಿಯಾಗಿ ಅರ್ಥೈಸಿಕೊಂಡು ತಮ್ಮ ವಯಸ್ಸಿಗೂ ಮೀರಿದ ಕ್ರಾಂತಿಯ ಪರಿಕಲ್ಪನೆಯನ್ನು ಬೆಳೆಸಿಕೊಂಡ ಪ್ರಬುದ್ಧತೆ :ಅದರೊಂದಿಗೆ ಕ್ರಾಂತಿಕಾರಿ ಚಟುವಟಿಕೆಗಳಿಗೂ ಹೊಸದಿಕ್ಕನ್ನು ನೀಡಲು ಅವರ ಪಟ್ಟ ಪ್ರಯತ್ನವೂ ಇವೆಲ್ಲವೂ, ಇತಿಹಾಸದಲ್ಲಿ ಅವರಿಗೆ ಅದ್ವಿತೀಯ ಕ್ರಾಂತಿಕಾರಿಯ ಸ್ಥಾನವನ್ನು ನೀಡುತ್ತದೆ. ಭಗತ್ ಸಿಂಗರಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಅದೆಂದರೆ ಭಾರತದಲ್ಲಿ ಬೆಳೆಯುತ್ತಿದ್ದ ರಾಷ್ಟ್ರೀಯ ಬಂಡವಾಳಿಗರಿಗೆ ಕಾರ್ಮಿಕ ವರ್ಗದ ಕ್ರಾಂತಿಯ ಬಗ್ಗೆ ಮಾರಣಾಂತಿಕ ಭಯ ಕಾಡುತ್ತಿದೆ ಎಂಬುದು. ಅದರಿಂದಾಗಿ ಅಹಿಂಸೆ ಎಂಬ ಹೆಸರಿನಲ್ಲಿ ಕೇವಲ ಮಾತುಗಳಿಗೆ ಸ್ವಾತಂತ್ರ್ಯ ಹೋರಾಟವನ್ನು ಸೀಮಿತಗೊಳಿಸುವುದು ಬಂಡವಾಳಿಗರಿಗೆ ಬೇಕಿತ್ತು. ಗಾಂಧೀಜಿ ಅವರು ತಮ್ಮ ಜೀವನದ ದೃಷ್ಟಿಯನ್ನಾಗಿ ಸ್ವೀಕರಿಸಿಕೊಂಡರೆ,  ಗಾಂಧಿವಾದಿಗಳು ಸ್ವಾತಂತ್ರ್ಯ ಸಂಗ್ರಾಮವಾಗಿ ಬೆಳೆಯದಂತೆ  ನೋಡಿಕೊಂಡರು ಮಾತ್ರವಲ್ಲದೆ ಸಶಸ್ತ್ರ ಕ್ರಾಂತಿಯನ್ನು ರಕ್ತಪಿಪಾಸುಗಳ ಕೃತ್ಯವೆಂದು   ಬಣ್ಣಿಸಿ ಅದಕ್ಕೆಮಸಿ ಬಳಿಯುವ   ಕೆಲಸವನ್ನು ಮಾಡಿದರು. ಈ ಗೊಂದಲಕ್ಕೆ ಉತ್ತರವಾಗಿ ಭಗತ್ ಸಿಂಗ್ ಅವರು ಹೇಳಿದರು. “ಕ್ರಾಂತಿ ಎಂಬುದು ರಕ್ತಪಾತದ ಕಲಹವನ್ನು ಒಳಗೊಂಡಿರಲೇಬೇಕಿಲ್ಲ ಅಥವಾ ವೈಯಕ್ತಿಕ ದ್ವೇಷಕ್ಕೂ ಅಲ್ಲಿ ಅವಕಾಶವಿಲ್ಲ. ಅದು ಬಾಂಬು  ಮತ್ತು ಪಿಸ್ತೂಲುಗಳ ಆರಾಧನೆ ಅಲ್ಲ. ಕ್ರಾಂತಿಯೆಂದರೆ ಅನ್ಯಾಯದ ಮೇಲೆ ಆಧಾರಿತವಾಗಿರುವ ಈ ವ್ಯವಸ್ಥೆಯ ಬದಲಾವಣೆ”ಬಾಂಬು ಮತ್ತು ಪಿಸ್ತೂಲ್
“.. ಈ ಗುರಿಯನ್ನು ಸಾಧಿಸಲು ಬಳಸುವ ಸಾಧನವಾಗಬಹುದು. ಕೆಲವೊಂದು ಚಳುವಳಿಗಳಲ್ಲಿ ಅವುಗಳು ಪ್ರಮುಖ ಪಾತ್ರವನ್ನು ವಹಿಸಬಹುದು. ಹಾಗೆಂದ ಮಾತ್ರಕ್ಕೆ ಅವೆರಡು  ಒಂದೇ ಆಗಲು ಸಾಧ್ಯವಿಲ್ಲ. ಬಂಡಾಯವೇ  ಕ್ರಾಂತಿಯಲ್ಲ.  ಅದು ಕ್ರಾಂತಿಯ ದಾರಿ ಮಾಡಿಕೊಡಬಹುದು” ಕ್ರಾಂತಿ ಎಂದರೆ ಏನೆಂಬುದರ ಬಗ್ಗೆ ಭಗತ್ ಸಿಂಗ್ ತಮ್ಮದೇ ವ್ಯಾಖಾನ  ನೀಡಿದರು. “ಒಳ್ಳೆಯದು ಬೇಕೆಂಬ  ಜೀವನ ಪ್ರೀತಿಯನ್ನು ಸೂಚಿಸುವುದಕ್ಕೆ ‘ಕ್ರಾಂತಿ’ ಎಂಬ ಪದವನ್ನು ಬಳಸಿದ್ದೇವೆ. ಸಾಮಾನ್ಯವಾಗಿ ಜನತೆ ಸ್ಥಾಪಿತ ವ್ಯವಸ್ಥೆಯನ್ನೆ  ರೂಢಿಗತ ಗೊಳಿಸಿಕೊಂಡು,  ಬದಲಾವಣೆಯೆಂದರೆ ನಡಗುವಂತಹ  ಧೋರಣೆಬೆಳಸಿಕೊಳ್ಳುತ್ತಾರೆ. ಇಂತಹ ಆಲಸ್ಯದ ಧೋರಣೆಯನ್ನು  ಕ್ರಾಂತಿಕಾರಿ ಸ್ಪೂರ್ತಿಯಿಂದ  ಪರಿವರ್ತನೆ  ಮಾಡಬೇಕಾಗಿದೆ. “ಇದು ಅವರ ಮಾತಿನ ಅರ್ಥವಾಗಿತ್ತು. ಭಗತ್ ಸಿಂಗರು ಪ್ರಗತಿ ಪರವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಗೂ ಹಳೆಯ ನಂಬಿಕೆಯ ಪ್ರತಿಯೊಂದು ಅಂಶವನ್ನು ಟಿಕಿಸಬೇಕು. ಅಪನಂಬಿಕೆಯಿಂದ ನೋಡಬೇಕು. ಮತ್ತು ಪ್ರಶ್ನಿಸಬೇಕು ಪ್ರಚಲಿತ ನಂಬಿಕೆ ಆಳಕ್ಕಿಳಿದು ಅದರ ಪ್ರತಿಯೊಂದು ಅಂಶವನ್ನು ವಿಶ್ಲೇಷಿಸಬೇಕು ಕುರುಡು ನಂಬಿಕೆ  ಮಂಕಾಗಿಸುತ್ತದೆ ಮತ್ತು ಮನುಷ್ಯನನ್ನು ಪ್ರತಿಗಾಮಿಯಾಗಿ  ಮಾಡುತ್ತದೆ ಎಂದಿದ್ದರು.  ಭಗತ್ ಸಿಂಗ್  ಎಡವಾದಿ ಚಳುವಳಿಯೊಂದಿಗೆ ಬೆಸೆದುಕೊಂಡಿದ್ದು ಇಂಕಿಲಾಬ್ ಜಿಂದಾಬಾದ್ ಕ್ರಾಂತಿ ಚಿರಾಯುವಾಗಲಿ  ಎಂಬ ಘೋಷಣೆಯನ್ನು ಬಳಸಬೇಕೆಂದು ಕೂಡ ಅವರು ಪ್ರತಿಪಾದಿಸಿದರು. ಭಗತ್ ಸಿಂಗ್ ರವರು ಮರಣ ದಂಡನೆಗೆ ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಕೈದಿಗಳ ಅವರಿಗೆ ಕೊನೆಯ ದಿನಗಳಲ್ಲಿ ತಮ್ಮ ಸಂಬಂಧಿಕರನ್ನು ನೋಡಬೇಕೆನ್ನಿಸುವುದಿಲ್ಲವೇ ಎಂಬುದಾಗಿ ಕೇಳಿದರು. ಆಗ ಭಗತ್ ಸಿಂಗ್ ಹೇಳಿದರು. ಯಾರು ಈಗಾಗಲೇ ಸ್ವಾತಂತ್ರ್ಯಕ್ಕೋಸ್ಕರ ತಮ್ಮ ರಕ್ತ ರಹರಿಸಿ ಹತಾತ್ಮರಾಗಿದ್ದರೋ  ಅವರೇ ನನ್ನ ಅತ್ಯಂತ ಆತ್ಮೀಯ ರಕ್ತ ಸಂಬಂಧಿಕರು. ಯಾರು ಜೈಲಿನ ಕೋಣೆಗಳಲ್ಲಿ ನನ್ನೊಂದಿಗೆ ರಕ್ತ ಹರಿಸಿದ್ದರೋ ಅವರೇ ನನ್ನ ಸಂಬಂದಿಕರು.   ನನ್ನ ಸಾವಿನ ನಂತರ ಉದ್ದೇಶವನ್ನು ಯಾರು ಮುಂದುವರಿಸುತ್ತಾರೋ,  ಅವರೇ ನನ್ನ ಇತರ ಸಂಬಂಧಿಕರು. ಇವರಲ್ಲದೆ ನನಗಿನ್ನಾವ  ಸಂಬಂಧಿಕರು ಇಲ್ಲ. ಮರಣದಂಡನೆಯನ್ನು ಪುನರ್ ಪರಿಶೀಲಿಸುವಂತೆ ತಮ್ಮ ತಂದೆ ಸಲ್ಲಿಸದ ಅರ್ಜಿಯ  ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಭಾರತೀಯರ ಆತ್ಮಗೌರವಕ್ಕೆ  ಮಾಡಿದ ಅವಮಾನ ಅದೆಂದು  ಅವರು ಪರಿಗಣಿಸಿದ್ದರು.ಕೊನೆಯ ದಿನದಂದು  ಜೈಲಿನ ಅಧಿಕಾರಿಗಲ್ಲಿಗೆ ಕರದೊಯ್ಯಲು  ಬಂದಾಗ ಭಗತ್ ಸಿಂಗ್ ರಷ್ಯಾದ ಸಮಾಜವಾದಿ ಕ್ರಾಂತಿ ರುವಾರಿ ಲೆನಿನ್ ಪುಸ್ತಕವೊಂದನ್ನು ಓದುವುದರಲ್ಲಿ ತಲ್ಲೀನರಾಗಿದ್ದರು. ಒಂದು ನಿಮಿಷ ತಡೆಯಿರಿ ಓರ್ವ ಕ್ರಾಂತಿಕಾರಿ ಇನ್ನೋರ್ವ ಕ್ರಾಂತಿಕಾರಿಯೊಡನೆ  ಸಂಭಾಷಣೆಯಲ್ಲಿ ತೊಡಗಿದ್ದಾನೆ. ಎಂದು ಓದು ಮುಗಿಸಿದ ಮರುಕ್ಷಣ ದುರ್ಗಂಬ ದತ್ತ ನಡೆದರು. ಗರ್ಲ್ ಕಂಬದ ಮುಂದೆ ನಿಂತಿದ್ದ ಬ್ರಿಟಿಷ್ ಅಧಿಕಾರಿಗೆ ‘ನೀವು ಅದೃಷ್ಟಶಾಲಿ ವ್ಯಕ್ತಿ ‘ಭಾರತೀಯರು ಯಾವ ರೀತಿ ನಗು ನಗುತ್ತಾ ನೇಣಿಗೆ ತಲೆಯೊಡ್ಡುತ್ತಾರೆ   ಎಂಬುದಕ್ಕೆ ಸಾಕ್ಷಿ ಆಗುವ ಭಾಗ್ಯ ನಿಮ್ಮದಾಗಿದೆ “ಎಂದು ನುಡಿದರು. ಅವರ ಮುಖದಲ್ಲಿ ಮಂದಹಾಸವನ್ನು  ಅಳಿಸಿಹಾಕುವುದಕ್ಕೆ ಸಾವಿಗೂ ಸಾಧ್ಯವಾಗಲಿಲ್ಲ.ಭಗತ್ ಸಿಂಗರ  ಕಂಡ ಕನಸು ಸಾಮಾನ್ಯ ವ್ಯಕ್ತಿಗಳು ಜೀವನ ವೇನೆಂದು ಹರಿಯಲು ಕಣ್ಣು ಬಿಡುವ ಎಳೆಯ ವಯಸ್ಸಿಗೆ ರಾಜಕೀಯ ತತ್ವಶಾಸ್ತ್ರ ಸಾಹಿತ್ಯದ ಗಂಭೀರ ವಿಚಾರಗಳನ್ನು ಓದಿ ಅರಗಿಸಿಕೊಂಡು, ಅಳವಡಿಸಿಕೊಂಡು, ತಾವು ನಂಬಿದ ಆದರ್ಶಕ್ಕಾಗಿ ಸರ್ವಸ್ವ ತ್ಯಾಗ ಮಾಡಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್. ಅವರು ಜನಿಸಿದ್ದು ನೂರು  ವರ್ಷಗಳೇ ಕಳೆದಿವೆ. ಅವರು ಜ್ಯೂತಾತ್ಮರಾಗಿ 88  ವರ್ಷಗಳು ಸಂದಿವೆ, ಆದರೆ ಅವರ ಕನಸುಗಳು ನನಸಾಗಿಲ್ಲ. ಏಳು ದಶಕಗಳು ಕಳೆದ ನಮ್ಮ ಸ್ವಾತಂತ್ರ್ಯ ಭಾರತದ ಪರಿಸ್ಥಿತಿ ಇಂದು ಏನಾಗಿದೆ ವಿವರಣೆ ಬೇಕಾಗಿಲ್ಲ ಸತ್ಯ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದೆ  ಭಗತ್ ಸಿಂಗ್ ಮತ್ತೆ ಹುಟ್ಟಿ ಬರಲಿ ಎಂದು ಇಡೀ ದೇಶದ ಕಾತರದಿಂದ ಕಾಯುತ್ತಿದೆ. ಅನ್ಯಾಯಗಳು ತೊಡೆದುಹಾಕಬೇಕೆಂಬ ಆದರ್ಶ. ಅದಕ್ಕಾಗಿ ದುಡುಯುವದಕ್ಕೆ ಮಡಿಯುವದಕ್ಕೆ  ಸಿದ್ದರಾದ ಯುವಜನರ ದಂಡೇ ಈ ದೇಶದ ಭವಿಷ್ಯ. ಅಂತಹ  ಯುವಜನರಲ್ಲಿ ಭಗತ್ ಸಿಂಗ್ ಬದುಕು ಆದರ್ಶದ ಕಿಚ್ಚು ಹಚ್ಚಲಿ. ಆ ಕಿಚ್ಚು  ಹಳೆಯ ಕೊಳೆಯನ್ನೆಲ್ಲ ಸುಟ್ಟು  ಹೊಸ ಸಮಾಜದ ಹುಟ್ಟಿಗೆ ಬೆಳಕಾಗಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಮಾರುತಿ ಸರ್ ಹಾಗು
ಎ ಐ ಡಿ ವೈ ಓ ಸಂಘಟನೆಯ ಜಿಲ್ಲಾ ಸಂಚಾಲಕರಾದ ಶರಣಬಸವ ಪಾಟೀಲ್ ರಾಯಣ್ಣ ಗಡ್ಡಿ ಶರಣುಗಡ್ಡಿ ಮತ್ತು ಎಐಡಿಎಸ್ ಓ ಸಂಘಟನೆಯ ಜಿಲ್ಲಾ ಸಂಚಾಲಕರಾದ ರಮೇಶ್ ವಂಕಲಕುಂಟಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು  ಮಧು ಚಂದ್ರಶೇಖರ್ ಶರಣಬಸವ ಮುತ್ತು ಆನೆಗುಂದಿ ಮಂಜುನಾಥ್ ಮೈಲಾರಪ್ಪ ಕಿರಣ್ ಭಾಗವಹಿಸಿದ್ದರು.

Please follow and like us:
error