ಎಂಟನೇ ದಿನಕ್ಕೆ ಕಾಲಿಟ್ಟ ಹಿರೇಹಳ್ಳ ಪುನಶ್ಚೇತನ ಕಾರ್ಯ


ಕೊಪ್ಪಳ: ಹಿರೇಹಳ್ಳದ ಪುನಶ್ಚೇತನ ಕಾರ್ಯವು ದಿನದಿಂದ ದಿನಕ್ಕೆ ಭರದಿಂದ ಸಾಗಿ ಅತ್ಯಂತ ತ್ವರಿತಗತಿಯಾಗಿ ಕೆಲಸಗಳು ಜರುಗುತ್ತಲಿವೆ. ಇಂದು ಹಿರೇಹಳ್ಳ, ಕೋಳುರು, ಕಾಟ್ರಳ್ಳಿ ಹಾಗೂ ಭಾಗ್ಯನಗರದ ಸುತ್ತಮುತ್ತ ಇರುವ ಹಸಿರು ಪಾಚಿ, ಕೆಸರು, ಮುಳ್ಳುಕಂಟಿಗಳು, ಜಾಲಿಮರಗಳು ಹಾಗೂ ಕಸಕಡ್ಡಿಗಳನ್ನು ತೆಗೆದು ಹಾಕಿ ಸ್ವಚ್ಚಗೊಳಿಸುವ ಕಾರ್ಯ ಜರುಗಿತು. ಈ ಕಾರ್ಯದಲ್ಲಿ ೧೧ ಇಟ್ಯಾಚಿ, ೨ e. ಸಿ. ಬಿ. ೧ ಡೋಜರ್ ಹಾಗೂ ೨ ಟ್ರ್ಯಾಕ್ಟರ್‍ಗಳನ್ನು ಸ್ವಚ್ಛತಾಕಾರ್ಯದಲ್ಲಿ ಬಳಸಿಕೊಳ್ಳಲಾಯ್ತು.
ಇಂದು ಹಿರೇಹಳ್ಳ ಯೋಜನಾ ಅಭಿಯಂತರರಾದ ಬಸವರಾಜ ಬಂಡಿವಡ್ಡರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲಿಸಿದರು. ಅಲ್ಲದೇ ಮುಂದಿನ ಯೋಜನೆಗಳ ಬಗ್ಗೆ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಪರಿಣಿತರು ಹಳ್ಳಿಯಿಂದ ಹಳ್ಳಿಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಬ್ರಿಡ್ಜ ಕಂ ಬ್ಯಾರೇಜ್, ಚೆಕ್ ಡ್ಯಾಂಗಳನ್ನು ನಿರ್ಮಿಸುವ ಕುರಿತು ಪೂಜ್ಯ ಶ್ರೀಗಳೊಂದಿಗೆ ಚರ್ಚಿಸಿದರು. ಈಗ ಹಿರೇಹಳ್ಳದ ಸುತ್ತ ಮುತ್ತಲಿನ ಪ್ರದೇಶ ಆಕರ್ಷಕವಾಗಿ, ವಿಶಾಲವಾಗಿ ಕಾಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಶಿಸ್ತು ಹಾಗೂ ಆಕರ್ಷಕವಾಗಿ ಕಂಗೊಳಿಸುತ್ತದೆ. ಈ ಕಾರ್ಯದಲ್ಲಿ ಪೂಜ್ಯರೊಂದಿಗೆ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಸೇವೆ ಸಲ್ಲಿಸಿದರು.

Please follow and like us:
error