ಉಪಾಧ್ಯಯರು ತಮಗಾಗಿ ಬಾಳದೇ ರಾಷ್ಟ್ರಕ್ಕಾಗಿ ಬಾಳಿದರು-ಡಾ.ಕೆ.ಜಿ ಕುಲ್ಕರ್ಣಿ

| ಏಕಾತ್ಮ ಮಾನವತವಾದ ಪ್ರತಿಪಾದಕ|| ಸಮರ್ಪಣಾ ದಿನಾಚರಣೆಯಲ್ಲಿ ಡಾ.ಕೆ.ಜಿ ಕುಲ್ಕರ್ಣಿ

ಕೊಪ್ಪಳ,ಫೆ.೧೧: ಭಾರತೀಯ ಜನತಾ ಪಾರ್ಟಿ ಕೊಪ್ಪಳ ಜಿಲ್ಲಾ ಕಾರ್ಯಾಲಯದಲ್ಲಿ ಪಂಡಿತ ದೀನದಯಾಳ್ ಉಪಾಧ್ಯಯ ಅವರ ಪುಣ್ಯ ತಿಥಿಯಂದು ಅವರ ಭಾವಚಿತ್ರಕ್ಕೆ
ಪೂಜೆ ಸಲ್ಲಿಸುವ ಮುಖಾಂತರ ಸಮರ್ಪಣಾ ದಿನವಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಬೌದ್ಧಿಕವನ್ನು ರಾಷ್ಟ್ರೀಯ ಪರಿಷತ ಸದಸ್ಯ ಡಾ.ಕೆ.ಜಿ ಕುಲ್ಕರ್ಣಿ ನಡೆಸಿಕೊಡುವುದರ
ಮುಖಾಂತರ ಮಾತನಾಡಿದ ಅವರು ಸರಳ ಜೀವನ ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡು ಏಕಾತ್ಮ ಮಾನವತವಾದ ತತ್ವದ ಪ್ರತಿಪಾದಕರಾಗಿ ರಾಷ್ಟ್ರಕಾರ್ಯ ವ್ಯಕ್ತಿಗತ ಸ್ವಾಥಕ್ಕಿಂತಲೂ ದೊಡ್ಡದು, ಮನುಷ್ಯ ತನಗಾಗಿ ಬಾಳದೇ ರಾಷ್ಟ್ರಕ್ಕಾಗಿ ಬಾಳಬೇಕು ಎಂದು ಭಾರತೀಯ ಕರ್ತವ್ಯವನ್ನು ಜಾಗೃತಗೊಳಿಸಿದ ಚಿಂತಕರು, ಮಹಾನ ದಾರ್ಶನಿಕ ಆದರ್ಶ ಪುರುಷರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಿಳಾ ಮೊರ್ಚಾ ಅಧ್ಯಕ್ಷೆ ವಾಣಿಶ್ರೀ ಮಠದ, ಪಕ್ಷದ ಮುಖಂಡರಾದ ಪ್ರದೀಪ ಹಿಟ್ನಾಳ, ನರಸಿಂಗರಾವ್ ಕುಲ್ಕರ್ಣಿ, ಮಂಜುಳಾ ಕರಡಿ, ಶೋಭಾ ನಗರಿ, ನಾಗರತ್ನಾ ಪಾಟೀಲ, ಪಿ.ಬಿ ಹಿರೇಮಠ, ರಮೇಶ ಕವಲೂರ, ಭೀಮಣ್ಣ ಹಿಟ್ನಾಳ, ಬಿ.ಜಿ ಗದುಗಿನಮಠ, ಜಯಶ್ರೀ ಗೊಂಡಬಾಳ, ಜಿಲ್ಲಾ ಮಾಧ್ಯಮ ಸಂಚಾಲಕ ಬಿ.ಗಿರೀಶಾನಂದ ಜ್ಞಾನಸುಂದರ, ಹಾಗೂ ಅನೇಕರು ಉಪಸ್ಥಿತರಿದ್ದರು. ಪ್ರಶಿಕ್ಷಣ ವರ್ಗ ಜಿಲ್ಲಾ ಸಂಚಾಲಕ ರಾಜು ಬಾಕಳೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಪಾಟೀಲ ಹಲಗೇರಿ ನಿರೂಪಿಸಿದರು, ನಗರ ಮಂಡಲ ಅಧ್ಯಕ್ಷ ಸುನೀಲ ಹೆಸರೂರ ವಂದಿಸಿದರು.

Please follow and like us:
error