ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಾಕ್-ಇನ್-ಇಂಟರ್‌ವ್ಯೂ

ಕೊಪ್ಪಳ : ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ “ವಾಕ್-ಇನ್-ಇಂಟರ್‌ವ್ಯೂ” ಅನ್ನು ಮಾರ್ಚ್ 02 ಮತ್ತು 03 ರಂದು ಬೆಳಿಗ್ಗೆ 10-30 ರಿಂದ 04 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳದಲ್ಲಿ ಆಯೋಜಿಸಲಾಗಿದೆ.
ವಾಕ್-ಇನ್-ಇಂಟರ್‌ವ್ಯೂನಲ್ಲಿ ಕ್ಯಾಫಶನ್ ಫೆಸಿಲಿಟೀಸ್ ಮ್ಯಾನೇಜ್‌ಮೆಂಟ್ ಲಿ. ಇವರು ತಮ್ಮಲ್ಲಿನ ಖಾಲಿ ಇರುವ ಹುದ್ದೆಗಳನ್ನು ಸೆಕ್ಯೂರಿಟಿ ಗಾರ್ಡ್ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು, ಯಾವುದೇ ಶುಲ್ಕವಿಲ್ಲದೇ ಉಚಿತ ಪ್ರವೇಶವಿರುತ್ತದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವೀಧರ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ವಾಕ್-ಇನ್-ಇಂಟರ್‌ವ್ಯೂನಲ್ಲಿ ಭಾಗವಹಿಸುವ ಯುವಕ-ಯುವತಿಯರ ವಯೋಮಿತಿಯು 18 ರಿಂದ 35 ವಯಸ್ಸಿರಬೇಕು. 166 ಸೆಂ.ಮೀ ಎತ್ತರ, ಅರ್ಹ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ, 1 ರಿಂದ 3 ಬಯೋಡಾಟಾ(ರಿಸ್ಯೂಮ್) ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ವಾಕ್-ಇನ್-ಇಂಟರ್‌ವ್ಯೂನಲ್ಲಿ ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳ ದೂ. ಸಂ: 08539-220859, 9353515518 ಗೆ ಸಂಪರ್ಕಿಸಿ .

Please follow and like us:
error