ಉದ್ಯೋಗ ನಷ್ಟ ತಡೆಯಿರಿ ,ಉದ್ಯೋಗ ಸೃಷ್ಠಿಗೆ ಯೋಜನೆ ರೂಪಿಸಿರಿ  ಕಾರ್ಯಕ್ರಮ


ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ , ರೆಡ್ ಕ್ರಾಸ್ ಹಾಗೂ ಸಾಂಸೃತಿಕ ಘಟಕಗಳ ಸಹಯೋಗದಲ್ಲಿ ಉದ್ಯೋಗ ನಷ್ಟ ತಡೆಯಿರಿ ,ಉದ್ಯೋಗ ಸೃಷ್ಠಿಗೆ ಯೋಜನೆ ರೂಪಿಸಿರಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ದೈಹಿಕ ನಿರ್ದೇಶಕಿ ಶೋಭಾ ಕೆ.ಎಸ್ ಮಾತನಾಡಿ ಇಂದು ಯುವಕರಿಗೆ ನಿರುದ್ಯೋಗದ ಸಮಸ್ಯೆ ತೀವ್ರತರವಾಗಿ ಕಾಡುತಲಿದ್ದು ಅವರಿಗೆ ಉದ್ಯೋಗ ನೀಡುವದರಿಂದ ಅವರ ಪ್ರತಿಭೆ ಹಾಗು ಶಕ್ತಿ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಾಗುತ್ತದೆ. ಆದ್ದರಿಂದ ಉದ್ಯೋಗಗಳನ್ನು ಸೃಷ್ಟಿ ಮಾಡುವಂತಹ ವಾತಾವರಣವನ್ನು ನಾವು ಸೃಷ್ಟಿಸುವ ಅಗತ್ಯ ಇದೆ. ಆ ಮೂಲಕ ಅವರಲ್ಲಿನ ಹೊಸ ವಿಚಾರ, ಆಲೋಚನೆ ಮತ್ತು ಕ್ರಿಯಾಶೀಲತೆಯನ್ನು ಗುರುತಿಸಲು ಸಹಾಯವಾಗಬಲ್ಲದೆಂದು ಮಾತನಾಡಿದರು. ಅತಿಥಿಗಗಿ ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ಯುವಕರು ದೇಶದ ಬೆನ್ನೆಲುಬು. ಇವರೇ ದೇಶದ ನಿರ್ಮಾತರು. ಇವರಿಗೆ ಉದ್ಯೋಗಗಳನ್ನು ಕಲ್ಪಿಸಿಕೊಡುವಂತಹ ಕರ್ಯಗಳು ಹೆಚ್ಚನ ಪ್ರಮಾಣದಲ್ಲಿ ಜರುಗಬೇಕೆಂದರು.ಅಧ್ಯಕ್ಷತೆ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ವಹಿಸಿ ಮಾತನಾಡಿದರು. ಸಂಚಾಲಕರಾದ ಬಸವರಾಜ, ಶಿವು, ಗುರುಬಸವರಾಜ, ರಾಜೇಂದ್ರ ಪ್ರಸಾದ ಇವರು ರಂಗ ಗೀತೆಗಳನ್ನು ಹಾಡಿದರು. ೦ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಮಾರುತೇಶ, ಪ್ರಭುರಾಜ, ಹಸನ್ ಮಿಯಾ,ದಾರುಕಾಸ್ವಾಮಿ ಇದ್ದರು. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error