You are here
Home > Koppal News > ಉಚಿತ ನೇತ್ರಾ ತಪಾಸಣೆ ಶಿಬಿರ

ಉಚಿತ ನೇತ್ರಾ ತಪಾಸಣೆ ಶಿಬಿರ

ದಿ:೨೧-೧೨-೨೦೧೭ ರಂದು ನಗರದ ಎಂ.ಎನ್.ಎಂ ಬಾಲಕಿಯರ ಸ.ಪ.ಪೂ.ಕಾಲೇಜು ಎನ್.ಎಸ್.ಎಸ್ ಘಟಕ ಹಾಗೂ ಭಾರತೀಯ ವೈದ್ಯಕೀಯ ಸಂಘ ಮಹಿಳಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರಾ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಉದ್ಘಾಟನೆಯನ್ನು ನೇತ್ರ ತಜ್ಞ ಡಾ||ಹನುಮಂತಪ್ಪ.ಎ. ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಐ.ಎಂ.ಎ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಡಾ|| ಸುಲೋಚನ ಚಿನಿವಾಲರ, ಕಾರ್ಯದರ್ಶಿಗಳಾದ ಡಾ|| ವೀಣಾ ಸತೀಶ, ಸಹಕಾರ್ಯದರ್ಶಿ ಡಾ|| ಅನಿತಾ ಶಶಿಧರ ಭಾಗವಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯರಾದ ಎಸ್.ಎಚ್.ಪಾಟೀಲರು ಪಹಿಸಿಕೊಂಡಿದ್ದರು.
ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಡಾ||ಹನುಮಂತಪ್ಪ.ಎ. ಇವರು ಸಮಾರಂಭವನ್ನು ಉದ್ದೇಶಿಸಿ , ನೇತ್ರ ಸುರಕ್ಷಾ ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡುತ್ತಾ, ಸಾಮಾನ್ಯವಾಗಿ ಮಿಟಮಿನ್ ’ಎ’ ಕೊರತೆಯಿಂದ ಕಣ್ಣಿಗೆ ಸಂಬಂಧಿಸಿದ ವಿವಿಧ ತೊಂದರೆಗಳು ಉಂಟಾಗುತ್ತವೆ, ಕಾರಣ ಮಿಟಮಿನ್ ’ಎ’ ಇರುವ ಪದಾರ್ಥಗಳಾದ ಗೆಜ್ಜರಿ, ಪಾಲಕ, ಬೀಟರೂಟ್, ಹಾಲು, ಮತ್ತು ಮೀನು ಸೇವಿಸುವುದರಿಂದ ಕೊರತೆಯನ್ನು ನಿವಾರಿಕೊಳ್ಳಬಹುದು. ವಿಶೇಷವಾಗಿ ಮೋಬೈಲ್, ಲ್ಯಾಪಟಾಪ್, ದೂರದರ್ಶನಗಳನ್ನು ನಿರಂತರವಾಗಿ ವೀಕ್ಷಿಸುವುದರಿಂದ ಕಣ್ಣಿನಲ್ಲಿ ಬಹುಬೇಗನೆ ದೋಷ ಕಾಣಿಸಿಕೊಳ್ಳಬಹುದು, ಕಾರಣ ನಿಯಂತ್ರಿತ ಕಣ್ಣಿನ ಬಳಕೆಯ ಮೂಲಕ ನೇತ್ರಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು. 
ಕಾರ್ಯಕ್ರಮದ ಆರಂಭದಲ್ಲಿ ಐ.ಎಂ.ಎ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಡಾ|| ಸುಲೋಚನ ಚಿನಿವಾಲರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶಿಬಿರದಲ್ಲಿ ೩೦೦ ವಿದ್ಯಾರ್ಥಿನಿಯರ ಉಚಿತ ನೇತ್ರ ತಪಾಸಣೆ ಮಾಡಲಾಯಿತು, ತಪಾಸಣೆ ಶಿಬಿರದಲ್ಲಿ ಮಾರುತಿ ನೇತ್ರ ಚಿಕಿತ್ಸಾಲಯ ಸಿಬ್ಬಂದಿಯವರು ಭಾಗವಹಿಸಿದರು.
ವೇದಿಕೆಯ ಮೇಲೆ ಕಾಲೇಜಿನ ಉಪನ್ಯಾಸಕರುಗಳಾದ ಮಹಿಬೂಬ ಅಲಿ, ಕೆ.ಬಸಪ್ಪ, ಮಾಲಿಗೌಡರ ಡಿ.ಎಸ್, ರಾಘವೇಂದ್ರ ರಾವ್, ಶ್ರೀಮತಿ ಸೋಮಕ್ಕ, ಶ್ರೀಮತಿ ನಾಗರತ್ನ ಇತರರು ಭಾಗವಹಿಸಿದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ   ಬಸಪ್ಪ ನಾಗೋಲಿ ಸ್ವಾಗತಿಸಿದರು, ಕಾರ್ಯಕ್ರಮದ ನಿರ್ವಹಣೆಯನ್ನು  ರಾಘವೇಂದ್ರ ಡಿ.ಆರ್ ನೆರವೇರಿಸಿದರು.

Top