ಉಚಿತ ಗ್ಯಾಸ್ ಕಿಟ್ ವಿತರಣೆ

ಕೊಪ್ಪಳ : ಫೆ ೦೮, ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ ೩೧ ಜನ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಹಾಗೂ ೧೭೦ ಜನರಿಗೆ ಆಯುಷ್ಮಾನ ಕಾರ್ಡಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಮೇಶ ಡಂಬ್ರಳ್ಳಿ ಮಾತನಾಡಿ ದೇಶದ ಪ್ರತಿಯೊಂದು ಗ್ರಾಮಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಗೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಪಣ ತೊಟ್ಟಿದ್ದು, ದೇಶದ ಪ್ರತಿಯೊಂದು ಬಡ ಮಹಿಳೆಯ ಮನೆ ಬಾಗಿಲಿಗೆ ತಲುಪಿಸಿದಾಗಲೇ ಈ ಯೋಜನೆ ಸಾರ್ಥಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ಹುಚ್ಚಪ್ಪ ಚೌದ್ರಿ, ಈಶಪ್ಪ ಸೊಂಪೂರ, ಸಿದ್ದನಗೌಡ್ರ, ಹನುಮನಗೌಡ್ರು, ಯಂಕನಗೌಡ್ರು, ಹುಲಿಗೇಶ ಭೋವಿ, ಮಲ್ಲಪ್ಪ ಚೌದ್ರಿ, ಫಕೀರಪ್ಪ ಉಳಾಗಡ್ಡಿ, ಹನುಮಪ್ಪ ಚೌದ್ರಿ, ಬಸವರಾಜ ಸಬರದ, ಚನ್ನವೀರಯ್ಯ ಹಿರೇಮಠ, ಬಸಪ್ಪ ಮಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.