ಈ ಪ್ರೇಮ ಹಕ್ಕಿಗಳಿಗೆ ಮದುವೆ ಮಾಡಿಸಲು ರಾಜ್ಯಪಾಲರೇ ನಿರ್ಧೇಶನ ಕೊಟ್ಟರಾ ? ನಿಜವಾಗಿಯೂ ನಡೆದಿದ್ದೇನು ?

ಆ ಎರಡು ಮನಸುಗಳು  ತಮ್ಮ ಬದುಕಿನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದರು ಆದರೆ  ಇನ್ನೇನು ಆ ಜೋಡಿಗಳು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಯುವತಿಯ ಕುಟುಂಬಸ್ಥರು, ಇಬ್ಬರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  ಮನೆಯವರು ಒಪ್ಪಿಕೊಳ್ಳಲ್ಲ ಎಂದು ಅರಿವಾದ ನಂತರ  ಪ್ರೇಮಿಗಳು ಸಂಘಟನೆಗಳ ಮೊರೆ ಹೋಗಿದ್ದಾರೆ.   ಕೊನೆಗೆ ರಾಜ್ಯಪಾಲರೇ ನಿರ್ಧೇಶನ ಕೊಟ್ಟು ಮದುವೆ ಮಾಡಿಸಿದ್ಧಾರೆ ಎನ್ನಲಾಗುತ್ತಿದೆ  ಪೊಲೀಸರ ಸಮ್ಮುಖದಲ್ಲಿಯೇ   ಜೋಡಿಗಳು ಹಸೆಮಣೆ ಏರಿದ್ದಾರೆ.

ಪೊಲೀಸರು ಸಮ್ಮುಖದಲ್ಲಿ ಬಿಗಿ ಬಂದೋಬಸ್ತಿನಲ್ಲಿ  ಸಂಭ್ರಮದಿಂದ ನಡೆದ ಲವ್ ಮ್ಯಾರೇಜ್..   ಕಂಡು ಬಂದಿದ್ದು, ಕೊಪ್ಪಳದಲ್ಲಿ. ಅಂದಹಾಗೇ ಪ್ರೇಮಿಗಳ ಮದುವೆಗೆ ಯುವತಿಯ ಕುಟುಂಬಸ್ಥರು ಒಪ್ಪದ ಕಾರಣ ಪ್ರೇಮಿಗಳು ಸಂಘಟನೆಗಳ ಮುಖಾಂತರ ರಾಜ್ಯಪಾಲರ ಮೊರೆ ಹೋಗಿ ಸಂಪ್ರದಾಯಕವಾಗಿ ಮದುವೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ಈ ವಿಶೇಷ ಮದುವೆ ಜರುಗಿದ್ದು, ಈ ಮದುವೆಗೆ ಪೊಲೀಸರು ಸಾಕ್ಷಿಯಾದ್ರು. ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ನಿರಂಜನಾ ಎನ್ನುವ  ಯುವತಿಯನ್ನು  ಉಳೆನೂರು  ಮೂಲದ ವೆಂಕಟ ಭಾರ್ಗವ್ ಪ್ರೀತಿ ಮಾಡ್ತಾ ಇದ್ದ. ಕಳೆದ ಎಂಟು ವರ್ಷಗಳಿಂದ ಇವರ ಪ್ರೀತಿ ಸಾಗಿತ್ತು.  ಆದ್ರೆ ಇದಕ್ಕೆ ಯುವತಿಯ ಮನೆಯವರು ಇವರ ಮದುವೆಗೆ ಒಪ್ಪಿರಲಿಲ್ಲ. ಯುವತಿಯ ಮನೆಯವರುತಕ್ಕಮಟ್ಟಿಗೆ ಶ್ರೀಮಂತರು ಈ ಕಾರಣಕ್ಕಾಗಿ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗಿದೆ. ಪ್ರೇಮಿಗಳಿಬ್ಬರು ಮದುವೆ ಮಾಡಿಸುವಂತೆ ಮಹಿಳಾ ಸಂಘಟನೆಯೊಂದಕ್ಕೆ ಮನವಿ ಮಾಡಿಕೊಂಡಿದ್ಧಾರೆ. ನಂತರ ಆ ಸಂಘಟನೆಯವರು ತೆಲಂಗಾಣ ರಾಜ್ಯದ ಮಹಿಳಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ರು. ಈ ವಿಷಯವನ್ನು ಮಹಿಳಾ ಆಯೋಗ ರಾಜ್ಯಪಾಲರಿಗೆ ವಿಷಯ ಮುಟ್ಟಿಸಿತ್ತು ಎನ್ನಲಾಗಿದೆ. ಇದ್ರಿಂದ ತೆಲಂಗಾಣದ ರಾಜ್ಯಪಾಲರಾದ ನರಸಿಂಹನ್ ರಾಜ್ಯದ ಪೊಲೀಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಇಂದು ಪೊಲೀಸರ ಸಮ್ಮುಖುದಲ್ಲಿ ನವಜೋಡಿಗಳು ಸಂಸಾರಿಕ ಜೀವನಕ್ಕೆ ಕಾಲಿಟ್ಟಿತ್ತು.

ನಿರಂಜನಾ ಮನ್ನೆ  ಬೆಂಗಳೂರಿನ ಖಾಸಗಿ ಬ್ಯಾಂಕೊಂದರಲ್ಲಿ ಉದ್ಯೋಗ ಮಾಡುತ್ತಿದ್ದರೆ ಹಾಗೂ  ವೆಂಕಟಭಾರ್ಗವ್ ಹೈದ್ರಾಬಾದ್ ಮೂಲದ ಖಾಸಗಿ ಹೊಟೆಲ್ ನಲ್ಲಿ ಛೆಪ್ ಆಗಿ ಕೆಲಸ ಮಾಡುತ್ತಿದ್ಧಾರೆ. ಸುಮಾರು ಎಂಟು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ರು ಅಂತೆ. ಆದ್ರೆ ಈ ಬಗ್ಗೆ ನಿರಂಜನಾ ತಮ್ಮ ಮನೆಯವರ ಬಳಿ ಹೇಳಿಕೊಂಡಿದ್ದಾಳೆ. ಆದ್ರೆ ಇದಕ್ಕೆ ಒಪ್ಪದಿದ್ದಾಗ ನಿರಂಜನಾ ಹಾಗೂ ವೆಂಕಟಭಾರ್ಗವ್ ನಮಗೆ ರಕ್ಷಣೆ ಬೇಕು ಅಂತಾ ತೆಲಂಗಾಣ ಹಾಗೂ ಕರ್ನಾಟಕದ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪ್ರಕರಣ ಅಂತರಾಜ್ಯ ಆಗಿರುವುದರಿಂದ ತೆಲಂಗಾಣ ಮಹಿಳಾ ಆಯೋಗ ಪತ್ರವನ್ನು ತೆಲಂಗಾಣ ಗೌರ್ವನರ್ ಗೆ ರವಾನೆ ಮಾಡಿದೆ. ಇದ್ರಿಂದ ತೆಲಂಗಾಣದ ರಾಜ್ಯಪಾಲರಾದ ನರಸಿಂಹನ್ ರಾಜ್ಯದ ಪೊಲೀಸ್ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಕೊಪ್ಪಳ ಎಸ್ಪಿ ಅವರನ್ನು ಕೇಳಿದ್ರೆ, ನಮಗೆ ಇದುವರೆಗೂ ಯಾವ ಪತ್ರನೂ ತಲುಪಿಲ್ಲ. ನಾವು ಎಲ್ಲಾ ಪ್ರಕರಣಗಳಂತೆ ಪ್ರೇಮಿಗಳಿಗೆ ಅಡ್ಡಿಯಾಗಬಾರದು ಅಂತಾ ಪೊಲೀಸ್ ಬಂದೋಬಸ್ತ್ ನೀಡಿದ್ದೇವೆ ಅಲ್ಲದೇ ರಾಜ್ಯಪಾಲರ ನಿರ್ದೇಶನ ಇತ್ತು ಎಂದಾದರೆ ನಮಗೆ ಖಂಡಿತ ಆದೇಶ ಇರುತ್ತಿತ್ತು ಎನ್ನುತ್ತಾರೆ .ಮದುವೆ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಮಾತಿನ ಚಕಮಕಿ ನಡೆದಿದೆ ಅದನ್ನು ಹೊರತು ಪಡಿಸಿದರೆ ಮದುವೆ ಭರ್ಜರಿಯಾಗಿಯೇ ನಡೆದಿದೆ. ‍ ಒಟ್ನಲ್ಲಿ ಪ್ರೇಮಿಗಳ ಕಡೆಯವರು ಹೇಳೋಪ್ರಕಾರ ಗೌರ್ವನರ್ ಪತ್ರದಿಂದ ಈ ಮದುವೆ ನಡೆಯುತ್ತಿದೆ ಅಂತಿದ್ರೆ, ಇತ್ತ ಕೊಪ್ಪಳ ಎಸ್ಪಿಯವರು ಮಾತ್ರ ನಮಗೆ ಯಾವುದೇ ಪತ್ರಬಂದಿಲ್ಲ ಅಂತಾರೆ. ಏನೇ ಆಗಲಿ ಪ್ರೇಮಿಗಳು ಪೊಲೀಸರ ಸಮ್ಮುಖದಲ್ಲಿ ನಿಟ್ಟಿಸಿರು ಬಿಟ್ಟು ಮದುವೆಯಾಗಿದಂತೂ ಸತ್ಯ.