ಇಪ್ಪತ್ತೈದನೇ ದಿನಕ್ಕೆ ಪಾದರ್ಪಣೆ ಮಾಡಿದ ಹಿರೇಹಳ್ಳ ಪುನಶ್ಚೇತನ ಕಾರ್ಯ


ಕೊಪ್ಪಳ- ಹಿರೇಹಳ್ಳ ಪುನಶ್ಚೇತನ ಕಾರ್ಯವು ಇಂದಿಗೆ ಇಪ್ಪತ್ತೈದನೇ ದಿನಕ್ಕೆ ಪಾದರ್ಪಣೆ ಮಾಡಿದ್ದು ಇಂದು ಡೊಂಬರಹಳ್ಳಿ.ಹಿರೇಸಂದೋಗಿ.ದದೇಗಲ್ ಬ್ರಿಡ್ಜ.ಭಾಗ್ಯನಗರ ಮಾದಿನೂರ.ಓಜಿನಹಳ್ಳಿ. ಹಿರೇಹಳ್ಳ ಪ್ರದೇಶಗಳಲ್ಲಿ ಪುನಶ್ಚೇತನ ಕಾರ್ಯಗಳು ಭರದಿಂದ ಸಾಗಿವೆ.ಇಂದು ಪುನಶ್ಚೇತನ ಕಾರ್ಯದಲ್ಲಿ ೨೯ ಹಿಟ್ಯಾಚಿ.೨೨ ಡೋಜರ್. ೧ ಜೆಸಿಬಿ. ೨ ಟ್ರಾಕ್ಟರ್ ಒಟ್ಟು ೫೪ ಯಂತ್ರಗಳನ್ನು ಪುನಶ್ಚೇತನ ಕಾರ್ಯದಲ್ಲಿ ಬಳಸಿಕೊಳ್ಳಲಾಯಿತು.
ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ದೇಣಿಗೆ.
ಕೊಪ್ಪಳ- ಗವಿಮಠದ ಪೂಜ್ಯರು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ವಿವಿಧ ಮಠಾಧಿಶರು.ಸರಕಾರಿ ನೌಕರರು.ವಿವಿಧ ಸಂಘ ಸಂಸ್ಥೆಗಳು ದೇಣಿಗೆಯನ್ನು ಅರ್ಪಿಇಸುತಿದ್ದಾರೆ. ಇಂದು ವೀರಪ್ಪ ಅಂದಪ್ಪ ಹಾಳಕೇರಿ ಇವರಿಂದ ೫೦೦೧ ರೂಪಾಯಿಗಳು ಹಾಗೂ ಕೊಪ್ಪಳದ ಎಸ್ ಜಿ ಗಂಜ್ ಎಪಿಎಂಸಿ ದಲಾಲಿ ವರ್ತಕರ ಸಂಘದ ವತಿಯಿಂದ ೨೦೦೦೨೪ (ಎರಡು ಲಕ್ಷದ ಇಪ್ಪತ್ತಾನಾಲ್ಕು) ರೂಪಾಯಿಗಳನ್ನು ಪೂಜ್ಯ ಶ್ರೀಗಳಿಗೆ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ಕೆ ದೇಣಿಗೆಯನ್ನು ಅರ್ಪಿಸಿದರು. ಈ ಸಂಧರ್ಬದಲ್ಲಿ ಎಪಿಎಂಸಿ ದಲಾಲಿ ವರ್ತಕರು ಉಪಸ್ಥಿತರಿದ್ದರು.

Please follow and like us:
error