ದಾನಿಗಳೇ ಈ ಕುಟುಂಬದ ಸಂಕಷ್ಟದತ್ತ ಸ್ವಲ್ಪ ನೋಡಿ..

ಸಹಾಯ ಮಾಡುವ

ವರು ಆ ಕುಟುಂಬದವರ ಈ ಸಂಖ್ಯೆಗೆ ಸಂಪರ್ಕಿಸಿ 7676738263

ಕೊಪ್ಪಳ : ಈ ಕುಟುಂಬದ ಸಂಕಷ್ಟ ನೋಡಿದರೆ ಎಂಥವರ ಮನವೂ ಕಲಕುತ್ತದೆ. ಈ ಸಂಕಷ್ಟದ ಕುಟುಂಬಕ್ಕೆ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿ ಆಗಲಿ ನೆರವಾಗಲಿಲ್ಲ. ತಾಯಿಯ ಕಣ್ಣಲ್ಲಿ ನೀರು, ಮಗ ದೇಹದಲ್ಲಿ ಶಕ್ತಿ ಇಲ್ಲದೇ ಮಲಗಿದ್ದಾನೆ. ಮಗನ ಸೇವೆಯಲ್ಲಿಯೇ ತಾಯಿ ತನ್ನ ಜೀವನವನ್ನು ಕಳೆಯುತ್ತಿದ್ದಾಳೆ ಜೊತೆಗೆ ಮೂರು ಮಕ್ಕಳನ್ನು ಸಾಕಿ ಸಲುಹಬೇಕು. ಮನೆ ಯಜಮಾನ ಪುಟ್ಟ ಪಂಕ್ಚರ್ ಅಂಗಡಿಯೊಂದನ್ನು ನಡೆಸುತ್ತಾರೆ. ಸ್ವಾಭಿಮಾನದ ಜೀವನ. ಯಾರನ್ನಾದರೂ ಸಹಾಯ ಕೇಳಬೇಕೆಂದರೆ ಹಿಂಜರಿಕೆ,

ಕೊಪ್ಪಳದ ಹಮಾಲರ ಬಡವಾಣೆಯ ನಿರ್ಮಿತಿ ಕೇಂದ್ರ ಬಳಿ ಪುಟ್ಟ ಮನೆಯೊಂದರಲ್ಲಿ ಶಾಂತವ್ವ ಮತ್ತು ವಸಂತ ಎನ್ನುವ ದಂಪತಿಗಳಿಗೆ 15 ವರ್ಷ ತುಂಬಿದ ಹನುಂತು ಎಂಬ ಮಗನಿದ್ದಾನೆ. ಮೆದುಳು ಕಾಯಿಲೆಯಿಂದ ಕುಬ್ಜನಾಗಿದ್ದಾನೆ, ದೇಹದ ಯಾವುದೇ ಭಾಗ ಕೆಲಸ ಮಾಡುವುದಿಲ್ಲ. ಜೀವಂತ ಶವವಾಗಿ ಮಲಗಿದ್ದಾನೆ. ಜೊತೆಗೆ ಮೂರು ಜನ ಮಕ್ಕಳಿದ್ದಾರೆ ಅವರೆಲ್ಲ ಓದುತ್ತಿದ್ದಾರೆ. ಹನುಮಂತು ಎರಡನೇ ಮಗ 8 ತಿಂಗಳ ಮಗುವಿದ್ದಾಗ ಹನುಮಂತನಿಗೆ ಈ ಕಾಯಿಲೆ ಆವರಿಸಿಕೊಂಡಿದೆ. ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಅಂದು ದಂಪತಿಗಳು ಚಿಕಿತ್ಸೆ ಕೊಡಿಸಿದ್ದಾರೆ. ಕೆಲ ದಿನಗಳಿದ್ದು ಹಣ ಖಾಲಿಯಾದಾಗ ಮನೆಗೆ ಮರಳಿದ್ದಾರೆ. ಕಳೆದ 14 ವರ್ಷಳಿಂದ ಹೊಸಪೇಟೆ, ಗದಗ, ಕೊಪ್ಪಳದಲ್ಲಿ ಸಣ್ಣಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆ ಕೊಡಿಸುತ್ತ ದೇವರು ಕೊಟ್ಟಂತೆ ಆಗ್ಲಿ ಅಂತಾ ದಂಪತಿಗಳು ಹನುಮಂತನನ್ನು ಸಾಕುತ್ತಿದ್ದಾರೆ.

ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ ಹನುಮಂತ ಮಾತ್ರ ಜೀವಂತ ಶವವಾಗಿ ಹಾಸಿಗೆಯಲ್ಲಿಯೇ ಮಲಗಿದ್ದಾನೆ. ಲಾಕ್ಡೌನ್ ಆದಾಗಂತೂ ಪಡಬಾರದ ಕಷ್ಟವನ್ನು ಕುಟುಂಬ ಪಟ್ಟಿದೆ. ದುಡಿಮೆ ಇಲ್ಲ. ಕೈಯಲ್ಲಿ ದುಡ್ಡಿಲ್ಲ. ಜನಪ್ರತಿನಿಧಿಗಳು ಮುಖಮಾಡಿಲ್ಲ. ಈವರೆಗೆ ಒಂದು ಆಹಾರ ಕಿಟ್್ನ್ನು ಯಾವೊಬ್ಬ ಸದಸ್ಯರೂ ಕೊಟ್ಟಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೂ ಆಗಲಿಲ್ಲ ಜನ್ಮ ನೀಡಿದ ತಾಯಿಕರಳು ಕಣ್ಣೀರಿಡುತ್ತಾ ಹೇಳುತ್ತಾರೆ. ಹನುಮಂತನ ತಮ್ಮ ನಾಗರಾಜ ಅಣ್ಣನ ಸೇವೆಯನ್ನು ಮಾಡುವುದು ನೋಡಿದ್ರೆ ಎಂಥ ಕಠೋರ ಹೃದಯಕ್ಕೂ ಕಣ್ಣೀಮರು ಬರುತ್ತದೆ. ಅಕ್ಕ ನೇತ್ರಾವತಿ ತಮ್ಮನ ಸೇವೆಗೆ ಸದಾ ನೆರವಾಗುತ್ತಾಳೆ. ಹನುಮಂತನಿಗೆ ತಿಂಗಳಿಗೆ 3 -4 ಸಾವಿರ ರೂ ಖರ್ಚು ಆಗುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಸಾಲ ಮಾಡಿ ತೋರಿಸಬೇಕಾಗುತ್ತದೆ ಎನ್ನುತ್ತಾರೆ ತಾಯಿ ಶಾಂತವ್ವ

ಕಳೆದ 2 ತಿಂಗಳಿಂದ ಕೊರೊನಾದಿಂದ ದೇಶವೇ ಲಾಕ್ ಡೌನ್ ಆಗಿ ದುಡಿಯುವ ವರ್ಗಕ್ಕೆ ಬರೆ ಎಳೆದಿದೆ. ಶಾಸಕರು ಸಂಸದರು, ಉದ್ಯಮಿಗಳು ಬಡವರಿಗೆ ಕಾರ್ಮಿಕರಿಗೆ ಸಾವಿರಾರು ಕಿಟ್ಗಳನ್ನು ಕೊಡುತ್ತಿದ್ದಾರೆ ಆದರೆ ಈ ಕುಟುಂಬ ಮಾತ್ರ ಇವರ ಕಣ್ಣಿಗೆ ಬಿದ್ದಿಲ್ಲ. ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರ ಗಮನಕ್ಕೂ ಬಂದಿಲ್ಲ. ಯಾರಾದ್ರೂ ಸಹಾಯ ಮಾಡಿದ್ರೆ ನನ್ನ ಮಗನನ್ನು ಗುಣಪಡಿಸಿಕೊಳ್ಳುತ್ತೇನೆ ಎಂದು ತಾಯಿ ಶಾಂತವ್ವ ಕಣ್ಣೀರಿಡುತ್ತಾಳೆ. ದಾನಿಗಳು ಇತ್ತ ಗಮನಹರಿಸಲಿ

Please follow and like us:
error