ಆಸ್ಪತ್ರೆ ಸಿಬ್ಬಂದಿಗಳ ಅಮಾನುಷ ವರ್ತನೆ  : ಆಸ್ಪತ್ರೆ ಬಯಲಲ್ಲಿ ಮಹಿಳೆಯ ಹೆರಿಗೆ

ಕನಕಗಿರಿ : ಆಸ್ಪತ್ರೆಗೆ ಬಂದ ಗರ್ಭಿಣಿಯೊಂದಿಗೆ ಆಸ್ಪತ್ರೆ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಇದರಿಂದ ಮಹಿಳೆಗೆ ಬಯಲಲ್ಲೇ ಹೆರಿಗೆಯಾಗಿ ರಕ್ತದ ಮಡುವಿನಲ್ಲೇ ಬಿದ್ದು ಒದ್ದಾಡಿದ್ದಾಳೆ. ಪ್ರತಿಯೊಬ್ಬ ಗರ್ಭಿಣಿ ಗೌರವಯುತ ಹೆರಿಗೆಗೆ ಅರ್ಹಳು ಎನ್ನುವ ಸರ್ಕಾರ ಮಾತಿಲ್ಲಿ ಮಣ್ಣುಪಾಲಾಗಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ. ಕನಕಗಿರಿ ತಾಲೂಕು ಗೌರಿಪುರ ಗ್ರಾಮದ ರಿಂದಮ್ಮ ಎಂಬ ಮಹಿಳೆ ಹೆರಿಗೆಗಾಗಿ ಕನಕಗಿರಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಬಾಗಿಲು ಹಾಕಿಕೊಂಡು ಗಡದ್ ನಿದ್ರೆಗೆ ಜಾರಿದ್ದಾರೆ.‌ ಇದರಿಂದ ಆಕೆ ಕುಟುಂಬಸ್ಥರು ನೆಲದ‌ ಮೇಲೆಯೇ ಹೆರಿಗೆ ಮಾಡಿಸಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷದಿಂದ ಗರ್ಭಿಣಿಯೊಬ್ಬರಿಗೆ ಬೀದಿಯಲ್ಲೇ ಹೆರಿಗೆಯಾಗಿದೆ. ಬಾಣಂತಿ ರಕ್ತದ ಮಡುವಿನಲ್ಲೇ ಕುಳಿತಿದ್ದ ದೃಶ್ಯ ನಾಗರೀಕ ಸಮಾಜ ತಲೆ ತಗ್ಗಿಸುವಂತಿದ್ದು, ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.ಇಂದು ಬೆಳ್ಳಂಬೆಳಗ್ಗೆ ರಿಂದಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡಿವೆ. ಕನಕಗಿರಿಯಿಂದ 6 ಕಿ.ಮೀ. ದೂರದ ಗೌರಿಪುರ ಗ್ರಾಮದಿಂದ ಮಹಿಳೆಯನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಬೆಳ್ಳಂಬೆಳಗ್ಗೆ ಆಸ್ಪತ್ರೆಗಳು ಬಂದು ಬಾಗಿಲು ಬಡಿದರೂ ಆಸ್ಪತ್ರೆ ಸಿಬ್ಬಂದಿ  ಜಪ್ಪಯ್ಯ ಅಂದಿಲ್ಲ. ಇದರಿಂದ ಅನಿವಾರ್ಯವಾಗಿ ಬೀದಿಯಲ್ಲೇ ಮಹಿಳೆಗೆ ಹೆರಿಗೆ ಮಾಡಿಸಲಾಗಿದ್ದು, ರಿಂದಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಗ ಆಸ್ಪತ್ರೆ ಪಕ್ಕದ ಮನೆಯ ಸ್ಥಳೀಯರು ಮಹಿಳೆಯ ಸ್ಥತಿ ಕಂಡು ಆಸ್ಪತ್ರೆ ಸಿಬ್ಬಂದಿಗೆ ತರಾಟೆಗೆ ತೆಗದುಕೊಂಡಿದ್ದಾರೆ. ವಿಷಯ ತಿಳಿದ ಕೊಪ್ಪಳ ಡಿಎಚ್ಒ ಅಲಕನಂದಾ ಅವರು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಕನಕಗಿರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ದಿನದ 24 ಗಂಟೆ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಮಹಿಳೆಗೆ ಬೀದಿಯಲ್ಲೇ ಹೆರಿಗೆಯಾಗಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Please follow and like us:
error