ಆಶಾಕಾರ್ಯಕರ್ತೆಯರ ಹೋರಾಟದ 16ನೇ ದಿನ‌-ರಾಜ್ಯದಾದ್ಯಂತ ಪೋಸ್ಟ್ ಕಾರ್ಡ್ ಪತ್ರ ಚಳುವಳಿ

ಕೆಲಸ ಸ್ಥಗಿತ  ಹೋರಾಟದ 7ನೇ ದಿನದಂದು ರಾಜ್ಯದಾದ್ಯಂತ ಪೋಸ್ಟ್ ಕಾರ್ಡ್ ಪತ್ರ ಚಳುವಳಿ ಅಭೂತಪೂರ್ವ ಯಶಸ್ವಿ
ಆಶಾಕಾರ್ಯಕರ್ತೆಯರಿಂದ ಇಂದು ನಡೆದ ‘ಪೋಸ್ಟ್ ಕಾರ್ಡ್ ಪತ್ರ ಚಳುವಳಿ’ಯಲ್ಲಿ ರಾಜ್ಯದ ಮೂಲೆ ಮೂಲೆ ಗಳಿಂದ ಮಾನ್ಯ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದ ಆಶಾಕಾರ್ಯಕರ್ತೆಯರು, ಮಾಸಿಕ ರೂ.12,000 ಗೌರವಧನ ನೀಡಬೇಕು ಮತ್ತು ಕೊರೋನಾ ಸೋಂಕಿನಿಂದ ರಕ್ಷಣೆ ಗೆ ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ ಇತ್ಯಾದಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಭಾಗವಾಗಿ ಕೊಪ್ಪಳದಲ್ಲಿ ಕೂಡ ನೂರಾರು ಆಶಾ ಕಾರ್ಯಕರ್ತೆಯರು ನಗರದ ಪೋಸ್ಟ್ ಆಫೀಸ್ ಹತ್ತಿರ ಅಂಚೆ ಚೀಟಿಯನ್ನು ಪೋಸ್ಟಿಗೆ ಹಾಕುವ ಮೂಲಕ ಪತ್ರ ಚಳುವಳಿ ಯನ್ನು ಯಶಸ್ವಿಗೊಳಿಸಿದರು ಆದರೆ ಕಳೆದ 16 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸಮಸ್ಯೆ ಪರಿಹರಿಸದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಆಶಾಕಾರ್ಯಕರ್ತೆಯರು ತಮ್ಮ ಕುಟುಂಬದ ಸದಸ್ಯರ ಜೊತೆಯಲ್ಲಿ ಹೋರಾಟ ನಡೆಸಲು ಸಿದ್ಧತೆಗಳನ್ನು ಮಾಡಿಕೊಂಡಿರುವ ಕಾರ್ಯಕರ್ತೆಯರು ಗೆಲ್ಲುವವರೆಗೂ ಹೋರಾಟ ವನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ.
ಜೀವನ ಯೋಗ್ಯ ವೇತನ/ಗೌರವಧನ ನೀಡದೇ ಕೊರೋನಾ ವಿರುದ್ಧದ ಫ್ರಂಟ್ ಲೈನ್ ವಾರಿಯರ್ಸ್ ಎಂದು ಹೊಗಳಿ, ಹೂ ಮಳೆ ಸುರಿಸಿ, ಶಾಲು ಹಾಕಿ ಸನ್ಮಾನಿಸಿದರೆ, ಕೆಲವರನ್ನು ದೇಶಕ್ಕೆ ರಾಜ್ಯಕ್ಕೆ ಅತ್ಯುತ್ತಮ ಕಾರ್ಯಕರ್ತೆ ಎಂದು ನಾಮಕರಣ ಮಾಡಿ  ಪುಕ್ಕಟೆ ಯಾಗಿ ಹಗಲು ರಾತ್ರಿ ಗಾಣದೆತ್ತಿನಂತೆ ದುಡಿಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಕಳೆದ 16 ದಿನಗಳ ಹಿಂದೆ ಸಿಡಿದೆದ್ದಿರುವ ರಾಜ್ಯದ 42,000 ಆಶಾಕಾರ್ಯಕರ್ತೆಯರು  ಅತ್ಯಂತ ಸಮರಶೀಲ ವಾಗಿಯೂ ಮತ್ತು ಶಿಸ್ತಿನಿಂದಲೂ ಕಳೆದ 16 ದಿನಗಳಿದಂಲೂ ವಿವಿಧ ಹಂತದ ಹೋರಾಟ ಮಾಡುತ್ತಿದ್ದಾರೆ. ಇವರ ಈ ಹೋರಾಟ ರಾಜ್ಯದ ಜನತೆಯ ಮನ ಗೆದ್ದಿದೆ. 16 ದಿನಗಳ ಸುಧೀರ್ಘ ಹೋರಾಟ ನಡೆಸಿದರೂ ಸಮಸ್ಯೆ ಗಳ ಕುರಿತು ಮಾತುಕತೆ ಯನ್ನು ನಡೆಸುಷ್ಟು ಸೂಕ್ಷ್ಮತೆಯಿಲ್ಲದ ಸರ್ಕಾರದ ವಿರುದ್ಧ ಆಶಾಕಾರ್ಯಕರ್ತೆಯರು ಮಾತ್ರವಲ್ಲ ರಾಜ್ಯದಾದ್ಯಂತ ಜನರ ಆಕ್ರೋಶವೂ ಹೆಚ್ಚುತ್ತಿದೆ. ರಾಜ್ಯದ ಉದ್ದಕ್ಕೂ ಜನತೆಯ ಒಂದೇ ಮಾತು, ಇವರಿಗೆ ಮಾಸಿಕ ರೂ.12,000 ಗೌರವಧನ ನೀಡಲೇಬೇಕು. ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಇವರಿಗೆ ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ ಗಳನ್ನು ನೀಡಿ ಇವರ ಆರೋಗ್ಯ ವನ್ನು ಕಾಪಾಡಬೇಕು ಎನ್ನುವ ಜನರ ಅಭಿಪ್ರಾಯ ದಿನೇ ದಿನೇ ಗಟ್ಟಿಯಾಗುತ್ತಿದೆ.
ಆದ್ದರಿಂದಲೇ ಈ ನ್ಯಾಯಯುತ ಹೋರಾಟಕ್ಕೆ ಈ ಹಿಂದೆ ಸಚಿವರು, ಶಾಸಕರು ಮತ್ತು ಸಂಸದರು ಬೆಂಬಲಿಸಿ ಪತ್ರ ನೀಡಿದ್ದರು. ಇದೀಗ  ರೈತ ಸಂಘಟನೆ ಗಳ ಮುಖಂಡರು, ಯುವಜನ ಸಂಘಟನೆ ಗಳ ಮುಖಂಡರು ರಾಜ್ಯದ ನಡೆಯುತ್ತಿರುವ ಈ ಅಭೂತಪೂರ್ವ ಮಹಿಳಾ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮಹಿಳಾ ಕಾರ್ಮಿಕರ ನ್ಯಾಯಯುತ ಬೇಡಿಕೆ ಗಳನ್ನು ಈಡೇರಿಸಬೇಕೆಂದು  ಶರಣು ಗಡ್ಡಿ  ಕೌಶಲ್ಯ ದೊಡ್ಡಗೌಡರು  ಆಶಾ ಕಾರ್ಯಕರ್ತರಾದ   ಲಲಿತ ಹಿರೇಮಠ್, ಶೃತಿ, ಪುಷ್ಪ, ಪ್ರೇಮ, ಗೀತಾ, ಸವಿತಾ, ಹುಲಿಗಮ್ಮ, ವಿಜಯಲಕ್ಷ್ಮಿ, ಜ್ಯೋತಿ, ನಾಗರತ್ನ, ರೇಣುಕಾ, ರಜಿಯಾಬೇಗಂ, ಚಂಪಾ, ನೀಲಾವತಿ, ಅನ್ನಪೂರ್ಣ, ವಿನೋದ, ಲಲಿತಾ ಆರ್ ಟಿ, ಮುಂತಾದವರು ಭಾಗವಹಿಸಿದ್ದರು,  ಸರ್ಕಾರ ವನ್ನು ಒತ್ತಾಯಿಸುತ್ತಿದ್ದಾರೆ.
Please follow and like us:
error