ಆರ್ಯುವೇದಿಕ್ ಕಾಲೇಜಿನಲ್ಲಿ ರಸ ಪ್ರಶ್ನೆಕಾರ್ಯಕ್ರಮ

 

ಕೊಪ್ಪಳ : ಜೂನ್ ೦೩, ಇತ್ತಿಚಿಗೆ ನಗರದ ಶ್ರೀ ಜ.ಗು.ಗ.ಆರ್ಯುವೇದಿಕ್ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪ್ರಾಚಾರ್ಯರಾದ ಬಿ.ಎಸ್. ಸವಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದ್ರವ್ಯಗುಣ, ರಸಶಾಸ್ತ್ರ, ರೋಗನಿಧಾನ ಮತ್ತು ಚರಕ ಸಂಹಿತಾ ವಿಷಯಗಳ ಸುಮಾರು ೩೦೦ ಪ್ರಶ್ನೆಗಳನ್ನು ೫ ಸುತ್ತುಗಳಲ್ಲಿ ಕೇಳಲಾಗಿತ್ತು. ೬ ತಂಡಗಳು ಭಾಗವಹಿಸಿ ಅದ್ಬುತವಾಗಿ ಉತ್ತರಿಸಿದರು. ಒಟ್ಟು ೬ ತಂಡಗಳ ಈ ರಸ ಪ್ರಶ್ನೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು,
ಇದರಲ್ಲಿ ಅಭ್ರಕತಂಡ ಪ್ರಥಮ ಬಹುಮಾನ, ಶಿಲಾಜತು ತಂಡ ದ್ವಿತೀಯ ಬಹುಮಾನ ಮತ್ತು ಮಾಕ್ಷಿಕ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಾಕ್ಟರ್‌ಗಳಾದ .ಎಸ್ ಎಸ್ ಶಿರೂರಮಠ, ರುದ್ರಾಕ್ಷಿ ದೇವರಗುಡಿ, ಎಸ್ ಎಸ್ ಕುಲಕರ್ಣಿ, ಡಾ. ಕಿಶೋರ್, ಗಂಗಾಧರ, ಖಾಲೀದ್,
ತೀರ್ಪುಗಾರರಾಗಿ ಡಾ ಸಿ ಎಸ್ ಕರಮುಡಿ, ಡಾ ಶಶಿಧರ ಜೆ, ಡಾ. ವೆಂಕಮ್ಮ, ಡಾ ಹೇಮಾ ಕಾರ್ಯನಿರ್ವಹಿಸಿದರು,
ಡಾ ಪಲ್ಲವಿ ಕಾರ್ಯಕ್ರಮದ ವಂದಿಸಿದರು.
ಅಭ್ರಕತಂಡದ ಸದಸ್ಯರು ಪ್ರಾಚಾರ್ಯರಾದಡಾ ಬಿ ಎಸ ಸವಡಿಯವರಿಂದ ಪ್ರಶಸ್ತಿ ಸ್ವಿಕರಿಸಿದರು.

Please follow and like us:
error