ಆಮೆಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ಟ್ರಾಪಿಕ್ ಜಾಮ್ ನಲ್ಲಿ ಜನಸಾಮಾನ್ಯರ ಪರದಾಟ

 ಕೊಪ್ಪಳ : ಹುಬ್ಬಳ್ಳಿ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯ ಸಿಸಿ ರಸ್ತೆ ಕಾಮಗಾರಿ ಮೊದಲು ತೀವ್ರಗತಿಯಲ್ಲಿ ಆರಂಭಗೊಂಡಿದ್ದು  ಈಗ ಕುಂಟುತ್ತಾ ಸಾಗಿದೆ. ಹೀಗಾಗಿ ಕೊಪ್ಪಳದಿಂದ ಹೊಸಪೇಟೆ ಪ್ರಯಾಣಿಸಬೇಕೆಂದರೆ ಜನಸಾಮಾನ್ಯರು ಹೈರಾಣವಾಗಿ ಹೋಗುತ್ತಾರೆ.

 ಸಿಸಿ ರಸ್ತೆ, ಪ್ಲೈ ಓವರ್ ಕೆಲಸಗಳು ನಿಧಾನಗತಿಯಲ್ಲಿ ಸಾಗಿರುವುದರಿಂದ ಕಳೆದ ಒಂದು ವರ್ಷದಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ. ದೊಡ್ಡ ದೊಡ್ಡ ವಾಹನಗಳು ಅಡ್ಡ ಬಂದು ನಿಲ್ಲುವುದರಿಂದ ಸಣ್ಣ ವಾಹನಗಳಿಗೆ ಹೋಗಲು ರಸ್ತೆಯಲ್ಲಿ ಅವಕಾಶ ಇಲ್ಲದೇ ಒದ್ದಾಡುತ್ತಾರೆ.

ಕಲ್ಯಾಣಿ ಫ್ಯಾಕ್ಟರಿಯ ಹತ್ತಿರದಿಂದ ಗಿಣಗೇರಾ ಪ್ಲೈ ಓವರ್ ದಾಟಿ ಮುಂದೆ ಹೋಗುವ ತನಕ ಟ್ರಾಫಿಕ್ ಜಾಮ್ ನಿಂದಾಗಿ ತಾಸುಗಟ್ಟಲೇ ಕಾಯಬೇಕಾದ ಅನಿವಾರ್ಯತೆಯಿಂದ ಜನಸಾಮಾನ್ಯರು ಸರಕಾರಕ್ಕೆ ಶಾಪ ಹಾಕುತ್ತಿದ್ಧಾರೆ. ಮಂತ್ರಿಗಳು, ಶಾಸಕರು, ಸಂಸದರು ದೊಡ್ಡ ದೊಡ್ಡ ವಾಹನಗಳಲ್ಲಿ ಅಡ್ಡಾಡುತ್ತಾರೆ ಅವರಿಗೆ ಈ ರಸ್ತೆಯ ಅನುಭವವೇ ಆಗುವುದಿಲ್ಲ. ಜನಸಾಮಾನ್ಯರ ಕಷ್ಟಗಳತ್ತ ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಲಿ ಎಂದು ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

 

Please follow and like us:
error