ಆನೆಗೊಂದಿ ಉತ್ಸವ : ಸವಿರುಚಿಮಯವಾದ ಅಡುಗೆ ರಾಣಿ ಸ್ಪರ್ಧೆ


ಕೊಪ್ಪಳ ಜ.  : ಆನೆಗೊಂದಿ ಉತ್ಸವ-2020ರ ನಿಮಿತ್ತ ಆನೆಗೊಂದಿಯಲ್ಲಿ ನಡೆದ ಅಡುಗೆ ರಾಣಿ ಸ್ಪರ್ಧೆ ಸವಿರುಚಿಮದೊಂದಿಗೆ ನಡೆಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ ಹಾಗೂ  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಇಂದು (ಜ.5) ಮಹಿಳೆಯರಿಗಾಗಿ ಅಡುಗೆ ತಯಾರಿಸುವ “ಅಡುಗೆ ರಾಣಿ’’ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅಡುಗೆ ರಾಣಿ ಸ್ಪರ್ಧೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿಶ್ವನಾಥ ರೆಡ್ಡಿ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಹಾಗೂ ಆನೆಗೊಂದಿ ಗ್ರಾ.ಪಂ. ಅಧ್ಯಕ್ಷೆ ಅಚಿಜನಾದೇವಿ ರವರು ಗ್ಯಾಸ್ ಸ್ಟಾರ್ಟ್ ಮಾಡುವುದರ ಚಾಲನೆ ನೀಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ನಾರಾಯಣರೆಡ್ಡಿ ಕನಕರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸ್ಪರ್ಧೆಯ ವೀಕ್ಷಣೆ ಮಾಡಿದರು.
ಸ್ಪರ್ಧಾಳುಗಳ ಹಾಗೂ ವಿಜೇತರ ವಿವರ;
ಅಡುಗೆ ತಯಾರಿಸುವ ಸ್ಪರ್ಧೆಯಲ್ಲಿ ಎರಡು ವಿಭಾಗಗಳಿದ್ದು ಮೊದಲನೆಯದು ವಿಜಯನಗರ ಪಾರಂಪರಿಕ ಅಡುಗೆ, ಎರಡನೆಯದು ಸ್ಥಳೀಯ ಪದ್ಧತಿಯ ಆಹಾರ ತಯಾರಿಕೆ ಸೇರಿ ಒಟ್ಟು 37 ತಂಡಗಳು ಭಾಗವಹಿಸಿದ್ದವು.  ಇದರಲ್ಲಿ 10 ಪಾರಂಪರಿಕ, 27 ಸ್ಥಳೀಯ ಪದ್ದತಿ ಆಹಾರ ತಯಾರಿಕೆ ತಂಡಗಳು ಸ್ಪರ್ಧಿಸಿದ್ದವು.
ಸ್ಪರ್ಧೆಯ ಫಲಿತಾಂಶವು ಇಂದು ಸಂಜೆ ಹೊರಬಂದಿದ್ದು, ಸಂಸದ ಕರಡಿ ಸಂಗಣ್ಣ ಅವರು ವಿಜಯನಗರ ಪಾರಂಪರಿಕ ಅಡುಗೆ ಸ್ಫರ್ಧೆಯ ವಿಜೇತರ ಹೆಸರನ್ನು  ಮತ್ತು ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮನವಳ್ಳಿ ಅವರು ಸ್ಥಳೀಯ ಆಹಾರ ಸ್ಪರ್ಧೆಯ ವಿಜೇತರ ಹೆಸರನ್ನು ಘೋಷಿಸಿದರು.  ಪಾರಂಪರಿಕ ಆಹಾರ ತಯಾರಿಕೆ ಸ್ಪರ್ಧೆಯ ವಿಜೇತರ ಪೈಕಿ  ಪ್ರಥಮ ಸ್ಥಾನ ಸುವರ್ಣ ಮತ್ತು ದಿಕ್ಷಾ, ದ್ವೀತಿಯ ಶೋಭಾ ಮತ್ತು ಮೀನಾಕ್ಷಿ ಹಾಗೂ ತೃತಿಯ ರಾಜೇಶ್ವರಿ ಮತ್ತು ಹರೀಕಾ ಪಡೆದರೆ.  ಸ್ಥಳೀಯ ಆಹಾರ ಪದ್ದತಿ ಸ್ಪರ್ಧೆಯಲ್ಲಿ ಪ್ರಥಮ ವೈ. ವಿಂಧ್ಯಾ ಗಂಗಾವತಿ, ದ್ವೀತಿಯ ಕಾವ್ಯ ಮತ್ತು ಆಶಾ, ತೃತಿಯಾ ಸ್ಥಾನದಲ್ಲಿ ಗೀತಾ ಮತ್ತು ಶಶಿಕಲಾರವರು ವಿಜೇತರಾದರು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ಆರೋಗ್ಯ ರಕ್ಷಣೆ ಪ್ರಸ್ತುತ ದಿನಗಳಲ್ಲಿ ತುಂಬಾ ಮುಖ್ಯ. ಇಂದು ಆಹಾರ ಬೆಳೆಯುವ ಪದ್ದತಿಯು ರಾಸಾಯನಿಕತೆಯಿಂದ ಕೂಡಿದೆ. ಆದ್ದರಿಂದ ಜನರ ಆರೋಗ್ಯದಲ್ಲಿ ಏರುಪೇರುಗಳು ಕಂಡು ಬರುತ್ತಿವೆ. ಕುಟುಂಬದ ಆರೋಗ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿರುತ್ತದೆ. ಮನುಷ್ಯನ ಆರೋಗ್ಯ ಉತ್ತಮವಾಗಿರಬೇಕೆಂದರೆ ಹಿಂದಿನ ಪದ್ದತಿಯ ನವಣಿ, ಸಜ್ಜಿ, ಮುದ್ದೆ ರೂಪದ ಆಹಾರವನ್ನು ಸೇವಿಸಬೇಕು. ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಜನರು ಆರೋಗ್ಯದ ಕಡೆ ಗಮನ ಹರಿಸಬೇಕು, ಜೊತೆಗೆ ದೇಶಿಯ ತಳಿಯಾದ ಗೋವುಗಳನ್ನು ಸಂರಕ್ಷಣೆ ಮಾಡಬೇಕು ಎಂದರು.
ಆನೆಗೊAದಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಂಜನಾದೇವಿ, ಗಂಗಾವತಿ ತಹಶಿಲ್ದಾರ ಎಲ್.ಡಿ ಚಂದ್ರಕಾAತ, ಆಹಾರ ಸಂರಕ್ಷಣಾ ಅಧಿಕಾರಿ ಅಲಕಾನಂದಾ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ನಾರಾಯಣರೆಡ್ಡಿ ಕನಕರೆಡ್ಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದಾರಾಮೇಶ್, ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error