ಆನೆಗೊಂದಿ ಉತ್ಸವ : ವಿವಿಧ ಕಾರ್ಯಕ್ರಮಗಳ ಸಂಪೂರ್ಣ ವರದಿ

ಸ್ಲೋ ಸೈಕಲ್ ರೇಸ್ ಪಂದ್ಯಕ್ಕೆ ಗ್ರಾ.ಪಂ. ಅಧ್ಯಕ್ಷರಿಂದ ಚಾಲನೆ
ಕೊಪ್ಪಳ ಜ.: ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆ ಮುಂಭಾಗದಲ್ಲಿ ಇಂದು (ಜ.7) ಹಮ್ಮಿಕೊಳ್ಳಲಾದ ಸ್ಲೋ ಸೈಕಲ್ ರೇಸ್ ಪಂದ್ಯಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು ವಿಜಿಲ್ ಹಾಕುವುದರ ಮೂಲಕ ಚಾಲನೆ ನೀಡಿದರು.
ಆನೆಗೊಂದಿ ಉತ್ಸವವು ಇದೇ ಜನವರಿ. 09 ಮತ್ತು 10 ರಂದು ನಡೆಯಲಿದ್ದು, ಉತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೈಕ್ ಸ್ಟಂಟ್, ಗಾಳಿಪಟ ಉತ್ಸವ, ಕಬಡ್ಡಿ, ವಾಲಿಬಾಲ್, ಸೈಕಲ್ ಜಾಥಾ, ಹಗ್ಗ-ಜಗ್ಗಾಟ, ಕೆಸರು ಗದ್ದೆ ಓಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ಸ್ಲೋ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.  ಈ ಸ್ಪರ್ಧೆಯಲ್ಲಿ ಶಾಲಾ ಕಾಲೇಜುಗಳ ಮಕ್ಕಳು, ಸಾರ್ವಜನಿಕರು ಸ್ಪರ್ಧಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶೀಲ್ದಾರ ಎಲ್.ಡಿ ಚಂದ್ರಕಾAತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಳಿರು ತೋರಣಗಳಿಂದ ಅಲಂಕಾರಗೊAಡ ಆನೆಗೊಂದಿ

ಪ್ರದರ್ಶನಕ್ಕೆ ಶಾಸಕ ಪರಣ್ಣ ಮುನವಳ್ಳಿ ಅವರಿಂದ ಚಾಲನೆ
ಕೊಪ್ಪಳ ಜ.: ಆನೆಗೊಂದಿ ಉತ್ಸವ-2020ರ ಅಂಗವಾಗಿ ತಳಿರು ತೋರಣಗಳಿಂದ ಅಲಂಕಾರಗೊAಡಿರುವ ಆನೆಗೊಂದಿ ಗ್ರಾಮದ ಪ್ರದರ್ಶನಕ್ಕೆ ದ್ವಾರ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುವುದರ ಮೂಲಕ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಇಂದು (ಜ.7) ಚಾಲನೆ ನೀಡಿದರು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವವು ಇದೇ ಜನವರಿ. 09 ಮತ್ತು 10 ರಂದು ನಡೆಯಲಿದ್ದು, ಈ ಪ್ರಯುಕ್ತ ಆನೆಗೊಂದಿ ಗ್ರಾಮ ಪಂಚಾಯತ್ ಕಾರ್ಯಾಲಯ, ಗ್ರಾಮದ ಮನೆ-ಮನೆಗಳು, ಅಂಗಡಿಗಳ ಅಂಗಳ ಬಣ್ಣ-ಬಣ್ಣದ ರಂಗೋಲಿಯಿAದ ಕೂಡಿದ್ದು, ತಳಿರು ತೋರಣಗಳಿಂದ ಶೃಂಗಾರಗೊAಡಿವೆ.  ಉತ್ಸವದ ಅಂಗವಾಗಿ ಆನೆಗೊಂದಿ ಗ್ರಾಮದಲ್ಲಿ ಉತ್ತಮ ರೀತಿಯಲ್ಲಿ ಅಲಂಕಾರಗೊAಡಿರುವ ಮನೆಗೆ ಬಹುಮಾನ ದೊರೆಯಲಿದ್ದು, ಈ ನಿಟ್ಟಿನಲ್ಲಿ ಆನೆಗೊಂದಿ ಗ್ರಾಮವು ಆಕರ್ಷಣೀಯವಾಗಿ ಶೃಂಗಾರಗೊAಡಿದ್ದವು. ಉತ್ಸವಕ್ಕೆ ಆಗಮಿಸುವ ಗಣ್ಯರ ಹಾಗೂ ಸಾರ್ವಜನಿಕರ ಮತ್ತು ಪ್ರವಾಸಿಗರ ಕಣ್ಮನ ಸೆಳೆದವು.
ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ತಹಶೀಲ್ದಾರ ಎಲ್.ಡಿ ಚಂದ್ರಕಾAತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾ.ಪಂ., ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. (ಫೋಟೋ ಕಳುಹಿಸಿದೆ)

ಆಕರ್ಷಕ ಸ್ಥಿರ ಹಾಗೂ ಹಗ್ಗದ ಮಲ್ಲಕಂಬ ಪ್ರದರ್ಶನ

ಕೊಪ್ಪಳ ಜ.:  ಆನೆಗೊಂದಿ ಉತ್ಸವದ ಅಂಗವಾಗಿ ಕರ್ನಾಟಕ ಅಮೆಚರ್ ಮಲ್ಲಕಂಬ ಸಂಸ್ಥೆ ಲಕ್ಷೆö್ಮÃಶ್ವರ, ತಂಡದ ವತಿಯಿಂದ ಆಕರ್ಷಕ ಮಲ್ಲಕಂಬ ಪ್ರದರ್ಶನ ನಡೆಯಿತು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು (ಜ.7) ಹಮ್ಮಿಕೊಳ್ಳಲಾದ ಮಲ್ಲಕಂಬ ಪ್ರದರ್ಶನಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು ಚಾಲನೆ ನೀಡಿದರು.
ತುಳಸಗಿ, ಬಾಗಲಕೋಟೆ, ಲಕ್ಷೆö್ಮÃಶ್ವರ, ಕಲದಗಿ, ರಾಮಗಿರಿ ಊರುಗಳನ್ನೊಳಗೊಂಡ ಕರ್ನಾಟಕ ಅಮೆಚರ್ ಮಲ್ಲಕಂಬ ಸಂಸ್ಥೆ ಲಕ್ಷೆö್ಮÃಶ್ವರ, ಈ ಸಂಸ್ಥೆಯ ಸಹಾಸಿಗಳಿಂದ ಹಗ್ಗದ ಮಲ್ಲಕಂಬ ಪ್ರದರ್ಶನದಲ್ಲಿ 37 ಜನ ಬಾಲಕಿಯರು ಹಾಗೂ ಸ್ಥಿರ ಮಲ್ಲಕಂಬ ಪ್ರದರ್ಶನದಲ್ಲಿ 36 ಜನ ಬಾಲಕರು  ಪಾಲ್ಗೊಂಡು ಯೋಗ ಸೇರಿದಂತೆ ವಿಭಿನ್ನ ರೀತಿಯಲ್ಲಿ ವ್ಯಾಯಾಮಗಳನ್ನು ಮಾಡುವುದರ ಮೂಲಕ ಸಾರ್ವಜನಿಕರ ಮನ ಸೆಳೆದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶೀಲ್ದಾರ ಎಲ್.ಡಿ ಚಂದ್ರಕಾAತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಕರ್ನಾಟಕ ಅಮೆಚರ್ ಮಲ್ಲಕಂಬ, ಲಕ್ಷೆö್ಮÃಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಫ್. ಕೊಡ್ಲಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜಿಸಿದ ಆನೆಗೊಂದಿ ಉತ್ಸವ : ಸಾರ್ವಜನಿಕರಿಂದ ಹರ್ಷ
ಕೊಪ್ಪಳ ಜ.: ಆನೆಗೊಂದಿ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ಸಾರ್ವಜನಿಕರು ಸ್ಪರ್ಧಾ ಸ್ಥಳಗಳಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020ರ ಅಂಗವಾಗಿ ಆನೆಗೊಂದಿಯ ಗ್ರಾಮದಲ್ಲಿ ಇಂದು (ಜ.7) ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪಗಡೆಯಾಟ, ಕೆಸರು ಗದ್ದೆ ಓಟ, ಹಗ್ಗ-ಜಗ್ಗಾಟ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿಕಲ್ಲು ಎತ್ತುವುದು, ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು.
ಚಿತ್ರಕಲಾ ಸ್ಪರ್ಧೆ;
ಉತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾದ ಚಿತ್ರಕಲೆ  ಸ್ಪರ್ಧೆಯಲ್ಲಿ 43 ಸ್ಪರ್ಧಾಳುಗಳು ಭಾಗವಹಿಸಿದ್ದರು.  ಒಟ್ಟು 84 ಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಪ್ರಥಮ ಸ್ಥಾನ ಹನುಮೇಶ, ಕೊಟ್ಟೂರು ಶಾಲೆ, ಗಂಗಾವತಿ ಅವರಿಗೆ ಗಗನ್ ಮಹಲ್ ಚಿತ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜಶೇಖರ ಯಲಬುರ್ಗಾ ಅವರ ವಾಲಿಕೋಟೆ ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.  ಶಶಿಭೂಷಣ್ ಎಂ.ಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಸ್ಲಾಂಪುರ ಅವರ ವಾಲಿಕೋಟೆಯ ಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ.
ರಂಗೋಲಿ ಸ್ಪರ್ಧೆ;
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ  29 ಮಹಿಳೆಯರು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನ ಲಕ್ಷಿö್ಮÃ (ಸಾಣಾಪುರ), ದ್ವಿತೀಯ ಶೃತಿ ಹಿರೇಮಠ (ರಾಂಪುರ), ತೃತೀಯ ಧರ್ಮವತಿ (ಹನುಮನಹಳ್ಳಿ) ಸ್ಥಾನ ಪಡೆದಿದ್ದಾರೆ.  ರಂಗೋಲಿ ಸ್ಪರ್ಧಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೇರಿದಂತೆ ಅನೇಕರು ಭೇಟಿ ನೀಡಿ ರಂಗೋಲಿ ವೀಕ್ಷಿಸಿದರು.
ಪಗಡೆಯಾಟ;
ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಮ್ಮಿಕೊಳ್ಳಲಾದ ಪಗಡೆ ಆಟ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ 05 ಮಹಿಳೆಯರು ಭಾಗವಹಿಸಿದ್ದರು.  ಇದರಲ್ಲಿ ಪ್ರಥಮ ಸ್ಥಾನ ಗೀತಾ ಕೆ (ಆನೆಗೊಂದಿ), ದ್ವಿತೀಯ ಮಂಜುಳಾ ಎಮ್  (ಗಂಗಾವತಿ), ತೃತೀಯ ಜಯಲಕ್ಷ್ಮಿ ಕೆ.ಎಲ್  (ಬಸಪಟ್ಟಣ) ಸ್ಥಾನ ಪಡೆದಿದ್ದಾರೆ.  ಪುರುಷರ ಪಗಡೆ ಆಟ ಸ್ಪರ್ಧೆಯಲ್ಲಿ 03 ಪುರುಷರು ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನು ಚರಂಡಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಕೊಪ್ಪಳ), ದ್ವಿತೀಯ ಮಾನಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಕೊಪ್ಪಳ), ತೃತೀಯ ನಾಗರಾಜ ಎಸ್.ಕೆ.ಎನ್.ಜಿ ಕಾಲೇಜು (ಗಂಗಾವತಿ) ಸ್ಥಾನ ಪಡೆದಿದ್ದಾರೆ.
ಕೆಸರು ಗದ್ದೆ ಓಟ;
ಕೆಸರು ಗದ್ದೆ ಓಟಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಜಂಟಿಯಾಗಿ ಚಾಲನೆ ನೀಡಿದರು.  ಓಟದಲ್ಲಿ ಒಟ್ಟು 45 ಸ್ಪರ್ಧಾಳುಗಳು ಭಾಗವಹಿಸಿದ್ದು, ಒಂದು ಭಾಗದಲ್ಲಿ 09 ಜನರಂತೆ ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಪ್ರಾರಂಭಿಸಿ, ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರನ್ನು ಅಂತಿಮ ಪಂದ್ಯಾವಳಿಗೆ ಆಯ್ಕೆ ಮಾಡಲಾಯಿತು.  ಅಂತಿಮ ಸ್ಪರ್ಧೆಯಲ್ಲಿ ಒಟ್ಟು 10 ಜನ ಸ್ಪರ್ಧಿಗಳಿಂದ ಕೆಸರು ಗದ್ದೆ ಓಟ ನಡೆಯಿತು. ಇದರಲ್ಲಿ ಪ್ರಥಮ ಸ್ಥಾನ ಪ್ರೇಮರಾಜ್ ರಾಮಪ್ಪ, ದ್ವಿತೀಯ ಸ್ಥಾನವನ್ನು ಪೊಲೀಸ್ ಇಲಾಖೆಯ ಶರಣಪ್ಪ ಪಡೆದರೆ.  ತೃತೀಯ ಸ್ಥಾನವನ್ನು ಎಂ.ಡಿ ಸಮೀರ್ ಪಡೆದರು.
ಕೆಸರು ಗದ್ದೆಯಲ್ಲಿ ಹಗ್ಗ-ಜಗ್ಗಾಟ;
ಉತ್ಸವದ ಅಂಗವಾಗಿ ಪೊಲೀಸ್, ಆರ್.ಡಿ.ಪಿ.ಆರ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಏರ್ಪಡಿಸಲಾದ ಹಗ್ಗ-ಜಗ್ಗಾಟ ಸ್ಪರ್ಧೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು. ಈ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.  ಇದರಲ್ಲಿ ಪ್ರಥಮ ಸ್ಥಾನ ಪೊಲೀಸ್ ಇಲಾಖೆ ಡಿ.ಆರ್ ಕೊಪ್ಪಳ ತಂಡ, ದ್ವಿತೀಯ ಸ್ಥಾನ ಆನೆಗೊಂದಿ ಮುಸ್ತಾಫ ತಂಡ,  ತೃತೀಯ ಸ್ಥಾನ ಬಸವನದುರ್ಗ ವೆಂಕಟೇಶ ಬಾಬು ತಂಡ ಪಡೆದಿದೆ.
ವಿಲ್ಹ್ ಚೇರ್ ಸ್ಪರ್ಧೆ;
ಪುರುಷರ ವಿಲ್ಹ್ ಚೇರ್ ಸ್ಪರ್ಧೆಯಲ್ಲಿ ಒಟ್ಟು 4 ಸ್ಪರ್ಧಿಗಳು ಭಾಗವಹಿಸಿದ್ದು, ಪ್ರಥಮ ಗಣೇಶ ಬಂಡಿವಡ್ಡರ (ಗೊಂಡಬಾಳ), ದ್ವಿತೀಯ ಅಶೋಕ ಡಂಬರ್ (ವಡ್ಡರಹಟ್ಟಿ), ತೃತೀಯ ಯಲ್ಲಪ್ಪ (ವಡ್ಡರಹಟ್ಟಿ) ಸ್ಥಾನಗಳನ್ನು ಪಡೆದಿದ್ದಾರೆ.
ಸ್ಲೋ ಸೈಕಲ್ ರೈಸ್ ಸ್ಪರ್ಧೆ;
ಸ್ಲೋ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಒಟ್ಟು ಈ ಸ್ಪರ್ಧೆಯಲ್ಲಿ 29 ಸ್ಪರ್ಧಾಳುಗಳು ಭಾಗವಹಿಸಿದ್ದು, 3 ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ.  1 ಗುಂಪಿಗೆ 10 ರಂತೆ ಸ್ಲೋ ಸೈಕಲ್ ರೈಸ್ ಮಾಡಿಸಲಾಗಿತ್ತು.  ಇದರಲ್ಲಿ ಪ್ರಥಮ ಸ್ಥಾನ ವೆಂಕಟೇಶಬಾಬು (ಆನೆಗೊಂದಿ), ದ್ವಿತೀಯ ಬೋಗಪ್ಪ (ಗಂಗಾವತಿ), ತೃತೀಯ ವಿರನಗೌಡ ಕುಲಕರ್ಣಿ ಹಾರಳ ಸ್ಥಾನ ಪಡೆದಿದ್ದಾರೆ.
ಸಂಗ್ರಹಣೆ ಕಲ್ಲು ಎತ್ತುವ ಸ್ಪರ್ಧೆ;
ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 22 ಪುರುಷರ ಭಾಗವಹಿಸಿದ್ದರು.  ಈ ಸ್ಪರ್ಧೆಯಲ್ಲಿರುವ ಸಂಗ್ರಾಣಿ ಕಲ್ಲಿನ ತೂಕ  55, 57, 62, 65, 70, 72, 74, 77, 78, 80 ಕೆಜಿ ಭಾರವನ್ನು ಹೊಂದಿದ್ದವು.  ಪ್ರಥಮ ಸ್ಥಾನ ಪಡೆದ ಹಾಲಪ್ಪ (ಕುಷ್ಟಗಿ) 77 ಕೆ.ಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿದ್ದರೆ,  ದ್ವಿತೀಯ ಸ್ಥಾನ ಪಡೆದ ಹನುಮಂತ ತುರುವಿಹಾಳ 74 ಕೆ.ಜಿ, ತೃತೀಯ ಸ್ಥಾನ ಪಡೆದ ಸೋಮನಾಥ (ಕುಷ್ಟಗಿ) 72 ಕೆ.ಜಿ ಸಂಗ್ರಾಣಿ ಕಲ್ಲು ಎತ್ತಿದ್ದಾರೆ.
ಕಲ್ಲು ಎತ್ತುವ ಸ್ಪರ್ಧೆ;
ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 11 ಸ್ಪರ್ಧಿಗಳು ಭಾಗವಹಿಸಿದ್ದರು.  ಇದರಲ್ಲಿ 100 ಮತ್ತು 120 ಕೆಜಿ ಕಲ್ಲುಗಳನ್ನು ಇರಿಸಲಾಗಿತ್ತು.  ಇದರಲ್ಲಿ ಪ್ರಥಮ ಸ್ಥಾನ ಪ್ರಭು ಸುಭಾಷ್ ಚಂದ್ರ ಜವಳಗೇರಾ, ದ್ವಿತೀಯ ಸ್ಥಾನ ಆಯಾನಿ ಮುದಕಪ್ಪ ಅರಳಹಳ್ಳಿ, ತೃತೀಯ ಸ್ಥಾನ ಎ. ಮಾರುತಿ ಕಂಪ್ಲಿ ಅವರು ಪಡೆದಿದ್ದಾರೆ.

Please follow and like us:
error