ಆನೆಗೊಂದಿ ಉತ್ಸವ : ಛಾಯಾಚಿತ್ರ ಸ್ಪರ್ಧೆ ಮುಂದೂಡಿಕೆ

ಕೊಪ್ಪಳ ಜ. 02: 2019-20ನೇ ಸಾಲಿನ ಆನೆಗೊಂದಿ ಉತ್ಸವದ ಅಂಗವಾಗಿ ಛಾಯಾಚಿತ್ರ ಸ್ಪರ್ಧೆಯನ್ನು ಜನವರಿ. 05 ರಂದು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವವು 2020ರ ಜನವರಿ. 09 ಮತ್ತು 10 ರಂದು ನಡೆಯಲಿದ್ದು, ಉತ್ಸವದ ಅಂಗವಾಗಿ ಛಾಯಾಚಿತ್ರ ಸ್ಪರ್ಧೆಯನ್ನು ಜ. 03 ರಂದು ಏರ್ಪಡಿಸಲಾಗಿದ್ದು, ಕಾರಣಾಂತರಗಳಿAದ ಸ್ಪರ್ಧೆಯನ್ನು ಮುಂದೂಡಿ ಜ. 05 ರಂದು ಹಮ್ಮಿಕೊಳ್ಳಲಾಗಿದೆ.  ಆನೆಗೊಂದಿ ಪಾರಂಪರಿಕ, ಐತಿಹಾಸಿಕ, ನೈಸರ್ಗಿಕ ಸ್ಮಾರಕ/ ಸ್ಥಳಗಳ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ.  ಸ್ಪರ್ಧಿಗಳು ಸ್ಪರ್ಧಾ ದಿನದಂದು ಬೆಳಿಗ್ಗೆ 10 ಗಂಟೆಯಿAದ ಸಾಯಂಕಾಲ 04 ಗಂಟೆಯವರೆಗೆ “12*18” ಗಾತ್ರದ ಚೌಕಟ್ಟಿನಲ್ಲಿರುವ (ಫ್ರೇಮ್) ನೇತು ಹಾಕಲು ಹಿಂಬದಿಯಲ್ಲಿ ಹುಕ್ಕು ಬಳಸಿರುವ ಹಾಗೂ ಶೀರ್ಷಿಕೆ, ವಿಷಯ ಮತ್ತು ಛಾಯಾಚಿತ್ರ ತೆಗೆದ ಸ್ಥಳದ ಕುರಿತು ಮಾಹಿತಿಯನ್ನು ಬರೆದಿರುವ ನಾಲ್ಕು ಛಾಯಾಚಿತ್ರಗಳೊಂದಿಗೆ ಭಾಗವಹಿಸಬೇಕು.  ಕಲಾಕೃತಿಗಳು ಕೊಪ್ಪಳ ಜಿಲ್ಲಾಧಿಕಾರಿಗಳ ಸುಪರ್ದಿಗೊಳಪಡುತ್ತವೆ.
ಈ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತ ಛಾಯಾಗ್ರಾಹಕರು ತಮ್ಮ ಹೆಸರನ್ನು ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ, ಇವರಲ್ಲಿ ಜನವರಿ 03 ರಿಂದ ಜ. 04 ರವರೆಗೆ ಸಂಜೆ 4.30 ರವರೆಗೆ ಅರ್ಜಿ ಪಡೆದು ನೋಂದಾಯಿಸಿಕೊಳ್ಳಬೇಕು.  ತೆಗೆದ ನಾಲ್ಕು ಛಾಯಾಚಿತ್ರಗಳನ್ನು ಮುಚ್ಚಿದ ಲಕೋಟೆಯಲ್ಲಿ ಆನೆಗೊಂದಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಕೊಠಡಿಯಲ್ಲಿ (ವಿಜಯ ಮೊ. 9480060164) ಅಥವಾ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ, ಇಲ್ಲಿಗೆ ಸಲ್ಲಿಸಬೇಕು.  ಸ್ಪರ್ಧೆಯಲ್ಲಿ ಪ್ರದರ್ಶಿಸಲ್ಪಡುವ ಉತ್ತಮ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ ರೂ. 15,000, ದ್ವಿತೀಯ 10,000 ಹಾಗೂ ತೃತೀಯ 7,500 ಗಳನ್ನು ಉತ್ಸವ ಪೂರ್ವದಿನದಂದು ಅಂದರೆ ಜ. 08 ರಂದು ಸಂಜೆ 04-30 ಗಂಟೆಗೆ ನೀಡಲಾಗುವುದು.  ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ತಮ್ಮ ಛಾಯಾಚಿತ್ರಗಳನ್ನು ಜನವರಿ. 09 ಮತ್ತು 10 ರಂದು ನಡೆಯುವ ಆನೆಗೊಂದಿ ಉತ್ಸವದಲ್ಲಿ ಪ್ರದರ್ಶನಕ್ಕೆ ಇರಿಸಲಾಗುವುದು.
ಛಾಯಾಚಿತ್ರ ಪ್ರದರ್ಶನ ಸ್ಪರ್ಧೆಗೆ ನೋಂದಾಯಿಸಿಕೊAಡ ಅಭ್ಯರ್ಥಿಗಳನ್ನು ಮಾತ್ರ ಸ್ಪರ್ಧೆಗಾಗಿ ಆಯ್ಕೆ ಮಾಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಜಿ.ಸುರೇಶ ದೂರವಾಣಿ ಸಂಖ್ಯೆ; 08539-220607, ಮೊ. 9480841245, ಎಂ.ಅವಿನಾಶ ಮೊ. 9844157780, 8618054272 ಗೆ ಸಂಪರ್ಕಿಸಬಹುದು ಎಂದು ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಪ್ರಕಟಣೆ ತಿಳಿಸಿದ್ದಾರೆ.

Please follow and like us:
error