ಆನೆಗೊಂದಿ ಉತ್ಸವಕ್ಕೆ ಉಚಿತ ಹಾಗೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ : ಡಿ.ಸಿ


ಕೊಪ್ಪಳ ಜ.  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವಕ್ಕೆ ಭಾಗವಹಿಸಲು ಅನುಕೂಲವಾಗುವಂತೆ ಸಾರ್ವಜನಿಕರ ಪ್ರಯಾಣಕ್ಕೆ ಉಚಿತ ಮತ್ತು ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಆನೆಗೊಂದಿ ಉತ್ಸವವು ಇದೇ ಜನವರಿ. 09 ಮತ್ತು 10 ರಂದು ನಡೆಯಲಿದ್ದು, ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರ ಪ್ರಯಾಣಕ್ಕೆ 14 ಉಚಿತ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಉತ್ಸವ ಮುಕ್ತಾಯದವರೆಗೆ ಕಡೇಬಾಗಿಲು ಇಂದ ಆನೆಗೊಂದಿಗೆ, ಅಂಜನಾದ್ರಿಯಿAದ ಆನೆಗೊಂದಿಗೆ ಪ್ರತಿ 10 ನಿಮಿಷಕ್ಕೆ ಒಂದರAತೆ ತಲಾ 3 ಬಸ್ಸುಗಳಂತೆ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳದಿಂದ ಆನೆಗೊಂದಿಗೆ ಪ್ರತಿ ಒಂದೂವರೆ ಗಂಟೆಗೆ ಒಂದರAತೆ 04 ಬಸ್ಸುಗಳನ್ನು ಹಾಗೂ ಗಂಗಾವತಿಯಿAದ ಆನೆಗೊಂದಿಗೆ ಪ್ರತಿ 30 ನಿಮಿಷಕ್ಕೆ ಒಂದರAತೆ 04 ಬಸ್ಸುಗಳ ವ್ಯವಸ್ಥೆಯನನು ಮಾಡಲಾಗಿದೆ.
ಉಚಿತ ಬಸ್‌ಗಳ ಸೇವೆ ಹೊರತುಪಡಿಸಿ ಸಮಾರಂಭ ಮುಕ್ತಾಯವಾದ ನಂತರ ಆನೆಗೊಂದಿಯಿAದ ಸಾರ್ವಜನಿಕರ ಸೌಲಭ್ಯಕ್ಕಾಗಿ ಕೊಪ್ಪಳ, ಕುಷ್ಟಗಿ, ಕನಕಗಿರಿ, ಕಾರಟಗಿ, ಯಲಬುರ್ಗಾ, ಹೊಸಪೇಟೆ, ಕುಕನೂರ ಕಡೆಗೆ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಬಸ್ ಸೌಲಭ್ಯವನ್ನು ಟಿಕೆಟ್ ಪಡೆದು ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.

Please follow and like us:
error