ಕೊಪ್ಪಳ ಸತತ ೧ ವರ್ಷದಿಂದ ಕೊವಿಡ್-೧೯ರಿಂದ ತತ್ತರಿಸಿದ ಜಗತ್ತು ಅಭಿವೃದ್ಧಿಯು ಸಂಪೂರ್ಣವಾಗಿ ಕುಂಠಿತಗೊಂಡಿದೆ ಈಗ ಮತ್ತೆ ಕೊವಿಡ್-೧೯ರ ೨ನೇ ಅಲೆಯು ಪ್ರಾರಂಭವಾಗಿದ್ದು ಇಗಾಗಲೆ ದೇಶದಲ್ಲಿ ೫೪ಸಾವಿರ ಜನರಿಗೆ ಕೋರೋನಾ ಸೋಂಕು ದೃಡಪಟ್ಟಿರುತ್ತದೆ ಶಾಲೆ ಕಾಲೇಜು ವಿದ್ಯಾರ್ಥಿಗಳ ಭವಿಷ್ಯವು ಇದರಿಂದ ಅತ್ಯಂತ ಸೊಚನಿಯವಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಆನ್ಲೈನ್ ಪಾಠದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿಲ್ಲ ಈಗಾಗಲೇ ಸರ್ಕಾರವು ೧ ರಿಂದ ೯ನೇ ತರಗತಿ ವಿದ್ಯಾರ್ಥಿಗಳನ್ನು ಉತ್ತಿರ್ಣ ಮಾಡಬೇಕೆಂದು ಘೋಷಣೆ ಮಾಡುತ್ತಿದ್ದಾರೆ ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷಕ್ಕೆ ದಕ್ಕೆಯಾಗಲಿದೆ ಪಾಲಕರು ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಮಾತ್ರ ವಿದ್ಯಾರ್ಥಿಗಳು ಸ್ಪರ್ದಾತ್ಮಕ ಪರೀಕ್ಷೆಗಳಿಗೆ ನೈತಿಕವಾಗಿ ಸಿದ್ದರಾಗುತ್ತಾರೆ ಈ ಬಾರಿಯ ಶೈಕ್ಷಣಿಕ ವರ್ಷವು ಅತ್ಯಂತ ನಿರಾಶಾದಾಯಕವಾಗಿದ್ದು ಮುಂಬರುವ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣದ ಫಲಿತಾಂಶವು ವ್ಯತಿರಿಕ್ತವಾಗಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರಿಂದು ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ದದೆಗಲ್ ಕೋಳೂರು ಕಾಟ್ರಳ್ಳಿ ಹಿರೇಸಿಂದೋಗಿ ಚಿಕ್ಕಸಿಂದೋಗಿ ಹೊರತಟ್ನಾಳ ಗುನ್ನಳ್ಳಿ ಹಾಗೂ ಮಂಗಳಾಪುರ ಗ್ರಾಮಗಳಲ್ಲಿ ಅಂದಾಜು ಮೊತ್ತ ರೂ.೨ ಕೋಟಿ ೫೦ಲಕ್ಷದ ಸಿಸಿ ರಸ್ತೆ ಚರಂಡಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಹಾಗೂ ಶಾಲಾ ಕೊಠಡಿಗಳನ್ನು ಉದ್ಘಾಟನೆ ನೇರವೆರಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿ ವಿದ್ಯಾರ್ಥಿಗಳು ಎದೆಗುಂದದೆ ಹಗಲಿರುಳು ಮನೆಯ ಪಾಠದ ಪರಿಶ್ರಮದಿಂದ ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕೆಂದು ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ತುಂಬಿದರು. ಈಗಾಗಲೆ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ೪೫ವರ್ಷ ಮೇಲ್ಪಟ್ಟವರು ಹಾಗೂ ವಯೋವೃದ್ದರು ಹಾಕಿಸಿಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅದ್ಯಕ್ಷ ಎಸ್ಬಿ ನಾಗರಳ್ಳಿ ಜಿಪಂ ಸದಸ್ಯ ಗೂಳಪ್ಪ ಹಲಗೇರಿ ಗ್ರಾಪಂ ಅದ್ಯಕ್ಷರುಗಳಾದ ಪ್ರವೀಣ ಪಾಟೀಲ್ ಜ್ಯೋತಿ ವಾಲ್ಮೀಕಿ ತಾಪಂ ಅದ್ಯಕ್ಷ ಬಾಲಚಂದ್ರನ್ ಎಪಿಎಮ್ಸಿ ಅದ್ಯಕ್ಷ ವಿಶ್ವನಾಥ ರಾಜು ತಾಪಂ ಸದಸ್ಯ ನಿಂಗಪ್ಪ ಯತ್ನಟ್ಟಿ ಎಪಿಎಮ್ಸಿ ಸದಸ್ಯರುಗಳಾದ ಹನುಮರೆಡ್ಡಿ ಹಂಗನಕಟ್ಟಿ ನೇಮರೆಡ್ಡಿ ನಗರ ಸಭಾ ಸದಸ್ಯ ಅಕ್ಬರಪಾಷ ಪಲ್ಟನ್ ಮುಖಂಡರುಗಳಾದ ಕಾಟನ್ಪಾಷ ಗಾಳೆಪ್ಪ ಪೂಜಾರ ಕೃಷ್ಣರೆಡ್ಡಿ ಗಲಬಿ ಆನಂದ ಹೊಸಳ್ಳಿ ಶಿವಣ್ಣ ಗುನ್ನಳ್ಳಿ ವೆಂಕಣ್ಣ ಕೊಳ್ಳಿ ರೇವಪ್ಪ ಕಟ್ಟಿಮನಿ ಯುವ ಕಾಂಗ್ರೆಸ್ ಅದ್ಯಕ್ಷ ಗವಿಸಿದ್ದನಗೌಡ ಪಾಟೀಲ್ ಅಂದಾನಸ್ವಾಮಿ ನಾರಾಯಣಪ್ಪ ಚಿಂಚಲಿ ಹನುಮಂತ ಬೆಟಗೇರಿ ಉಪಸ್ಥಿತರಿದ್ದರು.