ಆದರ್ಶ ದಂಪತಿ (ಸೀಜನ್-೨) ಪೋಸ್ಟರ್ ಬಿಡುಗಡೆ

????????????????????????????????????

ಕೊಪ್ಪಳ- ೨೬- ನಗರದ ರಿಧಮ್ ಡ್ಯಾನ್ಸ್ ಆಂಡ್ ಕಲ್ಚರಲ್ ಟ್ರಸ್ಟ್ ಆಯೋಜಿಸಿದ ಆದರ್ಶ ದಂಪತಿಗಳು ಸೀಜನ್ ೨ ಕಾರ್ಯಕ್ರಮದ ಪೊಸ್ಟರ್ ನ್ನು ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡ್ರ ಅವರು ನಗರದ ಸಾಹಿತ್ಯ ಭವನದಲ್ಲಿ ಬಿಡುಗಡೆ ಮಾಡಿದರು. ಬರುವ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ ೧೩ ರಂದು ಆದರ್ಶ ದಂಪತಿಗಳ ಕಾರ್ಯಕ್ರಮ ನಡೆಯಲಿದೆ.
ಕೊಪ್ಪಳ ರಿಧಮ್ ಡ್ಯಾನ್ಸ್ ಅಕಾಡೆಮಿ ಅಧ್ಯಕ್ಷ ಮತ್ತು ನ್ಯತೃ ನಿರ್ದೇಶಕ ಬಸವರಾಜ ಮಾಲಗತ್ತಿ ಅವರು ಇದೊಂದು ಮನರಂಜನೆ ಕಾರ್ಯಕ್ರಮ ಇದರಲ್ಲಿ ಸ್ಥಳೀಯ ಆಸಕ್ತರು ಭಾಗವಹಿಸ ಬಹುದು. ಆಕರ್ಷಕ ಟ್ರೋಪಿ ಜೊತೆಗೆ ಬಹುಮಾನ ಗೆಲ್ಲಬಹುದು ಪ್ರಚಲಿತ ರಿಯಾಲಿಟಿ ಶೋಗಳ ಮಾದರಿಯಲ್ಲೆ ನಡೆಯುತ್ತದೆ ಕಳೆದ ವರ್ಷ ಉತ್ತಮ ಪ್ರತಿಕ್ರಿಯೆ ದೊರೆಯಿತು ಅದಕ್ಕಾಗಿ ಈ ವರ್ಷ ನು ಮಾಡಲು ರಿಧಮ್ ಡ್ಯಾನ್ಸ್ ಆಂಡ್ ಕಲ್ಚರಲ್ ಟ್ರಸ್ಟ್ ಮುಂದಾಗಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡ್ರ, ಪತ್ರಕರ್ತ ಬಸವರಾಜ ಮರದೂರ, ಬಿ.ಎನ್.ಹೊರಪೇಟಿ, ಬಸವರಾಜ ಮಾಲಗಿತ್ತಿ, ಉಮೇಶ್ ಪೂಜಾರ, ಡಿ.ಎಂ, ನಾಗರಾಜ್, ಮಹೇಶ್ ಹಳ್ಳಿಕೇರಿ, ಯಾರ್ಕರ್ ಮಹೇಶ್, ಮಂಜುಳಾ ಹಿರೇಮಠ, ಶ್ರೀದೇವಿ, ಪುಷ್ಪಲತಾ ಹಿರೇಮಠ, ಭಾಗ್ಯ, ದೀಪಾ, ರೇಖಾ ಶೆಟ್ಟಿ, ಹಾಗೂ ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು.

Please follow and like us:
error