ಆಡಳಿತಾಧಿಕಾರಿ ವರ್ತನೆ : ಕ್ರಮಕ್ಕೆ ಆಗ್ರಹ

ಕೊಪ್ಪಳ : ನಗರದ ಹಜರತ್ ರಾಜಾಬಾಗ್ ಸವಾರ್ ದರ್ಗಾದ ಆಡಳಿತಾಧಿಕಾರಿಯಾದ ಗೌಸ್‌ಸಾಬ್ ಸರ್ದಾರ್ ಇವರು ಇತ್ತೀಚೆಗೆ ಹೊಸ ಕಮಿಟಿ ರಚೆನೆಗೆ ವಕ್ಫ್ ನಿಯಮವಳಿಯನ್ನು ಗಾಳಿಗೆ ತೂರಿ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ಇಂದು ನಗರದಲ್ಲಿರುವ ಎಲ್ಲಾ ಪಂಚ್ ಕಮಿಟಿಯ ಪದಾಧಿಕಾರಿಗಳು ಸಭೆ ನಡೆಸಿ ಸದರಿ ಆಡಳಿತಾಧಿಕಾರಿಯವರ ಶಿಫಾರಸ್ಸನ್ನು ತಿರಸ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಇದೇ ಸಂದರ್ಭದಲ್ಲಿ ಕೊಪ್ಪಳ ಸ್ವಯಂಘೋಷಿತ ಮುಸ್ಲಿಮ್ ಮುಖಂಡನೆಂದು ಹೇಳಿಕೊಂಡು ರಾಜಕಾರಣಿಗಳ ಹತ್ತಿರ ಇತರೆ ಚುನಾಯಿತ ಪ್ರತಿನಿಧಿಗಳ ಹತ್ತಿರ ಹಾಗೂ ಸಮಾಜಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಗಳಲ್ಲಿ ಸಮಾಜ ಅಭಿವೃದ್ಧಿ ಹೆಸರಿನಲ್ಲಿ ಸಮಾಜದ ದುರುಪಯೋಗ ಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಇಂತಹ ವರ್ತನೆ ಪುನರಾವರ್ತನೆಯಾದರೆ ಸಮಾಜದ ಮುಖಂಡರನ್ನೊಳಗೊಂಡ ಸಮಿತಿಯನ್ನು ರಚಿಸಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬಾಬುಸಾಬ್ ಮಕಾನ್‌ದಾರ್ ವಹಿಸಿದ್ದರು. ಸೈಯದ್ ರಹಮತ್ ಹುಸೇನಿ, ಮರ್ದಾನ್‌ಸಾಬ್ ಡೋಣಿ, ಉಸ್ಮಾನ್‌ಸಾಬ್ ಸರ್ದಾರ್, ಗೈಬುಸಾಬ್ ಚಟ್ನಿ, ಸೈಯದ್ ನಸಿರುದ್ದೀನ್, ಮಹೆಬೂಬ್ ಮಚ್ಚಿ, ಮೈಲೈಕ್ ಜಿಲಾನ್, ಖಾಜಾಹುಸೇನ್ ರೇವಡಿ, ಮುಸ್ತಫಾ ಕಿಡದಾಳ, ಅಲಿಹಸನ್ ಜವಳಗೇರಾ, ಎಸ್.ನಾಸೀರ್ ಕಂಠಿ, ಸದ್ದಾಮ್ ಖಾಜಿ, ಮೆಹಬೂಬ್ ಕುದುರಿಮೋತಿ, ವಲಿಸಾಬ್, ಇಲಿಯಾಸ್‌ಸಾಬ್, ಸಮೀಉಲ್ಲಾ ಖಾದ್ರಿ, ಅಬ್ದುಲ್ ಅಜೀಜ್ ಮಾನ್ವಿಕರ್, ಖಾದರ್‌ಸಾಬ್, ಜಾಫರ್‌ಸಾಬ್ ವರ್ದಿ, ಇನ್ನು ಅನೇಕ ಪಂಚ್‌ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error