ಆಗಸ್ಟ್ 10 ರಂದು ತೋಟಗಾರಿಕೆ ದಿನಾಚರಣೆ

ಕೊಪ್ಪಳ, : ತೋಟಗಾರಿಕೆ ಇಲಾಖೆ ವತಿಯಿಂದ ಕರ್ನಾಟಕ ತೋಟಗಾರಿಕೆ ಪಿತಾಮಹಾ ಡಾ.ಎಮ್.ಎಚ್. ಮರಿಗೌಡ ರವರ ಜನ್ಮ ದಿನಾಚರಣೆ ಹಾಗೂ ತೋಟಗಾರಿಕೆ ದಿನಾಚರಣೆಯನ್ನು ಆಗಸ್ಟ್ 10 ರಂದು ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಆಗಸ್ಟ್.08 ರಿಂದ 30 ರವರೆಗೂ ತೋಟಗಾರಿಕೆ ಬೆಳೆಗಳಾದ ತರಕಾರಿ, ಹಣ್ಣು, ಪುಷ್ಪ ಬೇಸಾಯ, ಔಷಧೀ ಸಸ್ಯಗಳು ಮತ್ತು ವಿದೇಶಿ ಹಣ್ಣುಗಳು ಬಗ್ಗೆ, ತೋಟಗಾರಿಕೆಯಲ್ಲಿ ಉಪಕಸುಬುಗಳಾದ ಜೇನುಕೃಷಿ, ಅಣಬೆ ಕೃಷಿ ಇತ್ಯಾದಿಗಳ ಬಗ್ಗೆ, ಮಣ್ಣು, ನೀರು ಪರೀಕ್ಷೆ ಮತ್ತು ವಿಶ್ಲೇಷಣೆ, ತೋಟಗಾರಿಕೆಯಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಂರಕ್ಷಿತ ಬೇಸಾಯ ಕ್ರಮ, ಕೈತೋಟ ಮತ್ತು ತಾರಸಿ ತೋಟ, ಜಲಕೃಷಿ, ಬ್ಯಾಂಕ್‌ಗಳಿAದ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳ ಕುರಿತು ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ತೋಟಗಾರಿಕೆಗೆ ಸಂಬAಧಿಸಿದ ಹಲವಾರು ವಿಷಯಗಳ ಬಗ್ಗೆ ವಿಜ್ಞಾನಿಗಳಿಂದ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತೋಟಗಾರಿಕೆಯಲ್ಲಿ ತೊಡಗಿರುವ ರೈತರು ಹಾಗೂ ರೈತ ಮಹಿಳೆಯರಿಗಾಗಿ ಆತ್ಮನಿರ್ಭರತೆ ಮತ್ತು ಸ್ವಾವಲಂಬನೆ ಜೀವನ ನಡೆಸಲು ಮತ್ತು ಆರ್ಥಿಕ ಅಭಿವೃದ್ಧಿಯತ್ತ ಮುನ್ನಡೆಯಲು ಈ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ರೈತರು ತಮ್ಮ ಆಸಕ್ತ ವಿಷಯಗಳಲ್ಲಿ ತರಬೇತಿ ಪಡೆಯಲು ಮುಂಗಡವಾಗಿ ಹೆಸರು ನೊಂದಾಯಿಸಬೇಕು ಮತ್ತು ತರಬೇತಿಗೆ ಬರುವಾಗ ಕೋವಿಡ್-19 ರ ನಿಯಮಾವಳಿಯಂತೆ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್-19 ಕಾರಣದಿಂದ ಪ್ರತಿ ದಿನ ಪ್ರತಿ ತರಬೇತಿಗೆ 25 ರಿಂದ 30 ರೈತರಿಗೆ ಮಾತ್ರ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿಪಂ) ಕೊಪ್ಪಳ – 08539-231530, ತೋಟಗಾರಿಕೆ ವಿಷಯ ತಜ್ಞರು – 9482672039 ಮತ್ತು ಆಯಾ ತಾಲ್ಲೂಕು ಕಛೇರಿಗಳನ್ನು ಸಂಪರ್ಕಿಸಬಹುದು .

Please follow and like us:
error