ಅ. ೨೭ ರಂದು ಗಂಗಾವತಿಯಲ್ಲಿ ೧ನೇ ದಕ್ಷಿಣ ಭಾರತದ ರಾಜ್ಯಗಳ ಪೆಂಕಾಕ್ ಸಿಲತ್ ಕ್ರೀಡಾಕೂಟ

ಕೊಪ್ಪಳ ಅ.  : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ (ನೊಂ) ಗಂಗಾವತಿ ಇವರ ಸಹಯೋಗದಲ್ಲಿ “೧ನೇ ದಕ್ಷಿಣ ಭಾರತದ ರಾಜ್ಯಗಳ ಪೆಂಕಾಕ್ ಸಿಲತ್ ಕ್ರೀಡಾಕೂಟ ೨೦೧೮-೧೯” ವನ್ನು ಅ. ೨೭ ಮತ್ತು ೨೮ ರಂದು ಗಂಗಾವತಿಯಲ್ಲಿ ಏರ್ಪಡಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಅ. ೨೭ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಗಂಗಾವತಿ ಎ.ಪಿ.ಎಂ.ಸಿ ಸಭಾಭವನದಲ್ಲಿ ನಡೆಯಲಿದೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರಿಂದ ಕ್ರೀಡಾ ಜ್ಯೋತಿ ಸ್ವೀಕಾರ. ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ (ರಿ.) ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಶಾಸಕರುಗಳಾದ ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಬಸವರಾಜ ದಢೇಸೂಗೂರ ಹಾಗೂ ಹಾಲಪ್ಪ ಆಚರ್‌ರಿಂದ ಪಥ ಸಂಚಲನ ಮತ್ತು ಗೌರವ ವಂದನೆ ಸ್ವೀಕಾರ. ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಪ್ರಭಾಕರ, ಜಿ.ಪಂ. ಸದಸ್ಯರಾದ ಭೀಮಣ್ಣ ಅಗಸಿಮುಂದಿನ, ಅಮರೇಶ ಗೋನಾಳ, ವಿಶ್ವನಾಥ ರೆಡ್ಡಿ, ಶಾಂತಾ ರಮೇಶ ನಾಯಕ, ಅನಿತಾ ಮಾರುತಿ, ಸ್ವಾತಿ ರಾಮಮೋಹನ ಹಾಗೂ ಭಾಗ್ಯವತಿ ಬೋಲಾರಿಂದ ಕ್ರೀಡಾಪಟುಗಳ ಪರಿಚಯ. ವಿಶೇಷ ಆಹ್ವಾನಿತರಾಗಿ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜ ಪಾಲ್ಗೊಳ್ಳುವರು.
ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಗಂಗಾವತಿ ಎ.ಪಿ.ಎಂ.ಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ ಬಿ. ನಾಡಗೇರ, ಪ.ಪೂ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಎಲ್.ಜಿ ರಾಟಿ, ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ ಸಿದ್ದಲಿಂಗಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಗಿಣಿಗೇರಿ, ರಾಜ್ಯ ಡ್ರಾಪ್ ರೋ ಬಾಲ್ ಸಂಸ್ಥೆ ಗೌರವ ಅಧ್ಯಕ್ಷ ರವೀಂದ್ರ ಎಂ.ಕೆ., ರಾಜ್ಯ ಜಂಪ್‌ರೋಪ್ ಸಂಸ್ಥೆ ಕಾರ್ಯಾಧ್ಯಕ್ಷ ರಾಘವೇಂದ್ರ ಜಮಖಂಡಿ, ನಿರ್ದೇಶಕ ಅನಂತ ಜೋಷಿ, ರಾಜ್ಯ ಡ್ರಾಪ್ ರೋ ಬಾಲ್ ಸಂಸ್ಥೆ ಅಧ್ಯಕ್ಷ ಪೆಡ್ಡಿ ಸುಧಾಕರ, ಉಪಾಧ್ಯಕ್ಷ ಅಬ್ದುಲ್ ಕರೀಂ ವಂಟೇಳಿ, ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮೌನೇಶ ವಡ್ಡಟ್ಟಿ ಭಾಗವಹಿಸುವರು.
ಸಮಾರೋಪ ಸಮಾರಂಭ : ೧ನೇ ದಕ್ಷಿಣ ಭಾರತದ ರಾಜ್ಯಗಳ ಪೆಂಕಾಕ್ ಸಿಲತ್ ಕ್ರೀಡಾಕೂಟ ಅಂಗವಾಗಿ ಅ. ೨೮ ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಮಾಜಿ ಶಾಸಕರುಗಳಾದ ಇಕ್ಬಾಲ ಅನ್ಸಾರಿ ಹಾಗೂ ಶಿವರಾಜ ತಂಗಡಗಿ, ಗಂಗಾವತಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ ಅವರು ವಹಿಸಲಿದ್ದಾರೆ. ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಉಪಾಧ್ಯಕ್ಷರುಗಳಾದ ಇಬ್ರಾಹಿಂ ಸಾಬ ಬಳ್ಳಾರಿ ಹಾಗೂ ಅಜ್ಮೀರ್ ನಂದಾಪೂರ, ಭಾರತೀಯ ಪೆಂಕಾಕ್ ಸಿಲತ್ ಸಂಸ್ಥೆಯ ತಾಂತ್ರಿಕ ನಿರ್ದೇಶಕರಾದ ಅಬ್ದುಲ್ ರಜಾಕ್ ಟೇಲರ, ಕೆಸರಟ್ಟಿಯ ಸ್ವಾಮಿ ವಿವೇಕಾನಂದ ಶಾಲೆ ಅಧ್ಯಕ್ಷ ಜಿ. ಶ್ರೀಧರ ವೀರಪ್ಪ ಕೆಸರಟ್ಟಿ, ಕೆಂದೋಳಿ ರಾಮಣ್ಣ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಪ್ಪ ಕೆಂದೋಳಿ, ಸೇಂಟ್ ಪಾಲ್ಸ್ ಸ್ಕೂಲ್ ಅಧ್ಯಕ್ಷ ಸರ್ವೇಶ ವಸ್ತ್ರದ, ಅಕ್ಷರ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರವಿ ಚೈತನ್ಯ ರೆಡ್ಡಿ, ಲಿಟಲ್ ಹಾರ್ಟ್ಸ್ ಸ್ಕೂಲ್ ಮುಖ್ಯೋಪಾಧ್ಯಾಯ ಪ್ರಿಯಾ ಕುಮಾರಿ, ಜೈನ್ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಸಾಯಿದಾ ಫಬೀನ್, ಅರೋನ್ ಮಿರಜ್‌ಕರ್ ಸ್ಕೂಲ್ ಅಧ್ಯಕ್ಷ ಅರೋನ್ ಮಿರಜ್‌ಕರ್, ಅನುದಾನರಹಿತ ಶಿಕ್ಷಕರ ಸಂಘದ ಖಜಾಂಚಿ ಬಿ. ಪಾರ್ಥ ಸಾರಥಿರವರು ಸಮಾರಂಭದಲ್ಲಿ ಗೌರವ ಉಪಸ್ಥಿತರಿರುವರು.
ಸಮಾರೋಪ ಸಮಾರಂಭದಲ್ಲಿ ಗಂಗಾವತಿ ಕರ್ನಾಟಕ ಬ್ಯಾಂಕ್ ಲಿ. ವ್ಯವಸ್ಥಾಪಕ ಕೇಶವನಾಯಕ, ಬಳ್ಳಾರಿ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ವಿಶೇಷ ಅಧಿಕಾರಿ ಪ್ರೋ. ಶಾಂತನಾಯಕ, ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಧರ್ ಜಿ., ಬೆಂಗಳೂರಿನ ರಾಜ್ಯ ಪೆಂಕಾಕ್ ಸಮಿತಿ ನಿರ್ದೇಶಕ ಗಿರೀಶ್ ಗೋಲಾ, ರಾಜ್ಯ ಜಂಪ್‌ರೋಪ್ ಸಂಸ್ಥೆ ನಿರ್ದೇಶಕರಾದ ರಮೇಶ್ ಪುರೋಹಿತ್ ಹಾಗೂ ಕೆ. ದಿವಾಕರ್, ಗಂಗಾವತಿಯ ರಾಜ್ಯ ಯೋಗ ಸ್ಪೋರ್ಟ್ಸ್ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಸಿರಿಗೇರಿ, ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ನಿರ್ದೇಶಕ ಆಸೀಫ್ ಡಾಲಾಯತ್, ಗಂಗಾವತಿ ಪ್ರಥಮದರ್ಜೆ ಗುತ್ತಿಗೆದಾರ ಬಸವರಾಜ ಹಳ್ಳೂರ್, ಹೊಸಪೇಟೆ ಎಂ.ಎಸ್.ಪಿ.ಎಲ್. ಲಿ. ಕ್ರೀಡಾ ತರಬೇತುದಾರ ಥಾಮಸ್ ಎಂ.ಎ., ಗಂಗಾವತಿ ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ಪರಂಜ್ಯೋತಿ ಮಂಗಳೂರು, ನಗರಸಭೆ ಸದಸ್ಯ ಎಫ್. ರಾಘವೇಂದ್ರ, ಕೆ.ಪಿ.ಸಿ.ಸಿ. ಹಿಂದುಳಿದ ವರ್ಗ ರಾಜ್ಯ ಕಾರ್ಯದರ್ಶಿ ಬಸವರಾಜ್ ಐಲಿ, ಗಂಗಾವತಿ ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ವಿಠ್ಠಲ್ ಜಿರ್‍ಗಾಳ, ಕ್ರೀಡಾ ನಿರ್ದೇಶಕ ಬೋಗೇಶ್ವರರಾವ ಹೇರೂರು, ಗಂಗಾವತಿ ತಾಲೂಕಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಅನ್ವರ್ ಪಾಷಾರಿಂದ ಬಹುಮಾನ ಮತ್ತು ಪಾರಿತೋಷಕ ವಿತರಣೆ ಕಾರ್ಯಕ್ರಮ ನಡೆಯಲಿದೆ .

Please follow and like us:
error