ಅಸೃಶ್ಯತೆ ಆಚರಣೆ ಕಂಡು ಬಂದರೆ ಕಾನೂನು ಕ್ರಮ -ಗುರುರಾಜ ಕಟ್ಟಿಮನಿ

ಅಸ್ಪಶ್ಯತೆ ನಿವಾರಣೆ ವಿಚಾರಗೋಷ್ಠಿ
ಫೆ ೮ ರಂದು ತಾಲೂಕಿನ ಬಹದೂರಬಂಡಿ ಗ್ರಾಮ ಪಂಚಾಯತಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಸ್ಕೃತಿ ಸ್ವರ ಸಂಗೀತ ಹಾಗೂ ಕಲಾ ಶಿಕ್ಷಣ ಸಂಸ್ಥೆ ಚಾಮಲಾಪೂರ ಇವರುಗಳ ಸಹಯೋಗದಲ್ಲಿ ನಡೆದ ಅಸ್ಪಶ್ಯತೆ ನಿವಾರಣೆ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ.
ಗ್ರಾಮದ ಸಾರ್ವಜನಿಕ ಹಿರಿಯರು ದಲಿತರಿಗೆ ಅವರ ಹಕ್ಕುಗಳನ್ನು ಒದಗಿಸಿ ಸೌರ್ಹಾದತೆಯಿಂದ ಎಲ್ಲರನ್ನು ಸಮಾನತೆಯಿಂದ ಕಾಣುವುದರ ಮೂಲಕ ಅಸ್ಪಶ್ಯತೆ ಆಚರಣೆ ಮಾಡದಂತೆ ಮನವಿ ಮಾಡಿದರು.
ಪಿಎಸ್‌ಐ ಗುರುರಾಜ ಕಟ್ಟಿಮನಿರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎಲ್ಲರೂ ಅಣ್ಣತಮ್ಮಂದಿರಂತೆ ಜಾತಿ ವ್ಯವಸ್ಥೆಯನ್ನು ಮಾಡದೇ ಜೀವನ ನಡೆಸಬೇಕು. ಅಸೃಶ್ಯತೆ ಆಚರಣೆ ಕಂಡು ಬಂದರೆ ಅಂಥವರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ವಕೀಲರಾದ ಮಾರುತಿ ಚಾಮಾಲಾಪೂರ ಎಸ್‌ಸಿ, ಎಸ್‌ಟಿ ಕಾಯ್ದೆ ೨೦೧೫ ಹಾಗೂ ೨೦೧೬ರ ಕುರಿತು ಮಾಹಿತಿ ನೀಡಿದರು, ಶಿಕ್ಷಕ ಸುನೀಲ್ ನವಲೆ ರವರು ಅಸ್ಪೃಶ್ಯತೆ ನಿವಾರಣೆಗೆ ಸಮಾಜದ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಹನುಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಯಕ ನಿರ್ದೇಶಕ ನಟರಾಜ ಎನ್.ಎಮ್, ಪಿಡಿಓ ವಿಜಯಕುಮಾರ, ಶ್ರೀಮತಿ ಜ್ಯೋತಿ ರಡ್ಡೇರ, ತಾ.ಪಂ ಸದಸ್ಯೆ ಮೈಮುದಾಗೇಗಂ, ಚಾಂದಪಾಷಾ ಕಿಲ್ಲೇದಾರ, ಉಪಾಧ್ಯಕ್ಷಿ ಕಾಶೀಂಬಿ ಬನ್ನಿಕೊಪ್ಪ, ಗ್ರಾಮದ ಹಿರಿಯರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Please follow and like us:
error