ಅವೈಜ್ಞಾನಿಕ ಪ್ರಶ್ನೆಪತ್ರಿಕೆಯ ಮಾದರಿಯನ್ನು ಬದಲಾಯಿಸಲು ಕೊರಿ AIDSO & AIDYO ಮನವಿ


ಇಂದು ಮದ್ಯಾಹ್ನ ವಿಜಯನಗರ ಶ್ರೀ ಕಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕ್ಕೋತ್ತರಕೇಂದ್ರ ಕೊಪ್ಪಳದಿಂದ ಬಳ್ಳಾರಿ ವಿಶ್ವವಿದ್ಯಾಲಯಕ್ಕೆ ಎಐಡಿಎಸ್‌ಓ ಮತ್ತು ಎಐಡಿವೈಓ ಸಂಘಟನೆಯಿಂದ ಅವೈಜ್ಞಾನಿಕ ಪ್ರಶ್ನೆಪತ್ರಿಕೆಯ ಮಾದರಿಯನ್ನು ಬದಲಾಯಿಸಲು ಕೊರಿ ಮನವಿಯನ್ನು ಸಲ್ಲಿಸಲಾಯಿತು.
ಖ್ಯಾತವಾಗಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಅವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಸ್ನಾತಕೋತ್ತರ ಪದವಿಯಲ್ಲಿ ಕಲಾವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾಧ್ಯಮ ಕನ್ನಡವಾಗಿದ್ದರೂ ಪ್ರಶ್ನೆಪತ್ರಿಕೆ ಮಾತ್ರ ಇಂಗ್ಲೀಷ ಬಾಷೆಯಲ್ಲಿ ಬರುತ್ತಿದೆ. ಇದರಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಗೊತ್ತಿದ್ದರೂ ಪ್ರಶ್ನೆಗಳು ಕೇವಲ ಇಂಗ್ಲೀಷನಲ್ಲಿ ಇರುವುದರಿಂದ ತೊಂದರೆಗಿಡಾಗುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಓದಿದರಿಂದ ಪ್ರಶ್ನೆ ಪತ್ರಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷನಲ್ಲಿ ಪ್ರಕಟಿಸಬೇಕಾಗಿ ಎಐಡಿಎಸ್‌ಓ ಮತ್ತು ಎಐಡಿವೈಓ ಸಂಘಟನೆಯಿಂದ ಮನವಿಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ನಾತಕ್ಕೋತ್ತರಕೇಂದ್ರದ ವಿಶೇಷ ಅಧಿಕಾರಿಗಳಾದ ಮಾನ್ಯ ಡಾ|| ಮನೋಜ ಡೋಳ್ಳಿ ಮನವಿ ಪತ್ರವನ್ನು ಸ್ವೀಕರಿಸಿದರು. ರಮೇಶ ವಂಕಲಕುಂಟಿ ಶರಣಬಸವ ಪಾಟೀಲ್ ವಿದ್ಯಾರ್ಥಿಗಳಾದ ಹನುಮನ ಗೌಡ, ಹನುಮಪ್ಪ, ಆನಂದ ಮಾರಕಟ್ಟಿ, ಮಾಲತೇಶ, ವಿರೇಶ, ಮತ್ತಿತರರಿದ್ದರು,

 

Please follow and like us:
error