ಅಳವಂಡಿ ಹೋಬಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಕರವೇ ಯುವಸೈನ್ಯ ಅಗ್ರಹ


ಕೊಪ್ಪಳ :
ಅಳವಂಡಿ ಹೋಬಳಿಯು ನಿರ್ಲಕ್ಷಕ್ಕೆ ಒಳಗಾಗಿದ್ದು ಮತ್ತು ನಿರಂತರವಾದ ಬರಗಾಲ ತಾಂಡವಾಡುತ್ತಿರುವದರಿಂದ ಜನರು ತತ್ತರಿಸಿ ಹೋಗಿದ್ದು ಮತ್ತು ಅಳವಂಡಿಯ ಹೋಬಳಿಯಲ್ಲಿ ಪಶು ವೈದ್ಯಾಧಿಕಾರಿಗಳು ಇಲ್ಲದೇ ಇರುವದರಿಂದ ಧನ ಕರುಗಳಿಗೆ ತಿವ್ರ ಹಾನಿಯುಂಟಾಗುತ್ತಿದ್ದು ಮತ್ತು ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಮತ್ತು ಕರೆಗೆ ನೀರು ತುಂಬಿಸುವದು . ಮತ್ತೆ ಬರಗಾಲ ಇರುವದರಿಂದ ಈ ಭಾಗದಲ್ಲಿ ಗೋಶಾಲೆಯನ್ನು ತೆರೆಯುವದು ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳು ತಾಂಡವಾಡುತ್ತಿರುವದರಿಂದ ಜನರ ತತ್ತರಗೊಂಡಿದ್ದು ಕೂಡಲೇ ಜಿಲ್ಲಾಡಳಿತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕರವೇ ಯುವಸೈನ್ಯ ಅಪರ ಜಿಲ್ಲಾಧಿಕಾರಿಗಳು ಶ್ರೀಮತಿ ಗೀತಾ ಅವರಿಗೆ ಮನವಿ ನೀಡಿದರು.
ಮನವಿ ನೀಡಿ ಮಾತನಾಡಿದ ಸಂಘಟಿಕರು ಅಳವಂಡಿ ಹೋಬಳಿಯು ತಿವ್ರ ಬರಗಾಲದಿಂದ ಜನರು ತತ್ತರಿಸಿದ್ದು ಉದ್ಯೋಗ ಇಲ್ಲದೇ ದುಡಿಯಲು ಗುಳೆ ಹೋಗುತ್ತಿದ್ದು ಕೂಡಲೇ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ ಜನರಿಗೆ ಉದ್ಯೋಗ ಕೊಡಬೇಕು ಮತ್ತು ಈ ಹೋಬಳಿಯಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳು ತಾಂಡವಾಡುತ್ತಿರುವದರಿಂದ ಈ ಭಾಗದ ಜನರು ತೊಂದರೆಗೆ ಒಳಗಾಗಿದ್ದು ಜನಪ್ರತಿನಿಧಿಗಳು ನಿರ್ಲಕ್ಷ ಮಾಡುತ್ತಿರುವದರಿಂದ ಈ ಭಾಗ ಅಭಿವೃದ್ದಿಯಿಂದ ವಂಚಿತವಾಗಿದೆ ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದೇ ಹೋದರೆ ಮುಂದಿನ ದಿನಮಾನಗಳಲ್ಲಿ ಕರವೇ ಯುವಸೈನ್ಯ ದಿಂದ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಕರವೇ ಯುವಸೈನ್ಯ ರಾಜ್ಯಾಧ್ಯಕ್ಷರಾದ ಕೆ.ಎಸ್.ಕೊಡತಗೇರಿ, ರಾಜ್ಯ ಕಾರ್ಯದರ್ಶಿ ನಾಗರಾಜ ಅರಳಿಮಠ, ಜಿಲ್ಲಾಧ್ಯಕ್ಷ ರಾಮಣ್ಣ ಉಪ್ಪಾರ, ಜಿಲ್ಲಾ ಉಪಾಧ್ಯಕ್ಷ ಅನೀಲ ಹಕಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ,ಎನ್ , ಕುಂದಗೋಳ, ತಾಲೂಕ ಅಧ್ಯಕ್ಷ ಫಕೀರಪ್ಪ ಎನ್. ಬಿ. ಹೋಬಳಿ ಘಟಕದ ಅಧ್ಯಕ್ಷ ದ್ಯಾಮಣ್ಣ ಮ್ಯಾಗೇರಿ, ಮಾರುತಿ , ಗಂಗಾಧರ, ಮಲ್ಲಪ್ಪ ಜೋಗಿನ , ಶಮೀರ್ ಗಡಾದ, ಶರಣಯ್ಯ ಸಿಂಧೋಗಿಮಠ. ಅಕ್ಬರ್ ತಹಶಿಲ್ದಾರ್, ಖಾದರಸಾಬ ಸಿಂಧೂರ, ರವಿ ಅಂಬಿಗೇರ್, ಹನುಮಂತ ಎಲಿಗಾರ್. ಕೆ. ಉದಯಕುಮಾರ ಸೇರಿದಂತೆ ಉಪಸ್ಥಿತರಿದ್ದರು.

Please follow and like us:
error