ಅಲ್ಪ ಸಂಖ್ಯಾತರ ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಕೊಪ್ಪಳ ಜ. : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕೊಪ್ಪಳ ವತಿಯಿಂದ ಪ್ರಸಕ್ತ ಸಾಲಿನ ಅಲ್ಪ ಅಂಖ್ಯಾತರ ಅಭ್ಯರ್ಥಿಗಳು “ಅರಿವು ಪ್ರೇಶ್” ನಲ್ಲಿ ಮತ್ತು ಈಗಾಗಲೇ ಸೌಲಭ್ಯವನ್ನು ಪಡೆದು ಮುಂದಿನ ವರ್ಷದ ವ್ಯಾಸಂಗಕ್ಕಾಗಿ “ಅರಿವು ರಿನೀವಲ್” ನಲ್ಲಿ  ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು, ಸಿಖ್ಖರು, ಫಾರ್ಸಿ ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಪದವಿ ಹಾಗೂ ತಾಂತ್ರಿಕ ವೃತ್ತಿಪರ ಎಂ.ಬಿ.ಬಿ.ಎಸ್, ಬಿ.ಬಿ.ಎ., ಬಿ.ಇ, ಡಿ.ಎಡ್, ಬಿ.ಎಡ್, ಎಂ.ಸಿ.ಎ, ಎಮ್.ಎ, ಎಂ.ಎಸ್‌ಸಿ, ಬಿ.ಡಿ.ಎಸ್,  ಎಂ.ಬಿ.ಎ, ಎಂ.ಡಿ, ಎಂ.ಎ, ಎಂ.ಕಾA, ಬಿ.ಬಿ.ಎಂ, ಬಿಸಿಎ, ಬಿ.ಎಸ್.ಸಿ, ಎಲ್.ಎಲ್.ಬಿ, ಬಿ.ಎಸ್.ಡಬ್ಲುö್ಯ, ಎಂ.ಸಿ.ಡಬ್ಲುö್ಯ, ಡಿಪ್ಲೋಮಾ, ಐಟಿಐ, ಎಂ.ಎಸ್(ಅಗ್ರಿಕಲ್ಚರ್), ಬಿ.ಫಾರ್ಮ, ಎಂ.ಫಾರ್ಮ, ಬಿ.ಎಸ್.ಸಿ.(ನರ್ಸಿಂಗ್), ಬಿ.ಎಸ್.ಸಿ(ಬಯೋಟೇಕ್), ಎಮ್.ಎಸ್.ಡಬ್ಲುö್ಯ, ಮುಂತಾದ ಕೋರ್ಸ್ಗಳಿಗೆ ಅಭ್ಯರ್ಥಿಗಳ ವ್ಯಾಸಂಗಕ್ಕೆ ಅನುಗುಣವಾಗಿ ಪ್ರತಿ ವರ್ಷ ರೂ. 10,000 ದಿಂದ 75,000 ವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ. ವ್ಯಾಸಂಗ ಪೂರ್ಣಗೊಳಿಸಿದ ನಂತರ ಶೇ. 2 ರ ಸೇವಾ ಶುಲ್ಕದೊಂದಿಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೈಬ್‌ಸೈಟ್   kmdc.kar.nic.in/arivu2  ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 22 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು. ವಾರ್ಷಿಕ ವರಮಾನ ರೂ. 6,00,000/- ಗಳ ಒಳಗಿರಬೇಕು. ಆನ್‌ಲೈನ್ ನಲ್ಲಿ ಸಲ್ಲಿಸುವ ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್ಲೋಡ ಮಾಡಿ ಪ್ರಿಂಟೌಟ್ ಪಡೆದು ದ್ವಿ ಪ್ರತಿಯೊಂದಿಗೆ ಅರ್ಜಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 08539-225008. ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರುತಿಳಿಸಿದ್ದಾರೆ

Please follow and like us:
error