ಅರುಣ ಜೇಟ್ಲಿ ನಿಧನ : ಬಿಜೆಪಿ ನಗರ ಮಂಡಲದಿಂದ ಶ್ರದ್ಧಾಂಜಲಿ ಸಭೆ

ಕೊಪ್ಪಳ,ಅ.೨೪: ಅನಾರೋಗ್ಯದಿಂದ ನಿಧನ ಹೊಂದಿರುವ ಕೇಂದ್ರದ ಮಾಜಿ ಮಂತ್ರಿಗಳಾದ ದಿವಂಗತ ಅರುಣ ಜೇಟ್ಲಿ ಅವರಿಗೆ ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ನಗರ ಮಂಡಲದಿಂದ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಮಾತನಾಡಿ 2002ರಲ್ಲಿ ಗುಜರಾತ್‌ನಲ್ಲಿ ದಂಗೆಗಳು ನಡೆದಾಗ, ಬಿಜೆಪಿಯಲ್ಲಿ ಮೋದಿಯವರನ್ನು ಸಮರ್ಥಿಸಿಕೊಂಡು ಮಾತನಾಡಿದ ಕ್ಷಣದಿಂದಲೇ ಮೋದಿ ಬಳಗ ದಲ್ಲಿ ಅವರ ಸ್ಥಾನ ಭದ್ರವಾಯಿತು. 2014ರ ಲೋಕಸಭೆ ಚುನಾವಣೆಯಲ್ಲಿ ಅಮೃತಸರದಿಂದ ಸ್ಪರ್ಧಿಸಿ ಸೋತರೂ, ಮೋದಿಯವರ ಸಂಪುಟದಲ್ಲಿ ಇವರಿಗೆ ಅವಕಾಶ ಕಲ್ಪಿಸಿದರು. ಆದುದರಿಂದ ಅವರನ್ನು ರಾಜ್ಯಸಭೆಗೆ ಆರಿಸಿ ತರಲಾಯಿತು. ಅರುಣ್‌ ಜೇಟ್ಲಿ ಒಂದೆಡೆ ಆರೆಸ್ಸೆಸ್‌ನ ಸಾಂಪ್ರದಾಯಿಕ ನಿಲುವುಗಳನ್ನೂ ಆಧುನಿಕ ಪರಿಭಾಷೆಯಲ್ಲಿ ಪ್ರತಿಪಾದಿಸಬಲ್ಲರಾಗಿದ್ದರು ಎಂದರು.
ಜಿ.ಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ ಮಾತನಾಡಿ ಪಂಜಾಬಿನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಜೇಟ್ಲಿಗೆ ಕೌಟುಂಬಿಕ ರಾಜಕೀಯ ಹಿನ್ನೆಲೆ ಇಲ್ಲದೇ ತಂದೆ ಲಾಯರ್‌, ತಾಯಿ ಸಾಮಾಜಿಕ ಹೋರಾಟಗಾರ್ತಿ. ಶ್ರೀರಾಮ್‌ ಕಾಲೇಜ್‌, ಸೇಂಟ್‌ ಕ್ಸೇವಿಯರ್‌ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲೇ ಶಿಕ್ಷಣ ಮುಗಿಸಿ, ದೆಹಲಿಯ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದುಕೊಂಡರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾಗುವ ಮೂಲಕ 70ರ ದಶಕದಲ್ಲಿ ರಾಜಕಾರಣಕ್ಕೆ ಧುಮುಕಿದವರು. ಇವರನ್ನು ಕಳೆದುಕೊಂಡ ದೇಶವು ಬಡವಾಗಿದೆ ಎಂದರು ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಹಾಲೇಶ ಕಂದಾರಿ, ಸುನೀಲ್ ಹೆಸರೂರು, ದೇವರಾಜ ಹಾಲಸಮುದ್ರ, ಸೋಮಣ್ಣ ಹಳ್ಳಿ, ಸರ್ವೇಶ್ ಬನ್ನಿಕೊಪ್ಪ, ಉಮೇಶ ಕುರುಡೇಕರ್, ರವಿಚಂದ್ರ ಮಾಲಿಪಾಟೀಲ, ಬಸವರಾಜ ಬೋವಿ, ಪ್ರವೀಣ ಇಟಗಿ, ಮಾರುತಿ ಆಪ್ಟಿ, ಗವಿರಾಜ ಗೊರವರ, ಜಿ.ಕೆ ಮಂಜುನಾಥ್, ಬಿ.ಜಿ ಗದುಗಿನಮಠ, ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಭಾಗವಹಿಸಿದ್ದರು.
Please follow and like us:
error