fbpx

ಅರಳಿಹಳ್ಳಿಯಲ್ಲಿ  ಡಿ.  ೨೭ ರಂದು ದಾಖಲೆ ರಕ್ತದಾನ

ಕೊಪ್ಪಳ : ಸಾಮಾನ್ಯವಾಗಿ ಸ್ವಾಮೀಜಿಗಳು ಜನ್ಮದಿನಾಚರಣೆಯನ್ನು ಆಚರಣೆ ಮಾಡಿಕೊಳ್ಳುವುದು ಅಪರೂಪ. ಮಾಡಿಕೊಂಡರೂ  ರೀತಿಯೇ ಬೇರೆ ಇರುತ್ತದೆ. ಆದರೆ ಕನಕಗಿರಿ ತಾಲೂಕಿನ  ಅರಳಿಹಳ್ಳಿಯ ಶ್ರೀ ಗವಿಸಿದ್ದೇಶ ತಾತ ಅವರು ಮಾತ್ರ ತಮ್ಮ ಜನ್ಮದಿನವನ್ನು  ಜೀವಪರ ಕಾರ್ಯದ ಮೂಲಕ ಆಚರಿಸಿಕೊಳ್ಳಲು ನಿ‘ರ್ರಿಸಿದ್ದಾರೆ. ಇದಕ್ಕಾಗಿ ಅರಳಿಹಳ್ಳಿ  ಗ್ರಾಮ ದಾಖಲೆ ರಕ್ತದಾನಕ್ಕೆ  ಸಜ್ಜಾಗಿದೆ.

ಅರಳ್ಳಿಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ‘ಕ್ತರು  ಶ್ರೀ ಗವಿಸಿದ್ಧೇಶ ತಾತನ  ೫೧ ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗುತ್ತಾರೆ.  ಆದರೆ, ತಾತನವರು ಇದಕ್ಕೆ ಸಮ್ಮತಿ ನೀಡುವುದಿಲ್ಲ. ನನ್ನ  ಜನ್ಮದಿನ ಆಚರಣೆ ಮಾಡುವುದಾದರೇ ಅದು ಜೀವಪರ ಕಾರ್ಯಕ್ಕಾಗಿ ಅನುಕೂಲವಾಗುವ ರೀತಿಯಲ್ಲಿ ಮಾಡುವುದಾದರೇ ಮಾಡಿ ಎನ್ನುತ್ತಾರೆ. ಆಗ ಈ ಕುರಿತು ವಾರಕಾಲ ಚರ್ಚೆಯಾಗುತ್ತದೆ. ಕೊನೆಗೆ  ತಾತನವರ ಅಪೇಕ್ಷೆಯಂತೆ  ರಕ್ತತುಲಾ‘ಾರ ಮಾಡುವ ಮೂಲಕ   ೫೧ ನೇ ಜನ್ಮದಿನ ಆಚರಣೆ ಮಾಡಲು ನಿ‘ರ್ರಿಸಲಾಗಿದೆ.

ಪರಿಣಾಮ ಈಗ ಅರಳಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ದಾಖಲೆ ರಕ್ತದಾನ ಸಿದ್ಧವಾಗಿದ್ದಾರೆ. ಈಗಾಗಲೇ ಸುಮಾರು ೨೫೦೦ ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದು, ರಕ್ತದಾನಕ್ಕೆ  ಶ್ರೀಗಳ ಕರೆಯ ಮೇರೆಗೆ ನಾ ಮುಂದು ತಾ ಮುಂದೆ ಎಂದು ನೋಂದಾಯಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಸುಮಾರು ೨೫೦೦ ಜನರು ನೋಂದಾಯಿಸಿಕೊಂಡಿದ್ದರೂ  ರಕ್ತಪರೀಕ್ಷೆಯ ನಂತರ ಸುಮಾರು ೧೫೦೦ ಜನರ ರಕ್ತವನ್ನಾದರೂ  ನೀಡಲು ಅರ್ಹರು ಇದ್ದೇ ಇರ‌್ತುತಾರೆ ಎನ್ನುವ ಆ‘ಾರದ ಮೇಲೆ  ರಕ್ತದಾನ ಶಿಬಿರವನ್ನು ‘ಾರತೀಯ ರೆಡ್ ಕ್ರಾಸ್ ಸಂಸ್ಥೆ ಆಯೋಜನೆ ಮಾಡಿದೆ.

ಅರಳಿಹಳ್ಳಿಯಲ್ಲಿ ಇದಕ್ಕಾಗಿ ಕಳೆದ ಹದಿನೈದು ದಿನಗಳಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಡಿ. ೨೭ ರಂದು ದಾಖಲೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಪಿ. ಸುನಿಲಕುಮಾರ ಅವರು ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿದರೇ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ‘ಾಗವಹಿಸಲಿದ್ದಾರೆ.

ಕೊಪ್ಪಳದಲ್ಲಿಯೇ ದಾಖಲೆ ಃ-

 ಗಂಗಾವತಿ ತಾಲೂಕಿನ ಸೂಳೆಕಲ್ ಗ್ರಾಮದ ಶ್ರೀ ‘ುವನೇಶ್ವರ ತಾತನವರು ಈ ಹಿಂದೆ  ತಮ್ಮ ಜನ್ಮದಿನಾಚರಣೆಯನ್ನು ರಕ್ತದಾನದ ಮೂಲಕ ಆಚರಣೆ ಮಾಡಿಕೊಂಡು ರಕ್ತತುಲಾ‘ಾರ ಮಾಡಿಕೊಂಡಿದ್ದರು. ಸುಮಾರು ೮೩೪ ‘ಕ್ತರು ರಕ್ತದಾನ ಮಾಡುವ ಮೂಲಕ  ರಾಜ್ಯದಲ್ಲಿಯೇ ಒಂದು ದಿನ ಮತ್ತು ಒಂದು ಸಂಸ್ಥೆಯ ದಾಖಲೆ ರಕ್ತದಾನ ಎನ್ನುವ  ಖ್ಯಾತಿಗೆ ಇದು ಪಾತ್ರವಾಗಿತ್ತು. ಅಲ್ಲದೆ  ಸ್ವಾಮೀಜಿಗಳು ಸಹ   ಈ ರೀತಿಯಾಗಿ ಸಮಾಜಮುಖಿ ಮತ್ತು  ಜೀವಪರ ಕಾರ್ಯ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದರು.

ಈಗ ಇದರ ಸಾಲಿಗೆ ಮತ್ತೊಂದು ಸೇರ್ಪಡೆ  ಅರಳಿಹಳ್ಳಿಯ ಶ್ರೀ ಗವಿಸಿದ್ದೇಶ ತಾತ ಮುಂದಾಗಿದ್ದಾರೆ. ತಮ್ಮ ಜನ್ಮದಿನವನ್ನು ರಕ್ತದಾನ  ಶಿಬಿರ ಏರ್ಪಡಿಸುವ ಮೂಲಕ ಪ್ರಸಂಶೆಗೆ ಪಾತ್ರವಾಗಿದ್ದಾರೆ.

ಹಗಲಿರುಳು ಶ್ರಮ ಃ-  ಶ್ರೀ ಗವಿಸಿದ್ದೇಶತಾತನವರು  ರಕ್ತದಾನ ಶಿಬಿರದ ಯಶಸ್ವಿಗೆ ಹಗಲು, ಇರಳು ಶ್ರಮಿಸುತ್ತಿದ್ದಾರೆ. ಸುಮಾರು ೬೦ ಕ್ಕೂ ಹೆಚ್ಚು  ಹಳ್ಳಿಗೆ ಸುತ್ತಾಕಿ ಜಾಗೃತಿಯನ್ನು ಮೂಡಿಸಿದ್ದಾರೆ. ರಕ್ತದಾನ ಶಿಬಿರಕ್ಕಾಗಿ ಹಗಲಿರಳು ಶಕ್ತಿಮೀರಿ ಶ್ರಮಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಹೇಗಿದೆ ವ್ಯವಸ್ಥೆ ಃ-

೧೦೦ ಹಾಸಿಗೆಯನ್ನು ಸಿದ್ಧ ಮಾಡಲಾಗಿದ್ದು,  ೮೦ ಹಾಸಿಗೆಯಲ್ಲಿ ಏಕಕಾಲಕ್ಕೆ  ರಕ್ತವನ್ನು ತೆಗೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ೨೦ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಮೀಸಲು ಇಡಲಾಗಿದೆ.

೨೦ ವೈದ್ಯರು, ೨೫ ಕ್ಕೂ ಹೆಚ್ಚು ಸ್ಟ್‌ಾ ನರ್ಸ್, ೬೦ ಟೆಕ್ನಿಶಿಯನ್ ಹಾಗೂ  ಎನ್‌ಸಿಸಿ ಹಾಗೂ ಜೂನಿಯರ್ ರೆಡ್ ಕ್ರಾಸ್ ನ ೪೦ ಕ್ಕೂ ಹೆಚ್ಚು ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

Please follow and like us:
error
error: Content is protected !!