fbpx

ಅಯೋಧ್ಯೆ ತೀರ್ಪು ಸಾಮರಸ್ಯದ ಸಂಕೇತ: ಸಿ ವಿ ಚಂದ್ರಶೇಖರ

ಕೊಪ್ಪಳ, ನ.೦೯: ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಅಯೋಧ್ಯೆ ರಾಮಮಂದಿರ ಜಮೀನು ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೇಶದ ಏಕತೆ ಮತ್ತು ಸಾಮರಸ್ಯದಿಂದ ಕುಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ ವಿ ಚಂದ್ರಶೇಖರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರ ಹಾಗು ಬಾಬ್ರಿ ಮಸಿದಿಯ ಜಮೀನಿನ ವ್ಯಾಜ್ಯವು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ  ಒಂದು ಬಹುದೊಡ್ಡ ಜಟಿಲವಾದದ್ದು ಆಗಿತ್ತು, ಐದಾರು ದಶಕಗಳ ಕಾಲ ನ್ಯಾಯವಾದಿಗಳ ವಾದ ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕೊನೆಗೂ 2.77 ಎಕರೆ ಜಮೀನು ರಾಮ ಜನ್ಮ ಭೂಮಿ ಅಲ್ಲಯೇ ರಾಮ ಮಂದಿರ ನಿರ್ಮಾಣವಾಗಲಿ ಎಂಬ ತಿರ್ಪು ಬಂದಿರುವುದು ಅತ್ಯಂತ ಸಂತೋಷಕರ ವಿಷಯ ಹಾಗು ಸತ್ಯಕ್ಕೆ ಸಂದ ಜಯ ಎಂದೇ ಹೆಳಬಹುದಾಗಿದೆ ಅದರ ಜೊತೆಗೆ ಭಾರತದಲ್ಲಿ ಸಹೋದರತ್ವದಿಂದ ಬಾಳುತ್ತಿರುವ ಮುಸ್ಲಿಂ ಸಮುದಾಯದವರಿಗೆ ಮಸೀದಿ ನಿರ್ಮಿಸಲು  ಅಯೋಧ್ಯೆಯಲ್ಲಿಯೇ ಪ್ರಮುಖ ಸ್ಥಳದಲ್ಲಿ ಐದು ಎಕರೆ ಜಮೀನನ್ನು ಸರಕಾರ ಮಂಜುರು ಮಾಡಬೇಕೆಂಬ ಸುಪ್ರೀಂ ಕೋರ್ಟ್ ನ ತಿರ್ಪು ಸ್ವಾಗತಾರ್ಹ ,ಇಂದಿನ ಮಹತ್ವದ ತೀರ್ಪಿನ ಮೂಲಕ ದೇಶದ ಒಂದು ಬಹು ದೊಡ್ಡ ಧಾರ್ಮಿಕ ಮತ್ತು ಭಾವನಾತ್ಮಕ ಸಮಸ್ಯೆ ಬಗೆಹರಿದಂತಾಗಿದೆ ಎಂದು ಸಿ ವಿ ಚಂದ್ರಶೇಖರ ಅಭಿಪ್ರಾಯಪಟ್ಟಿದ್ದಾರೆಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error
error: Content is protected !!