ಅಭಿವೃದ್ಧಿ ಕುಂಠಿತಕ್ಕೆ ತಂಬಾಕು ಸೇವನೆ ಒಂದು ಬಹುರೂಪ ಸಮಸ್ಯೆ : ಶಿವಾನಂದ ಪೂಜಾರ


ಕೊಪ್ಪಳ ಜ : ರಾಜ್ಯದ ಅಭಿವೃದ್ಧಿ ಕುಂಠಿತಕ್ಕೆ ತಂಬಾಕು ಸೇವನೆ ಒಂದು ಬಹುರೂಪ ಸಮಸ್ಯೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಲಯ ಹಾಗೂ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜ ದದೇಗಲ್ ಇವರ ಸಹಯೋಗದಲ್ಲಿ ”ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನಿಯಂತ್ರಣದ ಮಾರ್ಗೋಪಾಯ” ಕುರಿತು ದದೇಗಲ್ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಭಾಷಣ ಸ್ಪರ್ಧೇ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಸರಕಾರದ ಆದೇಶದಂತೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಗತ್ತಿನಲ್ಲಿ ಜನರ ಸಾವಿಗೆ ತಂಬಾಕು ಸೇವನೆ ಕ್ಯಾನ್ಸರ್ ಖಾಯಿಲೆ ಎರಡನೇ ಅತಿದೊಡ್ಡ ಕಾರಣವಾಗಿದೆ. ತಂಬಾಕು ಸೇವನೆ ಕ್ಯಾನ್ಸರ್ ರೋಗಕ್ಕೆ ಕಾರಣ. ಶೇ.೪೦ ರಷ್ಟು ಕ್ಯಾನ್ಸರ್ ರೋಗಕ್ಕೆ ಕಾರಣ ತಂಬಾಕಿನ ಬಳಕೆಯಿಂದಾಗಿದೆ. ತಂಬಾಕಿನ ಸಮಸ್ಯೆ ಜನರ ಆರೋಗ್ಯ ಸಮಸ್ಯೆಯಾಗಿದೆ. ಹದಿ-ಹರೆಯದವರು ಹಾಗೂ ಮಹಿಳೆಯರು ಹೆಚ್ಚು ಹೆಚ್ಚು ತಂಬಾಕು ಸೇವನೆ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ”ಪಾರ್ಶ್ವವಾಯ್ಯು, ಕ್ಯಾನ್ಸರ್, ಶ್ವಾಶಕೋಶ ತೊಂದರೆ, ಹೃದಯಘಾತ, ಕುರುಡುತನ, ಸತ್ತು ಹುಟ್ಟುವ ಮಕ್ಕಳ ಜನನ, ಬಾಯಿ ಕ್ಯಾನ್ಸರ್, ಹೆಣ್ಣುಮಕ್ಕಳಲ್ಲಿ ಫಲವತ್ತತೆ ಕಡಿಮೆ, ಗರ್ಭ ಕೋಶದ ಕ್ಯಾನ್ಸರ್, ಕಡಿಮೆ ತೂಕದ ಮಗು ಜನನ” ಈ ರೀತಿಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರತಿ ವರ್ಷ ವಿಶ್ವದಲ್ಲಿ ೫೫ ಲಕ್ಷಕ್ಕೂ ಹೆಚ್ಚು ರೋಗಿಗಳು ತಂಬಾಕು ಸೇವನೆಯಿಂದ ಸಾವನ್ನುಪ್ಪುತ್ತಿದ್ದಾರೆ. ಅದೇ ರೀತಿ ಭಾರತದಲ್ಲಿ ಪ್ರತಿವರ್ಷ ೧೦ ಲಕ್ಷ ಜನ ತಂಬಾಕು ಸೇವೆನೆಯಿಂದ ಮರಣ ಹೊಂದುತ್ತಾರೆ. ಇಂದಿನ ಯುವಕರು ಈ ದೇಶದ ಬಾವಿ ಪ್ರಜೆಗಳಾಗಿದ್ದು, ಯಾರೂ ತಂಬಾಕು ಸೇವನೆಯ ದುಶ್ಚಟಕ್ಕೆ ಬಲಿಯಾಗದೇ ತಮ್ಮ ಆರೋಗ್ಯವನ್ನು ತಾವು ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ, ೧೮ ವರ್ಷದೊಳಗಿನ ಮಕ್ಕಳಿಗೆ ಮಾರಾಟ ಮಾಡಿದರೆ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯದ ಎಚ್ಚರಿಕೆ ಸಂದೇಶಗಳಲ್ಲಿದಿದ್ದರೆ ೨೦೦೩ರ ಸಿ.ಓ.ಪಿ.ಟಿ.ಎ. ಕಾಯ್ದೆ ಪ್ರಕಾರ ರೂ.೨೦೦ ರಿಂದ ೫೦೦೦ ರವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಾದಿರಾಜ ಮಠದ್ ಅವರು ವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಕಾಲೇಜಿನ ಸಹ ಉಪನ್ಯಾಸಕರಾದ ಸೋಮಣ್ಣ, ಮಾರ್ಕಂಡೇಶ್ವರ ಹಾಗೂ ಮೃತ್ಯಂಜಯ್ಯ, ಹಿ.ಆ.ಸ.ಮ. ಸರೋಜ ಬಡಿಗೇರ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೇಯಲ್ಲಿ ಪ್ರಥಮ ವೆಂಕಟೇಶ ಕೆ., ದ್ವೀತಿಯ ತಾಜುದ್ದೀನ್ ಹಾಗೂ ಪೂರ್ಣಿಮ ಎನ್.ಪಿ. ತೃತೀಯ ಸ್ಥಾನವನ್ನು ಪಡೆದು ಬಹುಮಾನವನ್ನು ಪಡೆದುಕೊಂಡರು.

Please follow and like us:
error