ಅಪ್ಪಯ್ಯಜ್ಜ ಅವರ ನೆನಪಿಗೆ ಮೂರ್ತಿ ಸ್ಥಾಪನೆಯಾಗಲಿ – ಗೊಂಡಬಾಳ


ಕೊಪ್ಪಳ,  ಕೊಪ್ಪಳದ ಅಶೋಕ ವೃತ್ತದಲ್ಲಿ ಈಚೆಗೆ ನಿಧನರಾದ ಹಿರೇಮನ್ನಾಪೂರದ ಶ್ರೀ ಅಪ್ಪಯ್ಯಜ್ಜ ಸ್ವಾಮಿಗಳ ಶ್ರದ್ಧಾಂಜಲಿ ನಡೆಯಿತು. ಈ ವೇಳೆ ಅಪ್ಪಯ್ಯಜ್ಜ ಅವರ ಸಾಧನೆ ಮತ್ತು ಸಮಾಜ ಮುಖಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಯಿತು.
ಅಪ್ಪಯ್ಯಜ್ಜ ವಾಲ್ಮೀಕಿ ಗುರುಪೀಠವಾಗುವ ಮೊದಲೇ ಸಮಾಜಕ್ಕೆ ಸೇವೆ ಆರಂಭಿಸಿದ್ದರು, ಶಾಲೆ ಮತ್ತು ಆಶ್ರಮ ತೆರೆದು ಭಿಕ್ಞಾಟನೆ ಮತ್ತು ಸಹಾಯದ ಮೂಲಕ ಎರಡನ್ನೂ ನಡೆಸಿದರು. ಅವರ ನೆನಪು ಸದಾ ಉಳಿಯುವಂತೆ ಮಾಡಲು ಅವರ ಮೂರ್ತಿಯನ್ನು ನಗರದ ನೂತನ ವಾಲ್ಮೀಕಿ ಭವನದ ಹತ್ತಿರ ಸ್ಥಾಪಿಸಬೇಕು ಎಂದು ಯುವ ಮುಖಂಡ ಮಂಜುನಾಥ ಜಿ. ಗೊಂಡಬಾಳ ಅವರು ಅಭಿಪ್ರಾಯಪಟ್ಟರು.
ಈ ವೇಳೆ ಸಮಾಜದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಗವಿಸಿದ್ದಪ್ಪ ಮುತ್ತಾಳ, ತಾಲೂಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಶರಣಪ್ಪ ನಾಯಕ್, ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ, ಆಂಜನೇಯ, ಪ್ರಶಾಂತ ನಾಯಕ್, ರುಕ್ರಮಣ್ಣ ಶಾವಿ, ಶ್ರೀನಿವಾಸ ಪೂಜಾರ, ರಾಘವೇಂದ್ರ, ಯಮನೂರಪ್ಪ, ಗೀತಾ ಮುತ್ತಾಳ ಇತರರು ಇದ್ದರು.

Please follow and like us:
error